ADVERTISEMENT
Thursday, November 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅನ್ನಭಾಗ್ಯಕ್ಕಿಲ್ಲ ಸರ್ವರ್ ಗ್ಯಾರಂಟಿ; ಬಡವರ ಹೊಟ್ಟೆಗೆ ಹೊಡೆಯುತ್ತಿರುವ ಕಾಂಗ್ರೆಸ್‌ ಸರ್ಕಾರ: ಆರ್‌. ಅಶೋಕ್ ವಾಗ್ದಾಳಿ

admin by admin
November 26, 2026
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡ್ಡಿ; ತಿಂಗಳು ಮುಗಿಯುತ್ತ ಬಂದರೂ ಶೇ.50ರಷ್ಟು ರೇಷನ್ ವಿತರಣೆ ಬಾಕಿ ಎಂದು ಆರೋಪ

ಬೆಂಗಳೂರು: ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲೂ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Related posts

r-ashoka-hails-first-win-to-save-lalbagh-congress-govt-backs-down-hebbal-silk-board-tunnel-road

ಜನಾಕ್ರೋಶಕ್ಕೆ ಮಣಿದ ಕಾಂಗ್ರೆಸ್‌ ಸರ್ಕಾರ; ಲಾಲ್‌ಬಾಗ್‌ ಉಳಿಸಲು ಹೋರಾಟಕ್ಕೆ ಮೊದಲ ಜಯ: ಆರ್‌. ಅಶೋಕ್

November 26, 2026
r-ashoka-slams-cm-dk-shivakumar-japan-tour-amid-drinking-water-crisis-drought-karnataka

ಹಳ್ಳಿಗಳಲ್ಲಿ ಜಲಸಂಕಷ್ಟ, ಸಿಎಂಗೆ ಜಪಾನ್ ಸುತ್ತುವ ಸಂಭ್ರಮ: ಆರ್‌. ಅಶೋಕ್ ವಾಗ್ದಾಳಿ

November 26, 2026

ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆ ವ್ಯವಸ್ಥೆ ಹದಗೆಟ್ಟಿದ್ದು, ತಿಂಗಳು ಮುಗಿಯುತ್ತ ಬಂದರೂ ಶೇ.50ರಷ್ಟು ಪಡಿತರ ವಿತರಣೆಯಾಗದೆ ಬಾಕಿ ಉಳಿದಿದೆ. ಇದರಿಂದ ಬಡವರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬರಗಾಲ ಮತ್ತು ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಬಡಜನರಿಗೆ ಸರ್ಕಾರದ ಆಡಳಿತ ವೈಫಲ್ಯ ಮತ್ತಷ್ಟು ತೊಂದರೆ ಉಂಟುಮಾಡಿದೆ. ಕೂಲಿ ಕೆಲಸ ಬಿಟ್ಟು ಪಡಿತರ ಪಡೆಯಲು ಬರುವ ಬಡವರು, ವೃದ್ಧರು ಹಾಗೂ ಅಂಗವಿಕಲರು ಬೆಳಗ್ಗೆಯಿಂದ ಸಂಜೆಯವರೆಗೆ ಬಯೋಮೆಟ್ರಿಕ್‌ ಪ್ರಕ್ರಿಯೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರಿಗೆ ಬಡವರ ಈ ಸಂಕಷ್ಟ ಕಾಣಿಸುತ್ತಿಲ್ಲವೇ ಎಂದು ಆರ್‌. ಅಶೋಕ್ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಅಕ್ಕಿ ಒದಗಿಸಲಾಗುತ್ತಿದ್ದರೂ, ಅದನ್ನು ಫಲಾನುಭವಿಗಳಿಗೆ ತಲುಪಿಸುವ ಕನಿಷ್ಠ ತಾಂತ್ರಿಕ ವ್ಯವಸ್ಥೆಯನ್ನು ನಿರ್ವಹಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ದಿನವೊಂದಕ್ಕೆ ಕೇವಲ 7ರಿಂದ 8 ಪಡಿತರ ಚೀಟಿದಾರರ ಬೆರಳಚ್ಚು ಮಾತ್ರ ಸ್ವೀಕಾರವಾಗುತ್ತಿದೆ ಎಂಬ ದೂರುಗಳು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತವೆ ಎಂದು ಟೀಕಿಸಿದ್ದಾರೆ.

ಪ್ರತಿ ತಿಂಗಳೂ ಸರ್ವರ್ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಬಡವರ ಪಡಿತರ ವಿತರಣೆಗೆ ಅಗತ್ಯವಾದ ತಾಂತ್ರಿಕ ವ್ಯವಸ್ಥೆಯನ್ನು ಸುಧಾರಿಸುವ ಬದಲು ಸಚಿವರು ಇತರ ವಿಚಾರಗಳ ಕುರಿತು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಹಾಗೂ ಆಹಾರ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಸರ್ವರ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು. ವಿತರಣೆಯಾಗದೆ ಬಾಕಿ ಉಳಿದಿರುವ ಎಲ್ಲ ಫಲಾನುಭವಿಗಳಿಗೆ ತಕ್ಷಣವೇ ಪಡಿತರ ತಲುಪಿಸಬೇಕು. ಬಡವರ ಒಂದು ಹೊತ್ತಿನ ಊಟದ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಬೀದಿಗಿಳಿದು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಆರ್‌. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ShareTweetSendShare
Join us on:

Related Posts

r-ashoka-hails-first-win-to-save-lalbagh-congress-govt-backs-down-hebbal-silk-board-tunnel-road

ಜನಾಕ್ರೋಶಕ್ಕೆ ಮಣಿದ ಕಾಂಗ್ರೆಸ್‌ ಸರ್ಕಾರ; ಲಾಲ್‌ಬಾಗ್‌ ಉಳಿಸಲು ಹೋರಾಟಕ್ಕೆ ಮೊದಲ ಜಯ: ಆರ್‌. ಅಶೋಕ್

by admin
November 26, 2026
0

ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಯೋಜನೆಗೆ ಲಾಲ್‌ಬಾಗ್‌ನ 6 ಎಕರೆ ಜಾಗ ಬಳಕೆ ಪ್ರಸ್ತಾವನೆಗೆ ವಿರೋಧ; ಅಲೈನ್‌ಮೆಂಟ್ ಬದಲಾವಣೆ ನಿರ್ಧಾರಕ್ಕೆ ಪ್ರತಿಕ್ರಿಯೆ ಬೆಂಗಳೂರು: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ...

r-ashoka-slams-cm-dk-shivakumar-japan-tour-amid-drinking-water-crisis-drought-karnataka

ಹಳ್ಳಿಗಳಲ್ಲಿ ಜಲಸಂಕಷ್ಟ, ಸಿಎಂಗೆ ಜಪಾನ್ ಸುತ್ತುವ ಸಂಭ್ರಮ: ಆರ್‌. ಅಶೋಕ್ ವಾಗ್ದಾಳಿ

by admin
November 26, 2026
0

226 ತಾಲೂಕುಗಳಲ್ಲಿ ಬರದ ಛಾಯೆ, 861 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಜನರ ಸಂಕಷ್ಟ ಬದಿಗಿಟ್ಟು ವಿದೇಶ ಪ್ರವಾಸಕ್ಕೆ ಆದ್ಯತೆ ಏಕೆ? ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗಗಳಲ್ಲಿ...

r-ashoka-slams-congress-govt-over-cwma-order-to-release-cauvery-water-to-tamil-nadu

ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತ ಕಾಯುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲ: ಆರ್‌. ಅಶೋಕ್ ವಾಗ್ದಾಳಿ

by admin
November 26, 2026
0

ತಮಿಳುನಾಡಿಗೆ 15 ದಿನ ನಿತ್ಯ 2,000 ಕ್ಯೂಸೆಕ್ ನೀರು ಹರಿಸಲು CWMA ಸೂಚನೆ; ರಾಜ್ಯದ ವಾಸ್ತವ ಪರಿಸ್ಥಿತಿ ಮಂಡಿಸುವಲ್ಲಿ ಸರ್ಕಾರ ಎಡವಿದೆ ಎಂದು ಟೀಕೆ ಬೆಂಗಳೂರು: ರಾಜ್ಯದಲ್ಲಿ...

criticism-over-minister-ut-khader-statement-on-asha-workers-protest-demand-for-resignation-apology

ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ ಎನ್ನುವ ಖಾದರ್‌ ಅವರೇ, ರಾಜೀನಾಮೆ ಕೊಟ್ಟುಬಿಡಿ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

by admin
November 26, 2026
0

ಆಶಾ ಕಾರ್ಯಕರ್ತೆಯರ ಶ್ರಮವನ್ನು ಹಗುರವಾಗಿ ಕಂಡ ಸಚಿವರ ಹೇಳಿಕೆಗೆ ಆಕ್ರೋಶ; ಕ್ಷಮೆಯಾಚಿಸಿ, ಬೇಡಿಕೆ ಈಡೇರಿಸುವಂತೆ ಆಗ್ರಹ ಬೆಂಗಳೂರು: ಆಶಾ ಕಾರ್ಯಕರ್ತೆಯರ ಶ್ರಮ, ತ್ಯಾಗ ಮತ್ತು ಹೋರಾಟವನ್ನು ಹಗುರವಾಗಿ...

r-ashoka-slams-congress-govt-over-remarks-on-asha-workers-bjp-jds-protest-december-2-session

ಆಶಾ ಕಾರ್ಯಕರ್ತೆಯರಿಗೆ ಅವಮಾನಿಸುವ ದುರಹಂಕಾರದ ಮಾತುಗಳು: ಇದು ಜನರಿಗೆ ವಂಚನೆ ಮಾಡಿದ ಕಾಂಗ್ರೆಸ್ ಸರ್ಕಾರ: ಪ್ರತಿಪಕ್ಷ ನಾಯಕ ಆರ್.ಅಶೋಕ

by admin
November 26, 2026
0

ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸುವ ಯೋಗ್ಯತೆ ಇಲ್ಲದಿದ್ದರೆ ಏಕೆ ಘೋಷಣೆ ಮಾಡಿದ್ದೀರಿ? ಡಿಸೆಂಬರ್ 2ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ ಪರ ಬಿಜೆಪಿ-ಜೆಡಿಎಸ್ ಹೋರಾಟ ಬೆಂಗಳೂರು, ಆಶಾ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram