ಅಯೋಧ್ಯೆಯ ರಾಮ, ಸೀತಾ ಮತ್ತು ಲಕ್ಷ್ಮಣರ ಮೂಲ ವಿಗ್ರಹ ಕರ್ನಾಟಕದ ಹರಿಹರದಲ್ಲಿದೆ ?
ಹರಿಹರ, ಅಗಸ್ಟ್ 7: ರಾಮಾಯಣ ಕಾಲಕ್ಕೆ ಸಂಬಂಧಿಸಿದ ಹಲವಾರು ದಂತಕಥೆಗಳಿಗೆ ಹೆಸರುವಾಸಿಯಾದ ಕರ್ನಾಟಕವು ಈಗ ಮೊಘಲ್ ದೊರೆ ಬಾಬರ್‌ನಿಂದ ನಾಶವಾದ ಅಯೋಧ್ಯೆಯಲ್ಲಿರುವ ರಾಮ ಮಂದಿರದ ಮೂಲ ದೇವತೆಗಳಿಗೆ ನೆಲೆಯಾಗಿದೆ ಎಂಬ ಚರ್ಚೆಯ ಕೇಂದ್ರದಲ್ಲಿದೆ. ಅಯೋಧ್ಯ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ರಾಮ, ಸೀತಾ ಮತ್ತು ಲಕ್ಷ್ಮಣರ ಮೂಲ ವಿಗ್ರಹಗಳೆಂದು ಹೇಳಿಕೊಳ್ಳುತ್ತಿರುವ ಈ ವಿಗ್ರಹಗಳನ್ನು ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಸದ್ಗುರು ಸಮರತ ನಾರಾಯಣ ಮಹಾರಾಜ್ ಆಶ್ರಮದಲ್ಲಿ ಪೂಜಿಸಲಾಗುತ್ತಿದೆ.

ವಿಗ್ರಹಗಳ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಹಲವಾರು ಪೋಸ್ಟ್‌ಗಳು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಪೂರ್ಣಗೊಳಿಸಿದ ನಂತರ ವಿಗ್ರಹಗಳನ್ನು ಪುನಃ ಸ್ಥಾಪಿಸುವ ಬೇಡಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವಿಷಯವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದಾಗ, ಕೇಂದ್ರ ಗೃಹ ಸಚಿವಾಲಯದ ಕೇಂದ್ರ ತಂಡ, ಗುಪ್ತಚರ ಅಧಿಕಾರಿಗಳು ಮತ್ತು ಭಾರತೀಯ ಪುರಾತತ್ವ ಸರ್ವೇ (ಎಎಸ್ಐ) ಅಧಿಕಾರಿಗಳು ಕೂಡ ದೇವಾಲಯಕ್ಕೆ ಭೇಟಿ ನೀಡಿ ವಿಗ್ರಹಗಳು ಮತ್ತು ಅವುಗಳ ಇತಿಹಾಸದ ವಿವರಗಳನ್ನು ತೆಗೆದುಕೊಂಡಿದ್ದರು.
ವಿಗ್ರಹಗಳ ಇತಿಹಾಸವನ್ನು ಪತ್ತೆಹಚ್ಚಲು ಡಿ.ಎಚ್ ಆಶ್ರಮವನ್ನು ತಲುಪಿ ಹರಿಹರ ಆಶ್ರಮದ ಉಸ್ತುವಾರಿ ಮತ್ತು ನಾರಾಯಣ ಮಹಾರಾಜರ ಅನುಯಾಯಿ ರಾಮನೊಂದಿಗೆ ಮಾತನಾಡಿದರು. ವಿಗ್ರಹಗಳು ಮಧ್ಯಕಾಲೀನ ಯುಗಕ್ಕೆ ಸೇರಿದವು ಎಂದು ಹೇಳಿಕೊಂಡ ರಾಮ, ಇದನ್ನು ನಮ್ಮ ಗುರುಗಳು ಪ್ರತಿಷ್ಟಾಪನೆ ಮಾಡಿದ್ದಾರೆ ಮತ್ತು ಪ್ರತಿಮೆಯ ಹಿಂಭಾಗದಲ್ಲಿ ಅವು ಅಯೋಧ್ಯೆಯ ಮೂಲ ದೇವತೆಗಳೆಂದು ಕೆತ್ತಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ಅಧಿಕಾರಿಗಳ ನಿಯೋಗ ದೇವಾಲಯಕ್ಕೆ ಭೇಟಿ ನೀಡಿತ್ತು. ದಾವಣಗೆರೆ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ವಿವರಗಳನ್ನು ಸಂಗ್ರಹಿಸಿದರು. ಆದರೆ ಇಲ್ಲಿಯವರೆಗೆ, ವಿಗ್ರಹಗಳ ಇತಿಹಾಸದ ಬಗ್ಗೆ ಯಾವುದೇ ವರದಿಯನ್ನು ಬಹಿರಂಗಪಡಿಸಿಲ್ಲ.

ವಿಗ್ರಹಗಳನ್ನು ಸ್ವಾಮಿ ಏಕನಾಥ್ ಮಹಾರಾಜರಿಗೆ ಅಂದಿನ ರಾಮ ಮಂದಿರದ ಉಸ್ತುವಾರಿ ಪಂಡಿತ್ ಶ್ಯಾಮಾನಂದ್ ಮಹಾರಾಜ್ ಅವರು ಬಾಬರ್ ದೇವಾಲಯವನ್ನು ಅಪವಿತ್ರಗೊಳಿಸಿದ ಸಮಯದಲ್ಲಿ ಹಸ್ತಾಂತರಿಸಿದರು ಎಂದು ಆನ್‌ಲೈನ್ ಪೋಸ್ಟ್‌ಗಳು ಹೇಳಿಕೊಂಡಿವೆ.
ನಂತರ ಅದನ್ನು ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ ರಾಮದಾಸ್‌ಗೆ ಹಸ್ತಾಂತರಿಸಲಾಯಿತು. ರಾಮದಾಸ್ ರ 11 ನೇ ಶಿಷ್ಯ ಸ್ವಾಮಿ ನಾರಾಯಣ ಮಹಾರಾಜ್ ಅವರು 90 ರ ದಶಕದ ಆರಂಭದಲ್ಲಿ ಬ್ರಿಟಿಷ್ ಯುಗದಲ್ಲಿ ವಿಗ್ರಹಗಳನ್ನು ಹರಿಹರಕ್ಕೆ ತಂದು ಹರಿಹರದ ತುಂಗಭದ್ರಾ ತೀರದಲ್ಲಿ ಸ್ಥಾಪಿಸಿದರು ಎಂದು ಹೇಳಲಾಗಿದೆ.







