ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಹಿರೇಮದ್ದು ಅಶ್ವಗಂಧ ಎನ್ನುವ ಉತ್ಕೃಷ್ಟ ದಿವ್ಯೌಷಧಿಯ ಕುರಿತು ನಿಮಗೆಷ್ಟು ಗೊತ್ತು?

admin by admin
August 14, 2020
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ಹಿರೇಮದ್ದು ಅಶ್ವಗಂಧ ಎನ್ನುವ ಉತ್ಕೃಷ್ಟ ದಿವ್ಯೌಷಧಿಯ ಕುರಿತು ನಿಮಗೆಷ್ಟು ಗೊತ್ತು?

ಒಂದು ಚಹಾದ ಜಾಹೀರಾತಿನಲ್ಲಿ ಅಶ್ವಗಂಧದ ಪ್ರಸ್ತಾಪ ಬರುವುದನ್ನು ಗಮನಿಸಿರಬಹುದು. ನಮ್ಮ ಹಿರಿಯರಿಂದ ಹಿರೇಮದ್ದು ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ, ವಾತ ಸಂಬಂಧಿ ದೋಷಗಳನ್ನು ನಿವಾರಿಸುತ್ತದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸಬಲ್ಲ ಶಕ್ತಿ ಇದೆ. ಹಾವು ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇರಸದೊಂದಿಗೆ ಹಚ್ಚಿದರೆ ಬೇಗ ವಿಷವಿಳಿಯುತ್ತದೆ. ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಎಂಬೆಲ್ಲಾ ಹೆಸರುಗಳಿವೆ. ಇದರ ಬೇರಿನಿಂದ ಕುದುರೆ ಮೂತ್ರದ ವಾಸನೆ ಹೊರಡುತ್ತದೆ ಹಾಗೂ ಬೇರನ್ನು ಸ್ವಚ್ಛಗೊಳಿಸಿ ಪುಡಿಮಾಡಿ ಸೇವಿಸಿದರೆ ಕುದುರೆಯ ಶಕ್ತಿ, ಬಲ, ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂದು ಕರೆಯುತ್ತಾರೆ. ಇದಕ್ಕೆ ಇಂಗ್ಲೀಷ್‍ನಲ್ಲಿ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್. ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಪಂಜಾಬ್, ಮಹಾರಾಷ್ಟ್ರ, ವಾಯುವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು. ಸೋಲನೇಸಿ ಕುಟುಂಬಕ್ಕೆ ಸೇರಿದ ಅಶ್ವಗಂಧದ ವೈಜ್ಞಾನಿಕ ಹೆಸರು ವಿತಾಸಿಯಾ ಸಾಮ್ನಿಫೆರ.

Related posts

What should the God's lamp look like inside the house?

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

February 15, 2026
ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

February 15, 2026

ಸುಮಾರು 1 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮೂಲಿಕೆ ಆಫ್ರಿಕಾ, ಮೆಡಿಟೇರಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ. ಇದರ ಎಲೆಗಳು ಆಡುಸೋಗೆಯ ಎಲೆಗಳನ್ನು ಹೋಲುವವು. ಆದರೆ ಅದಕ್ಕಿಂತ ಚಿಕ್ಕವು ಮತ್ತು ಉದ್ದವಿರುವುದಿಲ್ಲ. ಕಹಿರುಚಿ ಹೊಂದಿರುವ ಇದರ ಎಲೆಗಳು ಬೂದು ಬಣ್ಣದ ರೋಮಗಳಿಂದ ಕೂಡಿರುತ್ತವೆ. ಅಶ್ವಗಂಧವು ಹಿಂಗಾರಿನಲ್ಲಿ ಬೆಳೆಯಬಹುದಾದ ಬೆಳೆ. ಈ ಬೆಳೆಗೆ ಶುಷ್ಕ ವಾತಾವರಣವಿದ್ದರೂ ನಡೆಯುತ್ತದೆ. ರಾಗಿಯನ್ನು ಬಿತ್ತುವಂತೆ ಈ ಬೆಳೆಯ ಬೀಜವನ್ನು ಚೆಲ್ಲಿ ಬಿತ್ತನೆ ಮಾಡಬಹುದು.

ಅಶ್ವಗಂಧದ ಎಲೆ, ಹಣ್ಣು, ಬೇರು ಚಿಕಿತ್ಸೆಗೆ ಉಪಯುಕ್ತವಾಗಿವೆ. ಅಶ್ವಗಂಧದ ಬೇರಿನಲ್ಲಿರುವ ಸೋಮ್ನಿಫೆರಸ್ ಎಂಬ ಕ್ಷಾರವು ನಿದ್ದೆ ಬರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ರಕ್ತ ಶುದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಠಿಯನ್ನು ಕೊಡುತ್ತದೆ. ನಿಶ್ಯಕ್ತಿಯನ್ನು ನಿವಾರಿಸುವ ಶಕ್ತಿಯೂ ಇದಕ್ಕಿದೆ. ಇದರ ಸೇವನೆಯಿಂದ ಚಂಚಲತೆ ಮತ್ತು ಗಾಬರಿ ದೂರವಾಗುತ್ತದೆ. ಮಕ್ಕಳಿಗೆ ಹೆಚ್ಚಿನ ಪುಷ್ಠಿಯನ್ನು ಇದು ನೀಡುತ್ತದೆ. ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ ಮತ್ತು ಯೌವ್ವನವನ್ನು ಈ ಅಶ್ವಗಂಧ ನೀಡುತ್ತದೆ ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುತ್ತದೆ. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟಿದರೆ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಅಶ್ವಗಂಧ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ದೃಷ್ಟಿದೋಷಗಳ ನಿವಾರಣೆಯಾಗುತ್ತದೆ. ಶುದ್ಧಿ ಮಾಡಿದ ಅಶ್ವಗಂಧ ಚೂರ್ಣ, ಲೋದ್ರಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆ ಚೂರ್ಣ ಸಮ ಭಾಗ ಸೇರಿಸಿ ಸೇವಿಸಬೇಕು. ನಂತರ ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲು ಒಂದು ಲೋಟ ಸೇವಿಸಬೇಕು. ಈ ರೀತಿ ದಿನಕ್ಕೆ ಬೆಳಗ್ಗೆ, ಸಾಯಂಕಾಲ ಎರಡು ಬಾರಿ ಸೇವಿಸುವುದರಿಂದ ಮುಟ್ಟಿನ ದೋಷಗಳ ನಿವಾರಣೆಯಾಗುತ್ತದೆ.

30ಗ್ರಾಂ ಅಮೃತಬಳ್ಳಿಯ ಸತ್ವಕ್ಕೆ 40 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸೇರಿಸಿಟ್ಟುಕೊಂಡು, ಒಂದು ಹೊತ್ತಿಗೆ ಎರಡೂವರೆ ಗ್ರಾಂನಷ್ಟು ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿದರೆ ತುಂಬಾದಿನಗಳಿಂದ ಗುಣವಾಗದ ಜ್ವರವೂ ಗುಣವಾಗುವುದು. ಇದರ ಬೇರು ಮತ್ತು ಒಣಶುಂಠಿಯ ನಯವಾದ ಚೂರ್ಣ ಮತ್ತು ಕಲ್ಲುಸಕ್ಕರೆ ಸೇರಿಸಿ ಬೆಳಿಗ್ಗೆ ಸಂಜೆ ಸೇವಿಸಿದರೆ ವಾತದ ಸಮಸ್ಯೆ ದೂರಾಗುತ್ತದೆ. ಅಶ್ವಗಂಧದ ನಯವಾದ ಪುಡಿಗೆ ಕೆಂಪು ಕಲ್ಲುಸಕ್ಕರೆ ಪುಡಿಯನ್ನು ಒಂದು ಬಟ್ಟಲು ಬಿಸಿ ಹಾಲಿನಲ್ಲಿ ಸೇರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದರಿದ ಬೆನ್ನುನೋವು ಮಾಯವಾಗುತ್ತದೆ. ಜೊತೆಗೆ ಪ್ರತಿದಿನ ಎರಡು-ಮೂರು ಬಾರಿ ಅಶ್ವಗಂಧದ ಎಲೆಗಳಿಗೆ ಎಳ್ಳೆಣ್ಣೆ ಸವರಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ.

ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು
*

Tags: #Ayurvedic scholars#medicin#saakshatv.comashwagandhaAyurvedicgujarathkarnatakaMadhya Pradesh
ShareTweetSendShare
Join us on:

Related Posts

What should the God's lamp look like inside the house?

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

by admin
February 15, 2026
0

ಮನೆಯೊಳಗೆ ದೇವರ ದೀಪ ಹೇಗಿರ ಬೇಕು? ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು'...

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

by Shwetha
February 15, 2026
0

ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ತೀವ್ರ ಸ್ವರೂಪದ ರಾಜಕೀಯ ವಿವಾದವೊಂದು ಭುಗಿಲೆದ್ದಿದೆ. ಮಹಾನಗರ ಪಾಲಿಕೆಯ ಉಪಮೇಯರ್ ಅವರ ಅಧಿಕೃತ ಕೊಠಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ...

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

by Shwetha
February 15, 2026
0

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲೆ ದಿನೇ ದಿನೇ ಹೆಚ್ಚುತ್ತಿದ್ದು, ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬರೋಬ್ಬರಿ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ...

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

by Shwetha
February 15, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ 2028ರ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಈಗಲೇ ಕಾವೇರುತ್ತಿದೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಆಗಲು...

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

by Shwetha
February 15, 2026
0

ಬೆಂಗಳೂರು: ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ (Ration Card) ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕಳೆದ ಕೆಲವು ಸಮಯದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram