ಪೋಸ್ಟರ್ ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ನಿರ್ದೇಶಕ ಓಂ ರಾವುತ್ ಮತ್ತು ನಟ ಪ್ರಭಾಸ್ ಕಾಂಬಿನೇಷನ್ನ ‘ಆದಿಪುರುಷ್’ ಸಿನಿಮಾ ಇದೀಗ ಬೇರೆಯದ್ದೇ ವಿಚಾರಕ್ಕೆ ಬಾರೀ ಸುದ್ದಿಯಲ್ಲಿದೆ. 3ಡಿ ತಂತ್ರಜ್ಞಾನದಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಭಾಗವಾಗಲಿದ್ದಾರಾ ಪ್ರಧಾನಿ ನರೇಂದ್ರ ಮೋದಿ ಅವರು ಎಂಬ ಕುತೂಹಲ ನಮೋ ಅಭಿಮಾನಿಗಳು ಹಾಗೂ ಪ್ರಭಾಸ್ ಮತ್ತು ಸಿನಿ ಪ್ರಿಯರಲ್ಲಿ ಮನೆ ಮಾಡಿದೆ. ಅಷ್ಟಕ್ಕೂ ಹೀಗೆ ಹೇಳೋದಕ್ಕೆ ಕಾರಣವೂ ಇದೆ.
ಈ ಸೆನ್ ಸೇಷನ್ ಡ್ರಾಮಾಗೆ ಪ್ರೇರಣೆ ಬೇರಾವುದೂ ಅಲ್ಲ ಅದುವೇ ಮಹಾಗ್ರಂಥ ರಾಮಾಯಣ. ಇದರಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಸೀತೆ ಪಾತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಬಣ್ಣ ಹಚ್ಚಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡ್ತಿವೆ. ಇದರ ನಡುವೆ ಆದಿಪುರುಷ್ ಚಿತ್ರದಲ್ಲಿ ಪ್ರಧಾನಿ ಭಾಗವಹಿಸಿದ್ದ ಈ ಶಿಲಾನ್ಯಾಸ ಕಾರ್ಯಕ್ರಮದ ದೃಶ್ಯಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ನರೇಂದ್ರ ಮೋದಿ ಅವರೂ ಈ ಚಿತ್ರದ ಒಂದು ಭಾಗವಾಗಲಿದ್ದಾರೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಅಂದಹಾಗೆ ಟಿ ಸೀರಿಸ್ನ ಭೂಷಣ್ ಕುಮಾರ್ ಅವರು ಬಂಡವಾಳ ಹೂಡಿರುವ ಈ ಚಿತ್ರ ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿದ್ದು, ಕನ್ನಡ, ತಮಿಳು, ಮಲಯಾಳಂನಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ.