ಕೊರೊನಾ ವೈರಸ್ ಭೀತಿ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ವೈರಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಲ್ಮನೆ ಸದಸ್ಯ ಸಿ.ಎಂ.ಇಬ್ರಾಹಿಂ, ಕಾಲ್ ಮಾಡಿದಾಗ ಮೊಬೈಲ್ ನಲ್ಲಿ ಕೆಮ್ಮುವ ಧ್ವನಿ ಕೇಳುತ್ತದೆ. ಆ ಕೆಮ್ಮು ಕೇಳಿದ್ರೆ ನಮಗೂ ಕೆಮ್ಮು ಬರುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮಲ್ಲಿ ರಕ್ತ ತೆಗೆದು ಪರೀಕ್ಷೆ ಮಾಡೋದ್ರೊಳಗೆ ರೋಗಿ ಹೊರಟು ಹೋಗಿರ್ತಾನೆ ಎನ್ನುವ ಮೂಲಕ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿದರು. ಆರೋಗ್ಯ ಇಲಾಖೆ ವಾರ್ ರೂಂ ತೆಗೆದು ಕೆಲಸ ಮಾಡಬೇಕು.ತಪಾಸಣಾ ಕೇಂದ್ರಗಳನ್ನು ಹೆಚ್ಚು ತೆಗೆಯಬೇಕು. ಆರೋಗ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.
ಕೊರೊನಾ ವೈರಸ್ ಗೆ ನಾಟಿ ಔಷಧಿ ಇದೆ
ಕೊರೊನಾ ವೈರಸ್ ಗೆ ಇಲ್ಲಿಯವರೆಗೂ ಔಷಧಿ ಕಂಡು ಹಿಡಿದಿಲ್ಲ. ನಮ್ಮಲ್ಲೇ ನಾಟಿ ಔಷಧಿಯಿದೆ. ಈರುಳ್ಳಿ ಕಟ್ ಮಾಡಿ ಉಪ್ಪು ಹಾಕಿ ತಿಂದ್ರೆ ನಿಯಂತ್ರಣ ಮಾಡಬಹುದು ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ








