ಕೃಷಿ ಮಸೂದೆಗಳನ್ನು ಅಂಗೀಕರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
ಹೊಸದಿಲ್ಲಿ, ಸೆಪ್ಟೆಂಬರ್28: ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮೂರು ಕೃಷಿ ಮಸೂದೆಗಳಿಗೆ ಸಹಿ ಹಾಕಿದರು. ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಮಸೂದೆ ಅಂಗೀಕಾರವಾಗಿತ್ತು. ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಶಿರೋಮಣಿ ಅಕಾಲ್ ದಳ ಎನ್ಡಿಎ ಮೈತ್ರಿಕೂಟವನ್ನೇ ತೊರೆದಿದೆ.
ಅಕ್ಟೋಬರ್ 1 ರ ನಂತರ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ ಜೈಲು ಶಿಕ್ಷೆ ಗ್ಯಾರಂಟಿ
ಕೃಷಿ ಸುಧಾರಣಾ ಮಸೂದೆಗಳು ರೈತ ವಿರೋಧಿ ಕಾಯ್ದೆಯಾಗಿದ್ದು, ಎಂದಿಗೂ ಜಾರಿಯಾಗಬಾರದು ಎಂದು ಆಗ್ರಹಿಸಿದ ಪ್ರತಿಪಕ್ಷಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಬಿಲ್ಗೆ ಅಂಕಿತ ಹಾಕಬಾರದು ಎಂದು ಒತ್ತಾಯಿಸಿದ್ದರು.
ಮೂರು ಕೃಷಿ ಸುಧಾರಣಾ ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರವಾದಗಿನಿಂದಲೂ ದೇಶಾದ್ಯಂತ ರೈತರು ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ.

ಕಾಯ್ದೆಯ ಮುಖ್ಯಾಂಶಗಳು
ರೈತರನ್ನು ಎಪಿಎಂಸಿ ಮಾರುಕಟ್ಟೆ ನಿರ್ಬಂಧದಿಂದ ಮುಕ್ತಗೊಳಿಸಿ, ಯಾವುದೇ ಮಾರುಕಟ್ಟೆಗಳಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮುಕ್ತ ಅವಕಾಶ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಿಂದ ರಾಷ್ಟ್ರೀಯ ಅರ್ಹತಾ ಪರೀಕ್ಷೆ
ಆನ್ಲೈನ್ ಮೂಲಕ ಕೂಡ ರೈತರ ಉತ್ಪನ್ನಗಳ ಮಾರಾಟ ನಡೆಸಲು ಒಪ್ಪಿಗೆ. ಇದಕ್ಕಾಗಿ ಪ್ರತ್ಯೇಕ ವೇದಿಕೆ ಅಸ್ತಿತ್ವಕ್ಕೆ ಬರಲಿದ್ದು, ದೇಶದ ಯಾವುದೇ ಪ್ರದೇಶದಿಂದ ಆನ್ ಲೈನ್ ಮೂಲಕ ಖರೀದಿ- ಮಾರಾಟ ಮಾಡಬಹುದಾಗಿದೆ.
ವ್ಯಕ್ತಿ ಅಥವಾ ಸಂಸ್ಥೆ ಜೊತೆ ಬೆಳೆ ಬೆಳೆಯುವ ಮೊದಲೇ ಒಪ್ಪಂದ ಮಾಡಿಕೊಳ್ಳಲು ಈ ಮಸೂದೆ ಅವಕಾಶ ನೀಡಲಿದೆ. ಇದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ನಿಗದಿತ ಬೆಲೆ ಸಿಗಲಿದೆ.








