ಕೊಪ್ಪಳ koppal : ಯುವತಿಗೆ ಅಶ್ಲೀಲ ಮೆಸೆಜ್ ಕಳಿಸುತ್ತಿದ್ದ ವ್ಯಕ್ತಿಗೆ ಥಳಿತ
ಕೊಪ್ಪಳ : ಮಹಿಳೆಗೆ ಅಶ್ಲೀಲ ಸಂದೇಶ ರವಾನಿಸಿದ ಯುವಕನಿಗೆ ಮಹಿಳೆ ಗೂಸಾ ನೀಡಿದ್ದಾಳೆ.
ಕೊಪ್ಪಳ ಜಿಲ್ಲಾ ಆಸ್ಪತ್ರೆ ಮುಂಭಾಗ ಮಹಿಳೆಯೊಬ್ಬಳು ಯುವಕನೊಬ್ಬನನ್ನು ಹಿಗ್ಗಾಮುಗ್ಗ ಥಳಿಸಿದ್ದಾಳೆ.
ವೀರಯ್ಯ, ಚಪ್ಪಲಿ ಏಟು ತಿಂದ ಯವಕ. ಮೂಲತಃ ಕೊಪ್ಪಳ ತಾಲೂಕಿನ ನರೇಗಲ್ ನಿವಾಸಿ.
ವೀರಯ್ಯ ತನ್ನ ವಯಸ್ಸಿಗಿಂತ ದೊಡ್ಡವರಾದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನಂತೆ. ಇದರಿಂದ ರೊಚ್ಚಿಗೆದ್ದ ಯುವತಿ ವೀರಯ್ಯನನ್ನು ಮನಬಂದಂತೆ ಥಳಿಸಿದ್ದಾರೆ.
ವೀರಯ್ಯನಿಗೆ ತಮ್ಮನ ಸ್ಥಾನಕೊಟ್ಟು ಯುವತಿ ಸಲುಗೆ ಕೊಟ್ಟಿದ್ದಳು. ಆದರೆ ಅದೇ ಸಲುಗೆಯನ್ನ ದುರಪಯೋಗ ಮಾಡಿಕೊಂಡ ವೀರಯ್ಯ ಯುವತಿ ಮೊಬೈಲ್ ಗೆ ಅಶ್ಲೀಲ ಸಂದೇಶ ಕಳಿಸಿದ್ದನಂತೆ.
ಇದರಿಂದ ಮಹಿಳೆಯ ಮನೆಯವರು ಅವನಿರೋ ಜಾಗಕ್ಕೆ ಬಂದು ಚಪ್ಪಲಿ ಏಟು ನೀಡಿದ್ದಾರೆ.
ಅಲ್ಲದೆ ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ವೀರಯ್ಯ ಸದ್ಯ ಪೊಲೀಸರ ವಶದಲ್ಲಿದ್ದಾನೆ.










