‘ನನ್ನ ಗಂಡನನ್ನ ಕರೆದು ಬುದ್ಧಿ ಹೇಳಿ’ : ಠಾಣೆ ಮೆಟ್ಟಿಲೇರಿದ ಚೈತ್ರಾ ಕೊಟೂರು
ಬೆಂಗಳೂರು : ನನ್ನ ಗಂಡನನ್ನು ಕರೆದು ಬುದ್ಧಿ ಹೇಳಿ ಎಂದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟೊರು ತನ್ನ ಗಂಡನ ವಿರುದ್ಧ ದೂರು ನೀಡಿದ್ದಾರೆ.
ನಗರದ ಬಸವನಗುಡಿ ಮಹಿಳಾ ಠಾಣೆಗೆ ದೂರು ಚೈತ್ರಾ ಕೊಟೊರು ದೂರು ನೀಡಿದ್ದಾರೆ.
ಚೈತ್ರಾ ಕೊಟೊರು ಅವರು ಇತ್ತೀಚೆಗೆ ನಾಗರ್ಜುನ್ ಎಂಬುವವರನ್ನ ಸರಳವಾಗಿ ವಿವಾಹವಾಗಿದ್ದರು.
ಇದಾದ ಬಳಿಕ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ನಾಗರ್ಜುನ್ ಅವರು ಚೈತ್ರಅವರನ್ನ ಬಿಟ್ಟೋಗಿದ್ದರು. ಇತ್ತ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದರು.
ಇದೀಗ ತನ್ನ ಗಂಡನನ್ನ ಕರೆಸಿ ಬುದ್ದಿವಾದ ಹೇಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದೂರಿನಲ್ಲಿ ತನ್ನನ್ನ ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಿ ವಂಚನೆ ಮಾಡಿರೋ ಆರೋಪ ಮಾಡಿದ್ದಾರೆ.









