ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಜೂನ್ ಅಂತ್ಯದ ವೇಳೆಗೆ ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಸೂಚಿಸಿದೆ. ಅವರು ಇದನ್ನು ಮಾಡದಿದ್ದರೆ, ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಟ್ವೀಟ್ ಮೂಲಕ ತನ್ನ ಗ್ರಾಹಕರಿಗೆ ಸಲಹೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಿದೆ.
ಎಸ್‌ಬಿಐ ಪ್ರಕಾರ, ನೀವು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಅನ್ನು ನಿಷ್ಕ್ರಿಯವೆಂದು ಘೋಷಿಸಲಾಗುತ್ತದೆ.
ಪ್ಯಾನ್ ಅನ್ನು ನಿಷ್ಕ್ರಿಯವೆಂದು ಘೋಷಿಸಿದ ನಂತರ, ಪ್ಯಾನ್ ಅಗತ್ಯವಿರುವ ಯಾವುದೇ ವಹಿವಾಟು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ ಜೂನ್ 30 ಆಗಿದ್ದು, ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು, ಗ್ರಾಹಕರು ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕು ಎಂದು ಸ್ಟೇಟ್ ಬ್ಯಾಂಕ್ ಸಲಹೆ ನೀಡಿದೆ.
ಸರ್ಕಾರದ ಪ್ರಸ್ತಾವನೆಯ ಪ್ರಕಾರ, ಒಬ್ಬ ವ್ಯಕ್ತಿಯು ಕೊನೆಯ ದಿನಾಂಕದೊಳಗೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ಆತನಿಗೆ 1000 ರೂ.ಗಳ ದಂಡ ವಿಧಿಸಲಾಗುತ್ತದೆ. ಇದರೊಂದಿಗೆ ಲಿಂಕ್ ಮಾಡುವ ಗಡುವನ್ನು ಮಾರ್ಚ್ 31 ರಿಂದ ಜೂನ್ 30 ರವರೆಗೆ ಸರ್ಕಾರ ವಿಸ್ತರಿಸಿದೆ. ಜೊತೆಗೆ ಸರ್ಕಾರ ಈ ಗಡುವನ್ನು ಇನ್ನು ಮುಂದೆ ವಿಸ್ತರಿಸಲಾಗುವುದಿಲ್ಲ ಎಂದು ಸೂಚಿಸಿದೆ. ಬದಲಾಗಿ, ನಿಯಮವನ್ನು ಪಾಲಿಸದೆ ಇದ್ದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಆನ್ಲೈನ್ ನಲ್ಲಿ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ
ಮೊದಲಿಗೆ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ https://www1.incometaxindiaefiling.gov.in/home ಕ್ಲಿಕ್ ಮಾಡಿ.
ಇದರ ನಂತರ ನೀವು ಎಡಭಾಗದಲ್ಲಿ ಲಿಂಕ್ ಆಧಾರ್ ಆಯ್ಕೆಯನ್ನು ಕಾಣುತ್ತಿರಿ. ಈ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯುತ್ತದೆ. ಅಲ್ಲಿ ಲಿಂಕ್ ಆಧಾರ್ ಆಯ್ಕೆಯಿರುತ್ತದೆ.
ಈ ಪುಟದಲ್ಲಿ ನೀವು ಮೇಲ್ಭಾಗದಲ್ಲಿ ಕ್ಲಿಕ್ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ. ಇದರ ನಂತರ, ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಇದರ ನಂತರ ನೀವು ವ್ಯೂ ಲಿಂಕ್ ಆಧಾರ್ ಸ್ಟೇಟಸ್ ಬಟನ್ ಕ್ಲಿಕ್ ಮಾಡಿ.
ಇದರ ನಂತರ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ್ದರೆ, ‘ನಿಮ್ಮ ಪ್ಯಾನ್ ಅನ್ನು ಆಧಾರ್ ಸಂಖ್ಯೆ XXXXXXXX134 ಗೆ ಲಿಂಕ್ ಮಾಡಲಾಗಿದೆ’ ಎಂಬ ಸಂದೇಶವನ್ನು ಹಸಿರು ಟಿಕ್‌ನೊಂದಿಗೆ ಸ್ವೀಕರಿಸಲಾಗುತ್ತದೆ. ಈ ರೀತಿಯಾಗಿ ನಿಮ್ಮ ಪ್ಯಾನ್ ಕಾರ್ಡ್ ಆಧಾರ್‌ನೊಂದಿಗೆ ಸಂಪರ್ಕ ಹೊಂದಿದೆಯೆ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಗಳು#Saakshatv #healthtips #homeremedies #improveimmunity https://t.co/Wl5YTeOQAB
— Saaksha TV (@SaakshaTv) June 5, 2021
ಎಗ್ ಕಬಾಬ್ https://t.co/ew7PxrTVda
— Saaksha TV (@SaakshaTv) June 6, 2021
ಮೊಸರಿಗೆ ಏನನ್ನು ಬೆರೆಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು? – ಇಲ್ಲಿದೆ ಡಯೆಟಿಷಿಯನ್ ಸಲಹೆ#Saakshatv #healthtips #immunity https://t.co/rUUIj2atbJ
— Saaksha TV (@SaakshaTv) June 6, 2021
ರಂಬೂಟನ್ ಹಣ್ಣಿನ ಕೃಷಿ ಅಡಿಕೆ, ರಬ್ಬರ್ ಗಿಂತ ಹೆಚ್ಚು ಲಾಭದಾಯಕ#Rambutanfruit https://t.co/KM23CLP2TS
— Saaksha TV (@SaakshaTv) June 6, 2021
#SBI #advisory #customers