ಸಂಬರಗಿ ಆಸೆ ಈಡೇರಿಸಿದ ಬಿಗ್ ಬಾಸ್ –ಫ್ಯಾಮಿಲಿ ಫೋಟೋ ಕಂಡು ಎಮೋಷನಲ್ ಆದ ಪ್ರಶಾಂತ್..!
ಬಿಗ್ ಬಾಸ್ ಫೈನಲ್ ಹತ್ರವಾಗ್ತಿದೆ.. ಗ್ರ್ಯಾಂಡ್ ಫಿನಾಲೆಗೆ ಅಬ್ಬಬ್ಬಾ ಅಂದ್ರೂ ಈ ವಾರ ಬಾಕಿ ಇದೆ.. ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ಪರ್ಧಿಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ.. ಇನ್ನೂ ಫೈನಲ್ಸ್ ಹತ್ರ ಆಗ್ತಿದ್ದಂತೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ಕೊಡುತ್ತಾ , ವಿಶೇಷ ಗಿಫ್ಟ್ ನೀಡ್ತಿದೆ. ಇನ್ನೇನು ಈ ವಾರ ಮುಗಿಯುತ್ತಿದ್ದಂತೆ ಗ್ರ್ಯಾಂಡ್ ಫಿನಾಲೆ ಇರೋದ್ರಿಂದ ಸ್ಪರ್ಧಿಗಳಿಗೆ ಸಾಕಷ್ಟು ಸರ್ಪ್ರೈಸ್ ಗಳನ್ನ ನೀಡುತ್ತಾ ಅವರನ್ನ ಖುಷಿ ಪಡಿಸಲಾಗ್ತಿದೆ..
ಇದೀಗ ಬಿಗ್ ಬಾಸ್ ಸಂಬರಗಿಯ ಆಸೆಯನ್ನೂ ಈಡೇರಿಸಿದೆ.. ಅರವಿಂದ್ ಅವರು ಬಿಗ್‍ಮನೆಗೆ ಬಂದ ತಮ್ಮ ಬೈಕ್‍ನ್ನು ಮತ್ತೆ ಮನೆಯಲ್ಲಿ ನೋಡಬೇಕು ಎಂದಿದ್ದರು ಅವರ ಆಸೆಯನ್ನು ಬಿಗ್‍ಬಾಸ್ ತಿರಿಸಿದ್ದಾರೆ, ನಂತರ ದಿವ್ಯಾ ಉರುಡುಗ ಅವರು ಇಷ್ಟದ ಊಟ ಕೇಳಿದ್ದರು ಅದೂ ಕೂಡ ಪೂರೈಸಿದ್ದಾರೆ. ಇದೀಗ ಪ್ರಶಾಂತ್ ಸಂಬರಗಿ ಅವರು ತಮ್ಮ ಕುಟುಂಬವನ್ನು ಈ ಮನೆಯಲ್ಲಿ ನೋಡಬೇಕು ಎಂದಿದ್ದರು. ಇದೀಗ ಬಿಗ್‍ಬಾಸ್ ಅವರ ಕುಟುಂಬದ ಫೋಟೋವನ್ನು ಬಿಗ್ ಮನೆಯಲ್ಲಿ ಹಾಕುವ ಮೂಲಕ ಅವರ ಆಸೆಯನ್ನು ಪೂರೈಸಿದ್ದಾರೆ.
BIGGBOSS 8 : 6 ಜನರ ಪೈಕಿ ಎಲಿಮಿನೇಟ್ ಆಗೋದ್ಯಾರು..? ಫೈನಲ್ ಪ್ರವೇಶ ಮಾಡು ಐವರು ಯಾರು..?
ಸಂಬರಗಿ ಬಿಗ್ ಮನೆಯಲ್ಲಿ ಅವರ ಕುಟುಂಬದ ಫೋಟೋ ನೋಡುತ್ತಿದ್ದಂತೆ ತುಂಬಾ ಖುಷಿ ಪಟ್ಟರು. ನಂತರ ಇಷ್ಟು ದೊಡ್ಡ ಫೋಟೋ ಹಾಕಿದ್ದಾರೆ, ತುಂಬಾ ಖುಷಿ ಆಯ್ತು ಎಂದರು. ಬಳಿಕ ದಿವ್ಯಾ ಉರುಡುಗ ನಿಮ್ಮ ಕುಟುಂಬ ತುಂಬಾ ಮುದ್ದಾಗಿದೆ, ನಿಮ್ಮ ಹೆಂಡತಿ ಮತ್ತು ನಿಮ್ಮ ಸಣ್ಣ ಮಗ ತುಂಬಾ ಮುದ್ದಾಗಿದ್ದಾರೆ ಎಂದರು. ಪ್ರಶಾಂತ್ ಸಂಬರಗಿ ಅವರ ಕುಟುಂಬವನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟರು. ನನ್ನ ಸಣ್ಣ ಮಗನನ್ನು ಫೋಟೋಗೆ ಅಲ್ಲಿ ನಿಲ್ಲಿಸಿರುವುದು ನನ್ನ ಭಾಗ್ಯ ಎಂದು ನಗೆ ಚಟಾಕಿ ಹಾರಿಸಿದರು. ದಿವ್ಯಾ ಸುರೇಶ್ ನಿಮ್ಮ ದೊಡ್ಡ ಮಗ ನಿಮ್ಮಂತೆ ಇದ್ದಾರೆ. ಸಣ್ಣ ಮಗ ನಿಮ್ಮ ಹೆಂಡತಿಯಂತೆ ಇದ್ದಾರೆ ಎಂದು ಹೋಲಿಕೆ ಮಾಡಿದರು.
ಸಂಬರಗಿ ಎಲ್ಲರನ್ನು ಕರೆದು ನನ್ನ ಕುಟುಂಬದ ಜೊತೆ ಒಂದು ಫೋಟೋ ತೆಗೆಸಿಕೊಳ್ಳನ ಎಂದು ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರು. ಬಿಗ್‍ಬಾಸ್ ನೀವು ನನ್ನ ಫ್ಯಾಮಿಲಿಯನ್ನು ಕರೆದುಕೊಂಡು ಬಂದಿಲ್ಲ ಎಂದರು ಕೂಡ ನನ್ನ ಫ್ಯಾಮಿಲಿಯನ್ನು ಫೋಟೋ ಸಮೇತ ತಂದಿರುವುದು ಸಂತೋಷವಾಯಿತು. ನಾನು ಬದುಕಿರುವುದೇ ನನ್ನ ಕುಟುಂಬಕೋಸ್ಕರ. ಈ ಮನೆಯಲ್ಲಿ ನನ್ನ ಪರಿವಾರದ ಫೋಟೋ ನೋಡಿ ತುಂಬಾ ಖುಷಿ ಆಯ್ತು ಧನ್ಯವಾದ ಎಂದು ಎಮೋಷನಲ್ ಆಗಿದ್ದಾರೆ.