ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಲ್ಲತ್ತಿಗಿರಿ ಜಲಧಾರೆಯ ಸೊಬಗು ವರ್ಣಾತೀತ..!

admin by admin
September 30, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕಾಫಿನಾಡು ಚಿಕ್ಕಮಗಳೂರು ಹೇಳಿಕೇಳಿ ಪ್ರವಾಸಿತಾಣಗಳ ತವರೂರು.. ಮಲೆನಾಡಿನ ಸೊಬಗಿನ ಐಸಿರಿ ಚಿಕ್ಕಮಗಳೂರು.. ಕಾಫಿನಾಡಿನ ಸೌಂದರ್ಯ ಪ್ರವಾಸಿಗರನ್ನ ಮೂಕ ವಿಸ್ಮಿತರನ್ನಾಗಿಸುತ್ತೆ.. ಲೆಕ್ಕವಿಲ್ಲದಷ್ಟು ಪ್ರವಾಸಿತಾಣಗಳು, ಜಲಧಾರೆಗಳು, ಗುಡಿ – ಗೋಪುರಗಳು, ನದಿ –ಕೊಳ್ಳಗಳ ರಮಣೀಯ ನೋಟ ಕಣ್ಣಿಗೆ ಮುದ ನೀಡುತ್ತದೆ. ಪ್ರಕೃತಿಯಲ್ಲಿ ಬೆರೆತು ಪ್ರವಾಸಿಗರು ಮೈರೆಯುತ್ತಾರೆ.

ಅಂತಹದ್ದೇ ಒಂದು ತಾಣ ಕಲ್ಲತ್ತಿಗಿರಿ ಜಲಪಾತ….

Related posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

March 22, 2026
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

March 22, 2026

ಚಿಕ್ಕಮಗಳೂರಿನಲ್ಲಿನ ತರೀಕೆರೆ ತಾಲೂಕಿನಲ್ಲಿರುವ ಕಲ್ಲತ್ತಿಗಿರಿ ಜಲಪಾತಕ್ಕೆ ಹೋಗುವ ಮಾರ್ಗದುದ್ದಕ್ಕೂ ರಮಣೀಯ ನೋಟ ಕಣ್ಣಿಗೆ ರಸದೌತಣವನ್ನ ನೀಡುತ್ತೆ. ಹಚ್ಚ ಹಸಿರಿನ ಪ್ರಕೃತಿಯ ಸೊಬಗು ನೋಡುಗರನ್ನು ಬೆರಾಗಿಸುತ್ತೆ.

kallattigiri falls in chikkamagaluru
kallattigiri falls

ಗುಡ್ಡದ ತುದಿಯಿಂದ ಹರಿಯುವ ಬೆಟ್ಟದ ಮೇಲೆಯೇ ಹರಿಯುವ ಕಲ್ಲತ್ತಿಗಿರಿ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ.. ಹಾಲ್ನೊರೆಯ ಸದಾ ಕಾಲ ಉಕ್ಕಿ ಹರಿಯುವ ಈ ಜಲಧಾರೆ ಬತ್ತಿದ ಇತಿಹಾಸವೇ ಇಲ್ಲ. ಬೆಟ್ಟ-ಗುಡ್ಡಗಳ ಔಷಧಿ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯುವ ಈ ನೀರಲ್ಲಿ ಸ್ನಾನ ಮಾಡಿದ್ರೆ ಅನೇಕ ರೋಗ ರುಜುನೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ..

ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾ ಬಾಲಿಕೆಯರ ಉದ್ಭವ ಮೂರ್ತಿಗಳಿವೆ. ಆನೆ ಆಕಾರದಲ್ಲಿರುವ ಈ ಜಲಧಾರೆ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ. ಬೆಟ್ಟದಲ್ಲಿನ ಗುಹೆಯೊಳಗೆ ಉದ್ಭವವಾಗಿರುವ ವೀರಭದ್ರಸ್ವಾಮಿ ದೇವರ ದರ್ಶನ ಪಡೆದ್ರೆ ಕಷ್ಟ ಕಾರ್ಪಣ್ಯಗಳು ದೂರಾಗಿ, ಇಷ್ಟಾರ್ಥಗಳು ಈಡೇರುತ್ತೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಈ ಜಲಪಾತ ಸದಾ ಪ್ರವಾಸಿಗರಿಂದ ತುಂಬಿರುತ್ತೆ.. ವೀಕೆಂಡ್ ಗಳಲ್ಲಂತೂ ಮಕ್ಕಳು , ಫ್ಯಾಮಿಲಿ, ಫ್ರೆಂಡ್ಸ್ , ಯುವಕರು ಬಂದು ಈ ಫಾಲ್ಸ್ ನಲ್ಲಿ ಆಟ ಆಡುತ್ತಾ ಎಂಜಾಯ್ ಮಾಡ್ತಾರೆ. ಗುಡ್ಡದ ಮೇಲಿಂದ ಹರಿಯುವ ಝುಳು ಝುಳು ಫಾಲ್ಸ್ ಒಂದೆಡೆಯಾದ್ರೆಯಾದ್ರೆ ಸುತ್ತಲಿನ ಪ್ರಕೃತಿಯ ರಮಣೀಯ ನೋಟ ನೋಡುಗರಿಗೆ ರಸದೌತಣ  ನೀಡುತ್ತೆ. ಈ ತಾಣದಲ್ಲಿ ಮೂಲವೇ ಗೊತ್ತಿಲ್ಲದ ಗಂಗೆ ಜಲಪಾತದ ರೂಪದಲ್ಲಿ ಹರಿಯುತ್ತದೆ. ಹರಿಯುವ ಗಂಗೆ ಪ್ರವಾಸಿಗರನ್ನು ಪುಳಕಿತಗೊಳಿಸುತ್ತದೆ.

Tags: Chikkamagalurukallattiigiri fallsSpecialtourismtravell
ShareTweetSendShare
Join us on:

Related Posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

by Shwetha
March 22, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

by Shwetha
March 22, 2026
0

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

by Shwetha
March 22, 2026
0

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ...

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

by Shwetha
March 22, 2026
0

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ...

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

by Shwetha
March 22, 2026
0

ದೇಶದ ಕೋಟ್ಯಂತರ ಪಡಿತರ ಚೀಟಿ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರವು ಅತಿದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram