Bangalore | ಮುಂದಿನ 4 ದಿನ ಬೆಂಗಳೂರಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ.
ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಮೆಟ್ರೋ ಮಂದಿ ಬರ್ದಾದ್ ಆಗಿಬಿಟ್ಟಿದ್ದಾರೆ.
ಶತಮಾನದ ರಣಮಳೆಯಿಂದಾಗಿ ರಾಜಧಾನಿ ತತ್ತರಿಸಿಹೋಗಿದೆ.
ನಿನ್ನೆ ರಾತ್ರಿ ಮುಕ್ಕಾಲು ಗಂಟೆ ಮಳೆರಾಯ ಆರ್ಭಟಿಸಿದ್ದು, ಬರೋಬ್ಬರಿ 98 ಮಿಲಿಮೀಟರ್ ಮಳೆಯಾಗಿದೆ.

ಅನುಗ್ರಹ ಲೇಔಟ್, ಹೆಚ್ ಎಸ್ ಆರ್ ಲೇಔಟ್, ಇಂದಿರಾನಗರದ ಹೆಚ್ ಎಎಲ್ ಲೇಔಟ್, ಶಿವಾಜಿನಗರ, ಬೆಳ್ಳಂದೂರು ಸೇರಿದಂತೆ ಹಲವು ಕಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಈ ನಡುವೆ ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.







