ADVERTISEMENT
Monday, April 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

Shwetha by Shwetha
April 6, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

Related posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

April 6, 2026
ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

April 6, 2026

ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆಯಲ್ಲಿ ಬಿಡಿಗಾಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲವನ್ನೂ ಕಳೆದುಕೊಂಡು ಕೇವಲ ಗರಿಗರಿ ಬಟ್ಟೆ ಹಾಕಿಕೊಂಡು ತಿರುಗುವ ಜಂಭದ ಸಾಹುಕಾರನಂತಾಗಿದೆ. ಮನೆಗೆ ಸಾಲಗಾರರು ಮುತ್ತಿಗೆ ಹಾಕಿದಾಗಲೇ ಇವರ ಅಸಲಿ ಬಂಡವಾಳ ಬಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ ನಗರದ ವಾರ್ಡ್ ನಂಬರ್ 29ರಲ್ಲಿ ನಡೆಯುತ್ತಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನ ಮತ್ತು ಸುಳ್ಳು ಭರವಸೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಅಪ್ಪನ ಆಸ್ತಿ ಕರಗಿಸಿ ಗರಿಗರಿ ಅಂಗಿ ತೊಟ್ಟ ಸಾಹುಕಾರನ ಕಥೆ

ರಾಜ್ಯ ಸರ್ಕಾರದ ಬಳಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಸಿದ್ದರಾಮಯ್ಯನವರು ಒಂದು ಪಾಪರ್ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ತಾತ ಮುತ್ತಾತ ಮಾಡಿದ್ದ ಶ್ರೀಮಂತಿಕೆಯನ್ನು ಹಾಳುಮಾಡಿ, ಊರಿನವರ ಮುಂದೆ ತಮ್ಮ ಬಳಿ ಏನೂ ಇಲ್ಲ ಎಂದು ಹೇಳಿಕೊಳ್ಳಲು ನಾಚಿಕೆಪಟ್ಟುಕೊಂಡು, ಕೇವಲ ಗರಿಗರಿ ಅಂಗಿ ಹಾಕಿಕೊಂಡು ತಿರುಗುವ ಸಾಹುಕಾರನಂತೆ ಸಿಎಂ ವರ್ತಿಸುತ್ತಿದ್ದಾರೆ. ಸದ್ಯ ಈ ಸರ್ಕಾರದ ಮನೆ ಮಂದಿಗಿಂತ ಸಾಲಗಾರರೇ ಹೆಚ್ಚಾಗಿದ್ದಾರೆ. ಈ ಸರ್ಕಾರ ಅಧಿಕಾರದಿಂದ ಕೆಳಗಿಳಿದಾಗಲೇ ಇವರ ಅಸಲಿ ಬಂಡವಾಳ ಜನರಿಗೆ ತಿಳಿಯಲಿದೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ಅಭಿವೃದ್ಧಿ ಸ್ಥಗಿತದಿಂದ ಸಾವಿರಾರು ಕೋಟಿ ನಷ್ಟ
ಅಭಿವೃದ್ಧಿ ಎಂಬುದು ಒಂದು ನಿರಂತರ ಪ್ರಕ್ರಿಯೆ. ಅದು ಒಮ್ಮೆ ಹಳಿ ತಪ್ಪಿದರೆ ಮತ್ತೆ ಸರಿದಾರಿಗೆ ತರುವುದು ಅತ್ಯಂತ ದುಬಾರಿಯಾಗುತ್ತದೆ. ಒಂದು ವರ್ಷದ ಹಿಂದೆ ಒಂದು ಕೋಟಿ ರೂಪಾಯಿಗೆ ಆಗುತ್ತಿದ್ದ ಕೆಲಸ, ಈಗ ಎರಡು ಮೂರು ಕೋಟಿಗೆ ತಲುಪಿದೆ. ಕಳೆದ ಮೂರು ವರ್ಷಗಳಿಂದ ಬಾಗಲಕೋಟೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ, ಕಾಮಗಾರಿಗಳ ವೆಚ್ಚ ಸಾವಿರಾರು ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ಬಾಗಲಕೋಟೆಯ ಅಭಿವೃದ್ಧಿಗೂ ನನಗೂ ಅವಿನಾಭಾವ ಸಂಬಂಧವಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಮೊದಲ ಹಂತದ ಅಭಿವೃದ್ಧಿಗೆ 700 ಕೋಟಿ ರೂಪಾಯಿ ಅನುದಾನ ನೀಡಿದ್ದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಕಾಳಜಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರ ಸತತ ಪ್ರಯತ್ನದ ಫಲವಾಗಿ ಎರಡನೇ ಹಂತದ ಕಾಮಗಾರಿಗೆ 2300 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆವು. ಆ ಕಾಮಗಾರಿಗಳು ಮಾತ್ರ ಈಗ ನಡೆಯುತ್ತಿವೆ ಹೊರತು ಹೊಸದಾಗಿ ಈ ಸರ್ಕಾರ ನಯಾಪೈಸೆ ಕೊಟ್ಟಿಲ್ಲ ಎಂದರು.

ಕಣ್ಣಿಗೆ ಮಣ್ಣೆರಚುವ ಸುಳ್ಳು ಭರವಸೆಗಳು

ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವ ಸರ್ಕಾರ, ಅದಕ್ಕೆ ಬಿಡಿಗಾಸು ಅನುದಾನ ಮೀಸಲಿಟ್ಟಿಲ್ಲ. ವಿದ್ಯಾರ್ಥಿಗಳು ಕಟ್ಟುವ ಶುಲ್ಕದ ಹಣದಲ್ಲಿ ಮೆಡಿಕಲ್ ಕಾಲೇಜು ಕಟ್ಟುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಇದು ಬಾಗಲಕೋಟೆ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೇ. ಅದೇ ರೀತಿ ಇಲ್ಲಿನ ವ್ಯಾಪಾರಸ್ಥರಿಗೆ 200 ಎಕರೆ ಜಾಗ ಕೊಡುತ್ತೇವೆ ಎಂದು ಬೊಗಳೆ ಬಿಡುತ್ತಿದ್ದಾರೆ. ಸರ್ಕಾರಿ ಖಜಾನೆಯಲ್ಲೇ ಹಣವಿಲ್ಲದಿರುವಾಗ ಭೂಸ್ವಾಧೀನ ಮಾಡಿ ಜಾಗ ಕೊಡಲು ಹೇಗೆ ಸಾಧ್ಯ. ಕಾಂಗ್ರೆಸ್ ನಾಯಕರು ಜನರಿಗೆ ಟೋಪಿ ಹಾಕಲು ನೋಡುತ್ತಿದ್ದಾರೆ. ಬುದ್ಧಿವಂತರಾದ ಬಾಗಲಕೋಟೆ ಜನತೆ ಈ ಟೋಪಿ ಹಾಕಿಸಿಕೊಳ್ಳಬಾರದು ಎಂದು ಎಚ್ಚರಿಸಿದರು.

ಎಚ್ ವೈ ಮೇಟಿ ಹಾಗೂ ಬಾದಾಮಿ ಜನತೆಗೆ ದ್ರೋಹ

ಮೆಡಿಕಲ್ ಕಾಲೇಜು ದಿವಂಗತ ಎಚ್ ವೈ ಮೇಟಿ ಅವರ ಕನಸಾಗಿತ್ತು ಎಂದು ಸಿಎಂ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಹಿರಿಯ ನಾಯಕರಾಗಿದ್ದ ಮೇಟಿಯವರಿಗೆ ಬದುಕಿದ್ದಾಗ ಒಂದು ಸಚಿವ ಸ್ಥಾನವನ್ನೂ ನೀಡದೆ ಕಾಂಗ್ರೆಸ್ ತೀವ್ರ ಅಪಮಾನ ಮಾಡಿತ್ತು. ಅವರು ಕೇಳಿದ ಕೆಲಸಗಳನ್ನು ಮಾಡಿಕೊಡದೆ ಅವರನ್ನು ಕಡೆಗಣಿಸಲಾಗಿತ್ತು.

ಇದೇ ಸಿದ್ದರಾಮಯ್ಯನವರನ್ನು ಮೈಸೂರಿನ ಜನತೆ ಸೋಲಿಸಿ ಅನಾಥರನ್ನಾಗಿ ಮಾಡಿದಾಗ, ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಬಾದಾಮಿಯ ಜನತೆ. ಆದರೆ ಗೆದ್ದ ನಂತರ ಬಾದಾಮಿ ತುಂಬಾ ದೂರವಾಗುತ್ತದೆ ಎಂದು ಹೇಳಿ ಅಲ್ಲಿನ ಜನತೆಗೆ ದ್ರೋಹ ಬಗೆದರು. ಆದರೆ ನಮ್ಮ ಸರ್ಕಾರವಿದ್ದಾಗ ಬಾದಾಮಿ ತಾಲೂಕಿನ ರೈತರ ಅನುಕೂಲಕ್ಕಾಗಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೂರು ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದೆವು. ವಿಪರ್ಯಾಸವೆಂದರೆ ಆ ಯೋಜನೆಯ ಉದ್ಘಾಟನೆಯನ್ನು ಇದೇ ಸಿದ್ದರಾಮಯ್ಯನವರ ಕೈಯಿಂದ ಮಾಡಿಸಿದೆವು ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

ಬಾಗಲಕೋಟೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೇವಲ ಕತೆ ಹೇಳುವವರನ್ನು ನಂಬದೆ, ಸದಾ ಕ್ರಿಯಾಶೀಲರಾಗಿರುವ, ಸಮಯ ಪ್ರಜ್ಞೆ ಮತ್ತು ಬದ್ಧತೆ ಹೊಂದಿರುವ ಕೆಲಸಗಾರ ವೀರಣ್ಣ ಚರಂತಿಮಠ ಅವರನ್ನು ಈ ಉಪಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಬಸವರಾಜ ಬೊಮ್ಮಾಯಿ ಮತದಾರರಲ್ಲಿ ಮನವಿ ಮಾಡಿದರು.

ShareTweetSendShare
Join us on:

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

by Shwetha
April 6, 2026
0

ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

by Shwetha
April 6, 2026
0

ಅಸ್ಸಾಂ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಅಸ್ಸಾಂನ ಗೋಲಾಘಾಟ್...

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

by Shwetha
April 6, 2026
0

ಗಡಿಯಾಚೆಗಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದ್ದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾರತದ ವಿರುದ್ಧ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ. ಭಾರತವೇನಾದರೂ ಪಾಕಿಸ್ತಾನದ ಮೇಲೆ ವಿನಾಕಾರಣ ದಾಳಿ...

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

by Shwetha
April 6, 2026
0

ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಗೂಬೆ ಕೂರಿಸುವ ಬದಲು ಎಲ್ ಪಿ ಜಿ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ 6ನೇ...

ತಪ್ಪು ವಿದೇಶಾಂಗ ನೀತಿಯಿಂದಲೇ ದೇಶದಲ್ಲಿ ಗ್ಯಾಸ್ ಬೆಲೆ ಏರಿಕೆ : ಇತರ ರಾಷ್ಟ್ರಗಳಿಂದ ಅಗ್ಗದ ಗ್ಯಾಸ್ ತನ್ನಿ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸಲಹೆ

ತಪ್ಪು ವಿದೇಶಾಂಗ ನೀತಿಯಿಂದಲೇ ದೇಶದಲ್ಲಿ ಗ್ಯಾಸ್ ಬೆಲೆ ಏರಿಕೆ : ಇತರ ರಾಷ್ಟ್ರಗಳಿಂದ ಅಗ್ಗದ ಗ್ಯಾಸ್ ತನ್ನಿ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸಲಹೆ

by Shwetha
April 6, 2026
0

ದೇಶಾದ್ಯಂತ ಅಡುಗೆ ಅನಿಲ ಮತ್ತು ಇಂಧನ ಬೆಲೆಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram