Bengaluru : ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಆಭರಣವೇ ಕಳ್ಳತನ… ???
ಮೈ ಮೇಲೆ ಚಿನ್ನ ಹಾಕ್ಕೊಂಡು ಹೋಗೊಣ ಅದ್ರೆ ಸರಗಳ್ಳರ ಹಾವಳಿ, ಚಿನ್ನ ಮನೆಯಲ್ಲಿ ಇಟ್ಟು ವಿದೇಶಕ್ಕೆ ಹೊಗೋಣ ಅದ್ರೆ ಮನೆಗಳ್ಳರ ಕಾಟ ಇವರಿಬ್ಬರ ಹಾವಳಿ ತಪ್ಪಿಸಲು ಬ್ಯಾಂಕ್ ನಲ್ಲಿ ಇಟ್ಟಿದ ಲಕ್ಷಾಂತರ ರೂಪಾಯಿ ಚಿನ್ನಭಾರಣವೇ ಮಾಯ ..
ಯಲಹಂಕ ನಿವಾಸಿಯಾದ ಕೃಷ್ಣಕುಮಾರ್ ಎಂಬುವವರು ವಿದೇಶಕ್ಕೆ ಹೋಗುವ ಮುನ್ನ ಮನೆಯಲ್ಲಿದ್ದ 30 ಲಕ್ಷ ಮೌ್ಲ್ಯದ ಚಿನ್ನಭಾರಣವನ್ನ ಯಲಹಂಕ ಕರ್ನಾಟಕ ಬ್ಯಾಂಕ್ ಲಾಕರ್ ನಲ್ಲಿಟ್ಟು ತೆರಳಿದ್ದರು. ಜರ್ಮನಿಗೆ ತೆರಳಿದ್ದ ವ್ಯಕ್ತಿ ವಾಪಸ್ಸು ಬ್ಯಾಂಕ್ ಗೆ ಬಂದು ಲಾಕರ್ ನಲ್ಲಿದ್ದ ಚಿನ್ನಭಾರಣ ತೆಗೆದುಕೊಳ್ಳಲು ಲಾಕರ್ ಓಪನ್ ಮಾಡಿದರೆ ಲಾಕರ್ ಖಾಲಿಯಾಗಿದೆ.
ಲಾಕರ್ ಖಾಲಿಯಾಗಿದ್ದು ನೋಡಿ ಶಾಕ್ ಆದ ವ್ಯಕ್ತಿ ಕೊಡಲ್ಲೇ ಬ್ಯಾಂಕ್ ಮ್ಯಾನೇಜರ್ ಗೆ ಮಾಹಿತಿ ನೀಡಿದ ವ್ಯಕ್ತಿ ಬ್ಯಾಂಕ್ ಮ್ಯಾನೇಜರ್ ಪ್ರದೀಪ್ ಮೂರು ದಿನಗಳ ಕಾಲ ಸಮಯ ಕೋಡಿ ಚಿನ್ನಭಾರಣ ವಾಪಸ್ಸು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ.
ಮೂರು ದಿನಗಳ ಬಳಿಕ ಬ್ಯಾಂಕ್ ಮ್ಯಾನೇಜರ್ ಬಳಿ ಹೋಗಿ ಚಿನ್ನಭಾರಣ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ಕೊಡುವುದಾದರೆ ಕೊಡಿ ಎಂದು ಉಡಾಪೆ ಉತ್ತರ ನೀಡಿದ ಬ್ಯಾಂಕ್
ಚಿನ್ನಭಾರಣ ಬಗ್ಗೆ ಮಾಹಿತಿ ನೀಡದೆ ಇದ್ದಾಗ ಕೃಷ್ಣಕುಮಾರ್ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಪ್ರದೀಪ್, ಕಸ್ಟೋಡಿಯನ್ ಗಳಾದ ಸೌಮ್ಯ, ನಳನ ವಿರುದ್ದ ದೂರು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Bengaluru: The jewelery kept in the bank locker was stolen… ???







