Bagalakote : ವೀರಶೈವ ಲಿಂಗಾಯತ ಪಂಚಮಲಿ ಸಮಾಜದ ಮೂರನೇ ಪೀಠ ಸ್ಥಾಪನೆ : ನೂತನ ಪೀಠಾಧಿಪತಿಗಳಿಗೆ ರುದ್ರಾಭಿಷೇಕ
ಬಾಗಲಕೋಟೆ : ವೀರಶೈವ ಲಿಂಗಾಯತ ಪಂಚಮಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಹಿನ್ನೆಲೆಯಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ನೂತನ ಪೀಠಾಧಿಪತಿ ಬಬಲೇಶ್ವರದ ಡಾ.ಮಹದೇವ ಶಿವಾಚಾರ್ಯ ಶ್ರೀಗಳಿಗೆ ರುದ್ರಾಭಿಷೇಕ ನೆರವೇರಿಸಲಾಗಿದೆ.. ಜಮಖಂಡಿ ತಾಲೂಕಿನ ಆಲುಗೂರ ಗ್ರಾಮದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದೆ… ಇನ್ನೂ ಮುಂಜಾನೆಯಿಂದಲೇ ಅಷ್ಟ ದುರ್ಗಾ ಪೂಜಾ,ಪಾರ್ವತಿ ಪೂಜಾ,ಏಕಾದಶಿ ಮಹಾರುದ್ರ ಪೂಜಾ,ಸ್ವಸ್ತಿಪುಣ್ಯ ಆಹ್ವಾಚನ ಪೂಜೆಗಳನ್ನ ನೆರವೇರಿಸಲಾಗಿದೆ.. ನೂತನ ಶ್ರೀಗಳಿಗೆ ರುದ್ರಾಭಿಷೇಕ ಹಾಗೂ ವೈದಿಕರಿಂದ ಮಂತ್ರಪಠಣ,ಪೂಜಾ ವಿಧಿವಿಧಾನ ನೆರವೇರಿಸಲಾಗಿದೆ..
ನೂತನ ಪೀಠಾಧಿಪತಿಗಳಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ರುದ್ರಾಭಿಷೇಕ ಹಾಗೂ ರುದ್ರಾಕ್ಷಿ ಕಿರೀಟ ಧಾರಣೆ ನೆರವೇರಿಸಲಾಗಿದೆ. ನೂತನ ಪೀಠಾಧಿಪತಿಗಳಾಗಿ ಡಾ.ಮಹದೇವ ಶಿವಾಚಾರ್ಯ ಶ್ರೀಗಳು.. ಪೀಠಾರೋಹಣ ಮಾಡಿದ್ದಾರೆ.. ಬ್ರಾಹ್ಮೀ ಮುಹೂರ್ತದಲ್ಲಿ ವೈದಿಕರಿಂದ ಧಾರ್ಮಿಕ ಕಾರ್ಯಕ್ರಮ ನೆರವೇರಿದೆ.. ಹರಿಹರಪೀಠದ ವಚನಾನಂದ ಶ್ರೀ,ಸಚಿವ ಮುರಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ, ಮನಗೂಳಿಯ ಶ್ರೀ ಸಂಗನಬಸವ ಶ್ರೀ ಸೇರಿದಂತೆ ಪಂಚಮಸಾಲಿ ಪರ್ಯಾಯ ಒಕ್ಕೂಟದ ಶ್ರೀಗಳು, ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..