Bhaskar Rao : ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ,,, ಆಗ ಹೀಗೆಲ್ಲಾ ಆಗಲ್ಲ : ಬಾಸ್ಕರ್ ರಾವ್
ಪ್ರಚೋದನಾಕಾರಿ ವಾಟ್ಸಾಪ್ ಸ್ಟೇಟಸ್ ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಿಂದಾಗಿ ಹುಬ್ಬಳಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.. ಕಲ್ಲುತೂರಾಟದಂತಹ ಕೆಲ ಅಹಿತಕರ ಘಟನೆಗಳು ನಡೆದ ಬೆನ್ನಲ್ಲೇ ಸೆಕ್ಷನ್ 144 ಜಾರಿಯಾಗಿದೆ.. ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿರುವ ಉಧ್ವಿಗ್ನ ಪರಿಸ್ಥಿತಿಯ ಬಗ್ಗೆ ಈಗ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಪ್ರತಿಕ್ರಿಯೆ ನೀಡಿದ್ಧಾರೆ..
ಶಾಸಕಾಂಗ, ಕಾರ್ಯಾಂಗಕ್ಕೆ ಕೈ ಹಾಕಿದ್ರೆ ಇದೆಲ್ಲ ಆಗುತ್ತದೆ. ಶಾಸಕರು ಹಾಗೂ ಸಚಿವರುಗಳು ತಮಗೇ ಬೇಕಾದ ಪೊಲೀಸ್ ಅಧಿಕಾರಿಗಳನ್ನು ಹಾಕಿಕೊಳ್ಳುತ್ತಾರೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಆದರೆ ಲಕ್ಷಾಂತರ ರೂಪಾಯಿ ಪಡೆದುಕೊಂಡು ಹಾಕಿಕೊಳ್ಳುತ್ತಾರೆ. ಹಾಗೆ ಬಂದವರಲ್ಲಿ ಯಾರಿಗೆ ನಿಷ್ಠೆ ಇರುತ್ತೆ. ತಮಗೆ ತಂದವರಿಗೆ ಸೆಲ್ಯೂಟ್ ಹೊಡಿತಾ ಇರುತ್ತಾರೆ. ಅಂತಹ ಇನ್ಸ್ಪೆಕ್ಟರ್ ಕಮಿಷನರ್ ಮಾತು ಕೇಳ್ತಾರಾ ಎಂದು ಪ್ರಶ್ನಿಸಿದರು.
ಎಂಎಲ್ಎ, ಮಿನಿಸ್ಟರ್ ಮನೆ ಕಾಯುತ್ತಾ ಇರುತ್ತಾರೆ. ಇದು ಗಮನ ಬೇರೆ ಕಡೆ ಸೆಳೆಯುವ ಯತ್ನ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೀತಾ ಇದೆ. ಇಂತವು ಆದಾಗ ಜನ ಇದನ್ನೇ ಮಾತನಾಡುತ್ತಾರೆ. ಅದನ್ನು ಮರೆತು ಬಿಡ್ತಾರೆ. ಜೋಡಣೆ ಮಾಡುವುದು ಇವರಿಗೆ ಗೊತ್ತಿಲ್ಲ. ವಿಭಜನೆ ಮಾಡುತ್ತಿದ್ದಾರೆ. ಜನರ ಮುಗ್ಧತೆ, ಒಳ್ಳೆತನವೇ ಇವರಿಗೆ ಬಂಡವಾಳ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಹುಬ್ಬಳ್ಳಿ ಘಟನೆ ತಡೆಯೋಕೆ ಆಗ್ತಿರಲಿಲ್ಲವಾ ಎಂದು ಪ್ರಶ್ನಿಸಿದ ಭಾಸ್ಕರ್ ರಾವ್ ಅವರು ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ನೀವು. ಆಗ ಇಂತಹ ಘಟನೆ ಆಗೋದಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಡುತ್ತಾರೆ. ಆ ಮೂಲಕ ಎತ್ತಿ ಕಟ್ಟುತ್ತಾರೆ. ಯಡಿಯೂರಪ್ಪ ಹೇಳಿದಂತೆ ನಾವೆಲ್ಲ ಒಂದೇ ತಾಯಿ ಮಕ್ಕಳು. ಒಂದೂವರೆ ವರ್ಷದ ಹಿಂದೆ ಇದೆಲ್ಲ ಇರಲಿಲ್ಲ. ಸರ್ಕಾರಕ್ಕೆ ಸಮಾಜಘಾತುಕ ಶಕ್ತಿಗಳ ಮೇಲಿನ ಹಿಡಿತ ತಪ್ಪಿದೆ ಎಂದು ಭಾಸ್ಕರ್ ರಾವ್ ಕಿಡಿಕಾರಿದರು.ಭಾಸ್ಕರ್ ರಾವ್ ಅವರು ಸದ್ಯ ಆಪ್ ಪಕ್ಷಕ್ಕೆ ಸೇರಿದ್ದಾರತೆ.. ಈ ಮೂಲಕ ರಾಜಕೀಯಕ್ಕೆ ಇಳಿದಿದ್ಧಾರೆ.