BIGGBOSS 8 : ಬಿಗ್ ಬಾಸ್ ಮನೆಯಲ್ಲಿ ಬೈಕ್ – ಅರವಿಂದ್ ಆಸೆ ಈಡೇರಿತು..!
ಬಿಗ್ ಬಾಸ್ ಫೈನಲ್ ಹತ್ರವಾಗ್ತಿದೆ.. ಗ್ರ‍್ಯಾಂಡ್ ಫಿನಾಲೆಗೆ ಅಬ್ಬಬ್ಬಾ ಅಂದ್ರೂ ಈ ವಾರ ಬಾಕಿ ಇದೆ.. ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ರ‍್ಧಿಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ.. ಇನ್ನೂ ಫೈನಲ್ಸ್ ಹತ್ರ ಆಗ್ತಿದ್ದಂತೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ಕೊಡುತ್ತಾ , ವಿಶೇಷ ಗಿಫ್ಟ್ ನೀಡ್ತಿದೆ.
ಇನ್ನೇನು ಈ ವಾರ ಮುಗಿಯುತ್ತಿದ್ದಂತೆ ಗ್ರ‍್ಯಾಂಡ್ ಫಿನಾಲೆ ಇರೋದ್ರಿಂದ ಸ್ಪರ್ಧಿಗಳಿಗೆ ಸಾಕಷ್ಟು ವಿಶೇಷ ಗಿಫ್ಟ್ಗಳನ್ನ ನೀಡುತ್ತಾ ಅವರನ್ನ ಖುಷಿ ಪಡಿಸಲಾಗ್ತಿದೆ.. ಅದ್ರಂತೆ ಈಗ ಅರವಿಂದ್ ಆಸೆ ಕೂಡ ಈಡೇರಿದೆ.
ಹೌದು.. ಇಲ್ಲಿವರೆಗೂ ಈಡೇರದ ಆಸೆಯನ್ನು ಮನೆಯವರು ಬಿಗ್ಬಾಸ್ ಮನೆಯಲ್ಲಿ ಇಟ್ಟಿರುವ ಕಿವಿ ಆಕೃತಿಯ ಮುಂದೆ ಹೇಳಿಕೊಳ್ಳಿ, ಇಡೇರಿಸಲು ಸಾಧ್ಯವಾರೆ ಖಂಡಿತ ಬಿಗ್ಬಾಸ್ ಈಡೇರಿಸುತ್ತಾರೆ ಎಂದು ಸೂಚನೆಯನ್ನು ನೀಡಲಾಗಿತ್ತು.
ಕೆ.ಪಿ ಅರವಿಂದ್ ತಾವು ಎಂಟ್ರಿಗೆ ಬಂದ ಬೈಕ್ನನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು.
ಬಿಗ್ಬಾಸ್ ನನಗೆ ಈಡೇರಿಸದಂತ ಒಂದು ಆಸೆ ಇದೆ. ನಾನು ಎಂಟ್ರಿಗೆ ಬಂದ ಬೈಕ್ನನ್ನು ಗರ‍್ಡನ್ ಏರಿಯಾದಲ್ಲಿ ನೋಡಬೇಕು ಅಂತ ಅಂದುಕೊಂಡಿದ್ದೇನೆ. ಅದಕ್ಕೆ ಎಂದಾದರೂ ಅವಕಾಶ ಸಿಗಬಹುದು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ನಿಮ್ಮ ಕೈಯಲ್ಲಿ ಸಾಧ್ಯ ಆದ್ರೆ ಆ ಬೈಕ್ನನ್ನು ಇಲ್ಲಿ ನೋಡಲು ಇಷ್ಟ ಪಡುತ್ತೇನೆ ಎಂದಿದ್ದರು
ಅದರಂತೆ ಬಿಗ್ಬಾದಸ್ ದೊಡ್ಮನೆಯ ಗರ‍್ಡನ್ ಏರಿಯಾಕ್ಕೆ ಅರವಿಂದ್ರಆವರ ಬೈಕ್ನಿನ್ನು ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಜಗಮಗಿಸುವ ಲೈಟ್ಗಡಳ ಮಧ್ಯೆ ಅರವಿಂದ್ ಬೈಕ್ ನೋಡಿ ಮನೆಮಂದಿಯೆಲ್ಲಾ ಸಖತ್ ಖುಷಿ ಆಗಿದ್ದಾರೆ. ಜೊತೆಗೆ ಬೈಕ್ ನೋಡಿ ಅರವಿಂದ್ ಕೂಡ ಸಂತಸಗೊಂಡು
ಬಿಗ್ ಬಾಸ್ ಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಬೈಕ್ ಬಗ್ಗೆ ವಿವರಿಸಿದ ಅರವಿಂದ್ ಇದು ಎನ್ಡ್ಯೂರೋ ಗಾಡಿ ಎಂದು ಸ್ಟರ‍್ಟ್ ಮಾಡಿ ತೋರಿಸುತ್ತಾರೆ. ನಂತರ ಇದರಲ್ಲಿಯೇ ನಾನು ಬಿಗ್ಬಾಸ್ ಎಂಟ್ರಿ ಸ್ಟೇಜ್ ತನಕ ಬಂದಿದ್ದು, ಆದರೆ ನಾನು ಎಷ್ಟೋ ಬಾರಿ ಅಂದುಕೊಳ್ಳುತ್ತಿದ್ದೆ. ಗರ‍್ಡನ್ ಏರಿಯಾದಲ್ಲಿ ಎಲ್ಲದರೂ ಬೈಕ್ ಇದ್ದಿದ್ರೆ ಚೆನ್ನಾಗಿರುತ್ತಿತ್ತು ಅಂತ. ಹಾಗಾಗಿ ಬಿಗ್ಬಾಸ್ರನ್ನು ಕೇಳಿಕೊಂಡಿದ್ದೆ. ನನ್ನ ಕನಸು ನಿಜ ಆಯಿತು ಎನ್ನುತ್ತಾ ಮತ್ತೊಮ್ಮೆ ಬಿಗ್ಬಾಸ್ಗೆ ಧನ್ಯವಾದ ಸಲ್ಲಿಸಿದ್ದಾರೆ.







