ಹೋಂ ಕ್ವಾರಂಟೈನ್‌ನಲ್ಲಿ ಬಿಜೆಪಿ ಶಾಸಕ ಶಿವನಗೌಡ ನಾಯಕ..!
ರಾಯಚೂರು: ಕೊರೊನಾ ಸೋಂಕಿನ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ ರಾಯಚೂರಿನ ದೇವದುರ್ಗದ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಅವರು ಹೋಂ ಕ್ವರಂಟೈನ್‌ಗೆ ಒಳಗಾಗಿದ್ದಾರೆ. ಜೂ.೧೪ ರಂದು ಸೋಂಕಿತ ವ್ಯಕ್ತಿಯೊಬ್ಬರು ಶಾಸಕರನ್ನು ಭೇಟಿ ಮಾಡಿದ್ದರು. ಅವರಿಗೆ ಇದೀಗ ಪಾಸಿಟಿವ್ ಇರುವುದು ದೃಢವಾಗಿದ್ದು, ಶಾಸಕರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಾಸಕರು ೧೫ ದಿನಗಳ ಕಾಲ ಯಾರೂ ನನ್ನು ಭೇಟಿ ಮಾಡುವುದು ಬೇಡ. ಅಗತ್ಯ ಕೆಲಸವಿದ್ದರೆ ನನ್ನ ಆಪ್ತ ಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ. ಇನ್ನೂ ಅಗತ್ಯ ಬಿದ್ದರೆ ನನ್ನ ದೂರವಾಣಿಗೆ ಸಂಪರ್ಕಿಸಿ. ಆದ್ರೆ ಯಾರೂ ಭೇಟಿಯಾಗುವುದು ಬೇಡ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಿದ್ದಾರೆ. ಅಲ್ದೇ ಈಗಾಗಲೇ ಕಳೆದ ವಾರವೇ ಕೋವಿಡ್ ಟೆಸ್ಟ್ ಮಾಡಿಸಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.







