ಕವರಟ್ಟಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ (Lakshadweep) ಸಮುದ್ರ ತೀರಕ್ಕೆ ಭೇಟಿ ನೀಡಿದ ನಂತರ ಪ್ರವಾಸಿಗರ ಹೃದಯ ಲಕ್ಷದ್ವೀಪದತ್ತ ಸಾಗುತ್ತಿದೆ. ಅಲ್ಲದೇ, ಮಾಲ್ಡೀವ್ಸ್ ಬೈಕಾಟ್ ಟ್ರೆಂಡ್ ಹೆಚ್ಚಾಗಿದೆ.
ಪ್ರಧಾನಿ ಮೋದಿ, ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ ಮಾಲ್ಡೀವ್ಸ್ (Maldives) ಸಚಿವರೊಬ್ಬರು, ಭಾರತವು ಮಾಲ್ಡೀವ್ಸ್ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಭಾರತವು ಮಾಲ್ಡೀವ್ಸ್ ಅನ್ನು ಟಾರ್ಗೆಟ್ ಮಾಡುತ್ತಿದೆ. ಮಾಲ್ಡೀವ್ಸ್ನ ಬೀಚ್ ಪ್ರವಾಸೋದ್ಯಮದ (Maldives Beach Tourism) ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲು ಇವೆ. ಭಾರತದ ಬೀಚ್ಗಳು ಕೊಳಕಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.
ಆದರೆ, ಇದಕ್ಕೆ ಅಲ್ಲಿನ ಮಾಜಿ ಅಧ್ಯಕ್ಷರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಕೇಂದ್ರಾಡಳಿತ ಪ್ರದೇಶಕ್ಕೆ ಮೋದಿ ಅವರು ಭೇಟಿ ನೀಡಿದ್ದಾಗ, ಅಲ್ಲಿನ ವಿಹಂಗಮ ಸಮುದ್ರ ತೀರದಲ್ಲಿ ಫೋಟೋ ಶೂಟ್ ಹಾಗೂ ವಿಡಿಯೋ ತೆಗೆಸಿದ್ದರು. ದ್ವೀಪ ರಾಷ್ಟ್ರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದರು. ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಪ್ರವಾಸ ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕರೆ ಕೊಟ್ಟಿದ್ದರು.ಈ ಬೆನ್ನಲ್ಲಿಯೇ ಬಹುತೇಕ ಭಾರತೀಯರು ಲಕ್ಷದ್ವೀಪದತ್ತ ಮುಖ ಮಾಡಿದ್ದಾರೆ.
ಹೆಚ್ಚಿನ ಭಾರತೀಯರು ಪ್ರವಾಸವನ್ನು ತಮ್ಮ ಪಟ್ಟಿಯಿಂದ ಕೈಬಿಟ್ಟು, ಲಕ್ಷದ್ವೀಪ ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ʻ#ಬಾಯ್ಕಾಟ್ ಮಾಲ್ಡೀವ್ಸ್ʼ ಎಂಬ ಹ್ಯಾಷ್ಟ್ಯಾಗ್ ಎಕ್ಸ್ ತಾಣದಲ್ಲಿ ಫುಲ್ ಟ್ರೆಂಡ್ ಆಗುತ್ತಿದೆ.







