Chetan Sharma : ಗಂಗೂಲಿ – ವಿರಾಟ್ ನಡುವೆ ಅಹಂ; ಸ್ಟ್ರಿಂಗ್ ಆಪರೇಷನ್ ಸ್ಪೋಟಕ ಸತ್ಯ ಬಯಲು…
ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಇದೀಗ ಭಾರೀ ವಿವಾದದಲ್ಲಿ ಸಿಲುಕಿದ್ದಾರೆ. ಮಂಗಳವಾರ ಜೀ ನ್ಯೂಸ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಆಯ್ಕೆ ಸಮಿತಿಯ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಈ ಕಾರಣದಿಂದಾಗಿ ಚೇತನ್ ಶರ್ಮಾ ತಲೆದಂಡವಾಗುವ ಸಾಧ್ಯತೆಯೂ ಹೆಚ್ಚಿದೆ.
ಸ್ಟ್ರಿಂಗ್ ಆಪರೇಷನ್ ನ್ ವಿಡಿಯೋ ನಲ್ಲಿ ಮಾತನಾಡಿರುವ ಪ್ರಕಾರ “ಖ್ಯಾತ ಆಟಗಾರರು ಸೇರಿದಂತೆ ಅನೇಕ ಗಾಯಾಳು ಕ್ರಿಕೆಟಿಗರು ಫಿಟ್ನೆಸ್ ಸಾಧಿಸಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಈ ಚುಚ್ಚು ಮದ್ದುಗಳು ನೋವು ನಿವಾರಕವಲ್ಲ ಇವು ಡೋಪಿಂಗ್ ಪರೀಕ್ಷೆಯಲ್ಲೂ ಸಿಕ್ಕಿಬೀಳುವುದಿಲ್ಲ. ಬಿಸಿಸಿಐ ವೈದ್ಯರು ಮಾತ್ರವಲ್ಲದೇ ಹಲವು ಆಟಗಾರರು ತಮ್ಮದೇ ಆದ ವೈದ್ಯರನ್ನ ಹೊಂದಿದ್ದಾರೆ. ಬಿಸಿಸಿಐ ಈ ಆಟಗಾರರನ್ನ ಗಮನಿಸದೇ ಬಿಡುತ್ತಿದೆ ಎಂದು ಟೀಕಿಸಿದ್ದಾರೆ. ಹಾಗಾಗಿ ಶೇ.80-85ರಷ್ಟು ಫಿಟ್ ನೆಸ್ ನೊಂದಿಗೆ ತಂಡಕ್ಕೆ ಮರಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ T20I ಸರಣಿಗೆ ಗಾಯಗೊಂಡಿರುವ ವೇಗಿ ಬುಮ್ರಾ ಮರಳುವ ಬಗ್ಗೆ ತನಗೆ ಮತ್ತು ತಂಡದ ನಿರ್ವಹಣೆಗೆ ಭಿನ್ನಾಭಿಪ್ರಾಯಗಳಿವೆ ಎಂದು ಚೇತನ್ ಬಹಿರಂಗಪಡಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ನಂತರದ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಬುಮ್ರಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ ಮತ್ತು ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳಲ್ಲಿ ಭಾಗವಹಿಸುತ್ತಿಲ್ಲ.
ಇನ್ನೂ ಬಿಸಿಸಿಐ ಮಾಜಿ ಮುಖ್ಯಸ್ಥ ಗಂಗೂಲಿ ಮತ್ತು ಮಾಜಿ ನಾಯಕ ಕೊಹ್ಲಿ ನಡುವೆ ಗಂಭೀರ ಅಹಂ ಸಮಸ್ಯೆ ಇತ್ತು ಎಂದು ಚೇತನ್ ಹೇಳಿದ್ದಾರೆ. ಸೌರವ್ ಗೆ ಕೊಹ್ಲಿ ವರ್ತನೆ ಇಷ್ಟವಾಗಲಿಲ್ಲ. ಬಿಸಿಸಿಐ ಮುಖ್ಯಸ್ಥರಿಂದಲೇ ನಾಯಕತ್ವ ಕಳೆದುಕೊಂಡೆ ಎಂದು ವಿರಾಟ್ ಭಾವಿಸಿದ್ದರು. ಆಯ್ಕೆ ಸಮಿತಿಯ ವಿಡಿಯೋ ಸಭೆಯಲ್ಲಿ ನನ್ನೊಂದಿಗೆ ಒಂಬತ್ತು ಮಂದಿ ಭಾಗವಹಿಸಿದ್ದರು. ನಾಯಕತ್ವವನ್ನು ಮರುಪರಿಶೀಲಿಸುವಂತೆ ದಾದಾ ವಿರಾಟ್‌ಗೆ ಹೇಳಿದ್ದರು. ಆದರೇ ವಿರಾಟ್ ಕೇಳಲಿಲ್ಲ ಎಂದು ಚೇತನ್ ವಿವರಿಸಿದರು. 2021ರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಒಂದೂವರೆ ಗಂಟೆಯ ಹಿಂದೆ ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎಂದು ಹೇಳಿರುವುದು ಗೊತ್ತೇ ಇದೆ. ವಿರಾಟ ಸುಳ್ಳು ಹೇಳಿದ್ದಾರೆ. ಕೊಹ್ಲಿ ಸ್ಟೈಲ್ ಇಷ್ಟವಾಗದೇ ಇದ್ದಾಗ ದಾದಾ ರೋಹಿತ್ ಶರ್ಮಾ ಅವರತ್ತ ಒಲವು ತೋರಿದ್ದರು ಎಂದು ಚೇತನ್ ಹೇಳಿದ್ದಾರೆ.
ಮತ್ತೊಂದೆಡೆ ವಿರಾಟ್ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಚೇತನ್ ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಅಮಿತಾಬ್ ಮತ್ತು ಧರ್ಮೇಂದ್ರ ಅವರಂತಹ ದೊಡ್ಡ ಸ್ಟಾರ್‌ಗಳು ಎಂದು ಹೇಳಿದರು. ಗಿಲ್ ಅವರಂತಹ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲು ಸಮಿತಿಯು ಟಿ 20ಯಿಂದ ವಿರಾಟ್ ಮತ್ತು ರೋಹಿತ್‌ಗೆ ‘ವಿಶ್ರಾಂತಿ’ ನೀಡಿದೆ ಎಂದು ಅವರು ಹೇಳಿದರು. ಅಲ್ಲದೆ.. ಈ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಅವರು ಮುಖ್ಯ ಕೋಚ್ ದ್ರಾವಿಡ್ ಅವರೊಂದಿಗೆ ಚರ್ಚಿಸಿದ ವಿಷಯಗಳನ್ನೂ ಹಂಚಿಕೊಂಡಿದ್ದಾರೆ.
Chetan Sharma Makes Big Disclosure On Virat Kohli-saurav Ganguly Controversy






