‘ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಈಗ ವೆಬ್ ಸೀರೀಸ್ – ಟ್ರೈಲರ್ ಬಿಡುಗಡೆ
ಹಂಬಲ್ ಪೊಲಿಟೀಷಿಯನ್ ನೋಗರಾಜ್ ಈಸ ಬ್ಯಾಕ್….. ನಟ, ನಿರೂಪಕ ದಾನಿಸ್ ಸೇಠ್ ಅಭಿನಯದ ಕಾಮಿಡಿ ವೆಬ್ ಸೀರೀಸ್ ‘ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಟ್ರೈಲರ್ ಬಿಡುಗಡೆಯಾಗಿದೆ.
ಈ ಹಿಂದೆ ರೇಡಿಯೋದಲ್ಲಿ ಜಾಕಿಯಾಗಿದ್ದಾಗಿ ಧ್ವನಿ ರೂಪದಲ್ಲಿ ಮೂಡಿಬಂದಿದ್ದ ಅವರ ‘ನೋಗರಾಜ್’ ಪಾತ್ರ ನಂತರ ಸಿನಿಮಾ ರೂಪ ಪಡೆದುಕೊಂಡ ತೆರೆಗೆ ಬಂದು ಮೆಚ್ಚುಗೆ ಗಳಿಸಿತ್ತು. ಇದೀಗ ಮತ್ತೆ ವೆಬ್ ಸೀರೀಸ್ ರೂಪದಲ್ಲಿ ಮಜವಾದ ಕತೆಯೊಂದಿಗೆ ‘ಹಂಬಲ್ ಪೊಲಿಟಿಶಿಯನ್ ನೋಗರಾಜ್’ ಜನರ ಮುಂದೆ ಬರಲಿದ್ದಾನೆ.
ವೂಟ್ ಆಪ್ ನಲ್ಲಿ ಸೀರಿಸ್ ಬಿಡುಗಡೆಯಾಗಲಿದ್ದು, ಒಟ್ಟು 10 ಎಪಿಸೋಡ್ಗಳನ್ನು ಹೊಂದಿದೆ. ಇದೀಗ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ನಾಗರಾಜ್ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡುತ್ತಾನೆ ಎಂಬುದನ್ನು ಸೀರೀಸ್ ಕಟ್ಟಿಕೊಡಲಿದೆ.