ADVERTISEMENT
Monday, March 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

Shwetha by Shwetha
March 30, 2026
in ದೇಶ - ವಿದೇಶ, National, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್ ಆಗಿ ಬದಲಾಗೋಕೆ ಹೋಗ್ತಿದೆ. ಕೇಂದ್ರ ಸರ್ಕಾರ ಹೊಸ ವೇತನ ನಿಯಮಗಳನ್ನ ತರ್ತಿದೆ. ಇದು ಕೇಳಿದ ತಕ್ಷಣ ನಮಗೆಲ್ಲಾ ಬರೋ ಒಂದೇ ಡೌಟ್ ಅಂದ್ರೆ, ನನ್ನ ಸಂಬಳ ಜಾಸ್ತಿ ಆಗುತ್ತಾ ಇಲ್ಲ ಕಟ್ ಆಗುತ್ತಾ ಅನ್ನೋದು. ಬನ್ನಿ, ಇದೇನ್ ಕಥೆ ಅಂತ ಹೇಳ್ತೀನಿ ಕೇಳಿ.

1. ಬೇಸಿಕ್ ಸ್ಯಾಲರಿ ಇನ್ಮೇಲೆ ಅರ್ಧಕ್ಕರ್ಧ ಇರಲೇಬೇಕು

Related posts

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026
ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

March 30, 2026

ಈಗ ಕಂಪನಿಗಳು ಏನ್ ಮಾಡ್ತಿವೆ ಅಂದ್ರೆ ಟ್ಯಾಕ್ಸ್ ಉಳಿಸೋಕೆ ಅಥವಾ ತಾವೇನ್ ಪಿಎಫ್ ಕಟ್ಟಬೇಕು ಅದನ್ನ ಕಮ್ಮಿ ಮಾಡೋಕೆ ಅಂತ, ಬೇಸಿಕ್ ಸ್ಯಾಲರಿನ ಬರೀ ಮೂವತ್ತೋ ನಲವತ್ತೋ ಪರ್ಸೆಂಟ್ ಇಡ್ತಾರೆ. ಉಳಿದಿದ್ದೆಲ್ಲಾ ಎಚ್ ಆರ್ ಎ, ಟ್ರಾವೆಲ್ ಅಲೋವೆನ್ಸ್ ಅಂತ ಕೊಡ್ತಾರೆ. ಆದ್ರೆ ಏಪ್ರಿಲ್ ಒಂದರ ನಂತ್ರ ಈ ಆಟ ನಡೆಯಲ್ಲ. ನಿಮ್ಮ ಒಟ್ಟು ಸಂಬಳದಲ್ಲಿ ಕನಿಷ್ಠ ಐವತ್ತು ಪರ್ಸೆಂಟ್ ಬೇಸಿಕ್ ಸ್ಯಾಲರಿ ಆಗಿರಲೇಬೇಕು ಅಂತ ಸರ್ಕಾರ ಕಡ್ಡಿ ಮುರಿದ ಹಾಗೆ ಹೇಳ್ತಿದೆ.

2. ಹಾಗಾದ್ರೆ ಕೈಗೆ ಬರೋ ಸಂಬಳ ಕಮ್ಮಿ ಆಗುತ್ತಾ

ಇಲ್ಲೇ ಇರೋದು ನೋಡಿ ಅಸಲಿ ಟ್ವಿಸ್ಟ್. ಬೇಸಿಕ್ ಸ್ಯಾಲರಿ ಜಾಸ್ತಿ ಆದ ತಕ್ಷಣ ಆಟೋಮ್ಯಾಟಿಕ್ ಆಗಿ ನಿಮ್ಮ ಸಂಬಳದಿಂದ ಕಟ್ ಆಗೋ ಪಿಎಫ್ ದುಡ್ಡು ಕೂಡ ಜಾಸ್ತಿ ಆಗುತ್ತೆ. ಯಾಕಂದ್ರೆ ಪಿಎಫ್ ಕಟ್ ಮಾಡೋದು ಬೇಸಿಕ್ ಸ್ಯಾಲರಿ ಮೇಲೇನೆ. ಹಾಗಾಗಿ ತಿಂಗಳ ಕೊನೆಗೆ ನಿಮ್ಮ ಅಕೌಂಟಿಗೆ ಬೀಳೋ ನಗದು ಸ್ವಲ್ಪ ಕಮ್ಮಿ ಆಗಬಹುದು. ಆದ್ರೆ ಟೆನ್ಷನ್ ಬೇಡ, ನೀವು ಎಷ್ಟು ಪಿಎಫ್ ಕಟ್ ಮಾಡಿಸ್ತೀರೋ ಅಷ್ಟೇ ದುಡ್ಡನ್ನ ನಿಮ್ಮ ಕಂಪನಿಯವರೂ ಹಾಕಲೇಬೇಕು. ಅಂದ್ರೆ ಲಾಂಗ್ ಟರ್ಮ್ ಅಲ್ಲಿ ನಿಮ್ಮ ಸೇವಿಂಗ್ಸ್ ಡಬಲ್ ಆಗುತ್ತೆ.

3. ವಯಸ್ಸಾದ ಮೇಲೆ ರಾಜನ ತರ ಇರಬಹುದು

ಈಗ ಕೈಗೆ ಸ್ವಲ್ಪ ಕಾಸು ಕಮ್ಮಿ ಸಿಕ್ರೂ ಫ್ಯೂಚರ್ ಅಲ್ಲಿ ಸಕ್ಕತ್ ಲಾಭ ಇದೆ ಬಾಸ್. ನೀವು ಐದು ವರ್ಷ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ಬಿಡುವಾಗ ಗ್ರಾಚ್ಯುಟಿ ಅಂತ ದೊಡ್ಡ ಅಮೌಂಟ್ ಸಿಗುತ್ತೆ ಗೊತ್ತಾ? ಅದು ಕೂಡ ಲೆಕ್ಕ ಹಾಕೋದು ಬೇಸಿಕ್ ಸ್ಯಾಲರಿ ಮೇಲೇನೆ. ಈಗ ಬೇಸಿಕ್ ಸ್ಯಾಲರಿ ಜಾಸ್ತಿ ಆಗೋದ್ರಿಂದ ನೀವು ಕೆಲಸ ಬಿಡುವಾಗ ಅಥವಾ ರಿಟೈರ್ ಆಗುವಾಗ ಕೈಗೆ ಭಾರಿ ಮೊತ್ತದ ದುಡ್ಡು ಸಿಗುತ್ತೆ. ಅಷ್ಟೊತ್ತಿಗೆ ಪಿಎಫ್ ನಲ್ಲೂ ಲಕ್ಷಾಂತರ ರೂಪಾಯಿ ಸೇರಿರುತ್ತೆ.

4. ವಾರಕ್ಕೆ ನಾಲ್ಕೇ ದಿನ ಕೆಲಸ ಮೂರು ದಿನ ರಜೆ ಮಜಾ

ಸಂಬಳದ ಜೊತೆಗೆ ಕೆಲಸದ ಟೈಮಿಂಗ್ಸ್ ಬಗ್ಗೆನೂ ಹೊಸ ರೂಲ್ಸ್ ಬರ್ತಿದೆ. ಕಂಪನಿಗಳು ಬೇಕಿದ್ರೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಿಸಿ, ಮೂರು ದಿನ ರಜೆ ಕೊಡಬಹುದು. ಆದ್ರೆ ಇಲ್ಲೊಂದು ಕಂಡೀಷನ್ ಇದೆ. ವಾರಕ್ಕೆ ನಾಲ್ಕೇ ದಿನ ಕೆಲಸ ಅಂದ್ರೆ, ದಿನಕ್ಕೆ ಹನ್ನೆರಡು ಗಂಟೆ ಆಫೀಸಲ್ಲಿ ಕೂತು ಒದ್ದಾಡಬೇಕು. ವಾರಕ್ಕೆ ಒಟ್ಟು ನಲವತ್ತೆಂಟು ಗಂಟೆ ಕೆಲಸ ಮಾಡಲೇಬೇಕು ಅನ್ನೋ ಲೆಕ್ಕಾಚಾರ ಇದು. ಐದು ದಿನ ಕೆಲಸ ಅಂದ್ರೆ ದಿನಕ್ಕೆ ಒಂಬತ್ತರಿಂದ ಹತ್ತು ಗಂಟೆ ಆಫೀಸಲ್ಲಿ ಇರಬೇಕಾಗುತ್ತೆ. ಇದು ಎಷ್ಟರ ಮಟ್ಟಿಗೆ ಜನಕ್ಕೆ ಇಷ್ಟ ಆಗುತ್ತೆ ಅಂತ ಕಾದು ನೋಡಬೇಕು.

5. ಕಮ್ಮಿ ಸಂಬಳಕ್ಕೆ ದುಡಿಸಿಕೊಳ್ಳೋ ಹಾಗಿಲ್ಲ

ತುಂಬಾ ಕಮ್ಮಿ ಸಂಬಳ ಕೊಟ್ಟು ಜಾಸ್ತಿ ದುಡಿಸಿಕೊಳ್ಳೋ ಕಂಪನಿಗಳಿಗೆ ಈ ಹೊಸ ರೂಲ್ಸ್ ಇಂದ ದೊಡ್ಡ ಬ್ರೇಕ್ ಬೀಳುತ್ತೆ. ಪ್ರತಿಯೊಬ್ಬರಿಗೂ ಒಂದು ಮಿನಿಮಮ್ ಗೌರವಯುತವಾದ ಸಂಬಳ ಸಿಗಲೇಬೇಕು ಅಂತ ಕನಿಷ್ಠ ವೇತನದ ಲಿಮಿಟ್ ಅನ್ನ ಸರ್ಕಾರ ಜಾಸ್ತಿ ಮಾಡ್ತಿದೆ. ಇದರಿಂದ ಸಣ್ಣ ಪುಟ್ಟ ಕಂಪನಿಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡೋ ನಮ್ಮ ಶ್ರಮಿಕ ವರ್ಗಕ್ಕೆ ನಿಜಕ್ಕೂ ಒಳ್ಳೇದಾಗುತ್ತೆ.

ಕೊನೆಯದಾಗಿ ಹೇಳೋದು ಇಷ್ಟೇ

ಏಪ್ರಿಲ್ ಒಂದರಿಂದ ಬರೋ ಈ ಬದಲಾವಣೆ ನಮ್ಮ ದಿನನಿತ್ಯದ ಲೈಫ್ ಸ್ಟೈಲ್ ಮೇಲೆ ಪಕ್ಕಾ ಎಫೆಕ್ಟ್ ಮಾಡುತ್ತೆ. ಕೈಗೆ ಬರೋ ದುಡ್ಡು ಸ್ವಲ್ಪ ಕಮ್ಮಿ ಆಗೋದ್ರಿಂದ, ನಾವೇ ನಮ್ಮ ಮನೆ ಖರ್ಚುಗಳನ್ನ ಸ್ವಲ್ಪ ಕಂಟ್ರೋಲ್ ಮಾಡ್ಕೊಂಡು ಬಜೆಟ್ ಹಾಕೋಬೇಕು. ಇಎಂಐ ಕಥೆನೂ ಸ್ವಲ್ಪ ನೋಡ್ಕೋಬೇಕು. ಆದ್ರೆ ಫ್ಯೂಚರ್ ದೃಷ್ಟಿಯಿಂದ ನೋಡಿದ್ರೆ ನಮಗೆ ವಯಸ್ಸಾದಾಗ ಯಾರ ಮುಂದೆಯೂ ಕೈ ಒಡ್ಡದೆ, ನಮ್ಮ ಪಾಡಿಗೆ ನಾವು ಆರಾಮಾಗಿ ಇರೋಕೆ ಈ ರೂಲ್ಸ್ ತುಂಬಾ ಹೆಲ್ಪ್ ಮಾಡುತ್ತೆ. ಏನೇ ಆದ್ರೂ ನಿಮ್ಮ ಆಫೀಸ್ ಎಚ್ ಆರ್ ಹತ್ರ ಈಗ್ಲೇ ಒಂದು ಮಾತು ಕೇಳಿ, ಮುಂದಿನ ತಿಂಗಳಿಂದ ನನ್ನ ಪೇ ಸ್ಲಿಪ್ ಹೆಂಗಿರತ್ತೆ ಅಂತ ತಿಳ್ಕೊಳ್ಳೋದು ಜಾಣತನ.

ShareTweetSendShare
Join us on:

Related Posts

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

ಗಲ್ಫ್ ಸಮರದ ಬಿಸಿ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಹಾಹಾಕಾರ ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತೆ ಎಂದ ಸಚಿವ ಮುನಿಯಪ್ಪ

ಗಲ್ಫ್ ಸಮರದ ಬಿಸಿ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಹಾಹಾಕಾರ ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತೆ ಎಂದ ಸಚಿವ ಮುನಿಯಪ್ಪ

by Shwetha
March 30, 2026
0

ಗಲ್ಫ್ ಯುದ್ಧ ಮೂವತ್ತು ದಿನಗಳನ್ನು ಪೂರೈಸಿದ್ದು ಇದರ ನೇರ ಹೊಡೆತ ಕರುನಾಡಿನ ಜನಸಾಮಾನ್ಯರ ಅಡುಗೆ ಮನೆಯ ಮೇಲೆ ಬಿದ್ದಿದೆ. ರಾಜ್ಯಾದ್ಯಂತ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದ್ದು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram