ಹಾಸನ : ಜಿಲ್ಲೆಯಲ್ಲಿ ಕೊರೊನಾ ಸ್ಫೋಟ ಮುಂದುವರಿದಿದ್ದು, ಇಂದು ಒಂದೇ ದಿನ 217 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 4 ಜನ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ.
ಇದರೊಂದಿಗೆ ಮೃತರ ಸಂಖ್ಯೆ 273ಕ್ಕೆ ಸೋಂಕಿತರ ಸಂಖ್ಯೆ 13,9509ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಒಟ್ಟು 13,9509 ಸೋಂಕಿತರ ಪೈಕಿ, ಜಿಲ್ಲಾಸ್ಪತ್ರೆಯಲ್ಲಿ 2,548 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ 56 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 11,138 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಅರಸೀಕೆರೆಯಲ್ಲಿ 20 ಚನ್ನರಾಯಪಟ್ಟಣದಲ್ಲಿ 64 ಆಲೂರು ತಾಲೂಕಿನಲ್ಲಿ ಇಬ್ಬರು, ಹಾಸನ ತಾಲೂಕಿನಲ್ಲಿ 63, ಹೊಳೆನರಸೀಪುರ ತಾಲೂಕಿನಲ್ಲಿ 11,
ಅರಕಲಗೂಡು ತಾಲೂಕಿನಲ್ಲಿ 14, ಬೇಲೂರು ತಾಲೂಕಿನಲ್ಲಿ 20, ಸಕಲೇಶಪುರ ತಾಲೂಕಿನಲ್ಲಿ 23 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.







