Covid19 Updates : 24 ಗಂಟೆಯಲ್ಲಿ ಹೊಸದಾಗಿ 7,554 ಕೊರೊನಾ ಪ್ರಕರಣಗಳು ಪತ್ತೆ
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 7,554 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದು ಹಿಂದಿನ ದಿನಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 4,29,38,599 ತಲುಪಿದೆ.
ದಿನದ ಏರಿಕೆ ಪ್ರಮಾಣವು 0.51 ರಷ್ಟಿದ್ದು, ವಾರದ ಏರಿಕೆ ಪ್ರಮಾಣವು 0.62ರಷ್ಟಿದೆ. ಹಾಗೇ 7,416 ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣವು 98.69ರಷ್ಟಿದೆ. ಸಕ್ರೀಯ ಪ್ರಕರಣಗಳು 85,680, ಇದೆ. 24 ಗಂಟೆಯಲ್ಲಿ 223 ಜನ ಸಾವನಪ್ಪಿದ್ದಾರೆ. ಸಾವಿನ ಸಂಖ್ಯೆ 5,14,246 ಕ್ಕೆ ಏರಿಕೆಯಾಗಿದೆ.








