ಸಿಪಿಎಲ್ ನ ಹಾಲಿ ಚಾಂಪಿಯನ್ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡಕ್ಕೆ ಜೇಸನ್ ಹೋಲ್ಡರ್ ಸಾರಥಿ..!
ಕೆರೆಬಿಯನ್ ಪ್ರಿಮಿಯರ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಬಾರ್ಬೋಡಸ್ ಟ್ರಿಡೆಂಟ್ಸ್ ತಂಡ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹಾಲಿ ಚಾಂಪಿಯನ್ ಆಗಿರುವ ಬಾರ್ಬೊಡಸ್ ಟ್ರಿಡೆಂಟ್ ತಂಡ ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುವ ಇರಾದೆಯಲ್ಲಿದೆ. ಈ ಹಿಂದೆ 2014ರಲ್ಲಿ ಚಾಂಪಿಯನ್ ಆಗಿದ್ದ ಬಾರ್ಬೊಡಸ್ ತಂಡ ಟೂರ್ನಿಯಲ್ಲಿ ಒಟ್ಟು ಎರಡು ಬಾರಿ ಪ್ರಶಸ್ತಿ ಪಡೆದ್ರೆ, 2015ರಲ್ಲಿ ರನ್ನರ್ ಅಪ್‍ಗೆ ಸಮಾಧಾನಪಟ್ಟುಕೊಳ್ಳಬೇಕಾಗಿತ್ತು.
ಈ ಬಾರಿಯ ಸಿಪಿಎಲ್ ನಲ್ಲಿ ಬಾರ್ಬೊಡಸ್ ತಂಡವನ್ನು ವೆಸ್ಟ್ ಇಂಡೀಸ್ ನಾಯಕನಾಗಿರುವ ಜೇಸನ್ ಹೋಲ್ಡರ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. ರಶೀದ್ ಖಾನ್ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಒಟ್ಟು ತಂಡದಲ್ಲಿ 12 ಸ್ಥಳೀಯ ಹಾಗೂ 5 ವಿದೇಶಿ ಆಟಗಾರರು ಇದ್ದಾರೆ.
ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ
ರಶೀದ್ ಖಾನ್, ಜೇಸನ್ ಹೋಲ್ಡರ್, ಕೊರಿಯ್ ಆಂಡರ್ಸನ್, ಶಮ್ರಾಹ್ ಬ್ರೂಕ್ಸ್, ಮಿಟ್ಚೆಲ್ ಸ್ಯಾಂಟ್ನರ್, ಜಾನ್ಸನ್ ಚಾಲ್ರ್ಸ್, ಶಾಯ್ ಹೋಪ್, ಹೇಡನ್ ವಾಲ್ಶ್ ಜೂನಿಯರ್, ಆಶ್ಲೇಯ್ ನರ್ಸ್, ಜೋನಾಥನ್ ಕಾರ್ಟರ್, ರೇಮೊನ್ ರಿಫೇರ್, ಕೈಲ್ ಮೇಯರ್ಸ್, ಜೋಶುವಾ ಬಿಷಪ್, ನೈಯಿಮ್ ಯಂಗ್, ಜಸ್ಟನ್ ಗ್ರೀವ್ಸ್, ಕಿಯೊನ್ ಹಾಡಿರ್ಂಗ್, ಶಾಯನ್ ಜಹಂಗೀರ್