ಆರ್ಸಿಬಿಯನ್ಸ್ ಕೇಳಿ… ಬೆಂಗಳೂರು ತಂಡಕ್ಕೆ ವಾರ್ನರ್ ನಾಯಕ.. david warner rcb captain saaksha tv
IPL-2022 ಋತುವಿನ ಮೆಗಾ ಹರಾಜು ಶೀಘ್ರದಲ್ಲೇ ನಡೆಯಲಿದೆ. ತಂಡಗಳು ಈಗಾಗಲೇ ತಮಗೆ ಬೇಕಾದ ರೀಟೈನ್ಡ್ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕೆಲ ಫಾಂಚೈಸಿಗಳು ಸ್ಟಾರ್ ಆಟಗಾರರುನ್ನು ಉಳಿಸಿಕೊಳ್ಳದೇ ಹರಾಜಿಗೆ ಬಿಟ್ಟಿರುವುದು ಕುತೂಹಲ ಕೆರಳಿಸಿದೆ.
ಮುಖ್ಯವಾಗಿ ಸನ್ ರೈಸರ್ಸ್ ವಿಚಾರಕ್ಕೆ ಬಂದರೇ ತಂಡದ ಪ್ರಮುಖ ಬೌಲರ್ ರಶೀದ್ ಖಾನ್, ಡೇವಿಡ್ ವಾರ್ನರ್ ಅವರನ್ನು ಕೈ ಬಿಟ್ಟಿದೆ. ಹೀಗಾಗಿ ಈ ಆಟಗಾರರು ಮೆಗಾ ಹರಾಜಿಗೆ ಬರಲಿದ್ದಾರೆ. ಈ ಮಧ್ಯೆ ಡೇವಿಡ್ ವಾರ್ನರ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿವೊಂದು ಹರಿದಾಡುತ್ತಿದೆ.
2022ರ ಐಪಿಎಲ್ ಗಾಗಿ ಡೇವಿಡ್ ವಾರ್ನರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಲಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಜಲ್ ಸೃಷ್ಠಿಸಿದೆ.
ಐಪಿಎಲ್-2021 ರ ನಂತರ ವಿರಾಟ್ ಕೊಹ್ಲಿ ಆರ್ಸಿಬಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆರ್ ಸಿಬಿ ತಂಡದ ಮುಂದಿನ ನಾಯಕ ಯಾರು ಎಂಬುದು ಸದ್ಯ ಮಿಲಿಯನ್ ಡಾಲರ್ ಗಳ ಪ್ರಶ್ನೆಯಾಗಿದೆ.
ಆರ್ ಸಿಬಿ ತಂಡದ ನಾಯಕರ ರೇಸ್ ನಲ್ಲಿ ಮ್ಯಾಕ್ಸ್ ವೆಲ್ ಹೆಸರು ಕೇಳಿಬಂದಿದೆ. ಆದ್ರೆ ಆರ್ ಸಿಬಿ ಫ್ರಾಂಚೈಸಿ ದೇವಿಡ್ ವಾರ್ನರ್ ನತ್ತ ಗಮನ ಹರಿಸಿದೆ ಎಂದು ಹೇಳಲಾಗುತ್ತಿದೆ.