ಅಭಿಷೇಕ್ – ಅವಿವಾ ದಂಪತಿಯ ಕುಟುಂಬದಲ್ಲಿ ಈಗಾಗಲೇ ಹೊಸ ಸಂಭ್ರಮ ಮನೆ ಮಾಡಿದ್ರೂ, ಈ ನಡುವೆ ಒಂದಷ್ಟು ಬೇಸರದ ಘಟನೆ ಕೂಡ ನಡೆದಿದೆ. ಜೂ.ರೆಬಲ್ ಸ್ಟಾರ್ ಅಭಿಷೇಕ್ ಮತ್ತು ಅವಿವಾ ದಂಪತಿಗೆ ಕೆಲ ದಿನಗಳ ಹಿಂದೆ ಗಂಡು ಮಗು ಜನಿಸಿದ ಸುದ್ದಿ ಫ್ಯಾನ್ಸ್’ಗೆ ಸಂತಸ ತಂದಿತ್ತು. ಆದರೆ, ಮಕ್ಕಳ ಫೋಟೋಗಳು ಅನಧಿಕೃತವಾಗಿ ವಿವಿಧ ಮಾಧ್ಯಮಗಳಲ್ಲಿ ಹರಿದಾಡಿದ್ದರಿಂದ ಅವಿವಾ ಕೋಪಗೊಂಡಿದ್ದಾರೆ.
‘ನಮ್ಮ ಮಗುವಿನ ಫೋಟೋಗಳನ್ನು ಅನಧಿಕೃತವಾಗಿ ಪ್ರಕಟಿಸುವ ಮೂಲಕ ಮಾಧ್ಯಮಗಳು ನಮ್ಮ ವೈಯಕ್ತಿಕ ಬದುಕಿಗೆ ಧಕ್ಕೆ ತರುತ್ತಿವೆ. ಇದು ನಮಗೆ ಭಾವನಾತ್ಮಕವಾಗಿ ನೋವು ತಂದಿದೆ. ಕೂಡಲೇ ಆ ಫೋಟೋಗಳನ್ನು ಡಿಲೀಟ್ ಮಾಡಬೇಕು, ಇಲ್ಲವಾದರೆ ನಾವು ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ, ಎಂದು ಅವಿವಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಅಭಿಷೇಕ್ ಮತ್ತು ಅವಿವಾ ಅವರ ವೈಯಕ್ತಿಕ ಸಮಸ್ಯೆಯಾಗಿಲ್ಲ. ಇಂತಹ ಘಟನೆಗಳು ತಾಯಂದಿರು ಮತ್ತು ಮಕ್ಕಳ ಗೌಪ್ಯತೆ ಮತ್ತು ಗೌರವವನ್ನು ಕಾಪಾಡುವ ಪ್ರಮುಖತೆಯನ್ನು ಸಾರುತ್ತದೆ.