‘ವಾತಿ’ ಕಮಿಂಗ್…! ಧನುಷ್ ನಟನೆಯ “ಸರ್” ಟೈಟಲ್ ಮೋಷನ್ ಪೋಸ್ಟರ್ ರಿಲೀಸ್..!
ವೆಂಕಿ ಅಟ್ಲೂರಿ ನಿರ್ದೇಶನದ, ತಮಿಳಿನ ಸ್ಟಾರ್ ನಟ ಧನುಷ್ ನಾಯಕನಾಗಿರುವ ಅವರ ಹೊಸ ಸಿನಿಮಾ “ಸರ್” ನ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಭಾರೀ ಸೌಂಡ್ ಮಾಡ್ತಿದೆ..
ಧನುಷ್ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದು, ಈ ಸಿನಿಮಾ ತಮಿಳು , ತೆಲುಗಿನಲ್ಲಿ ಬರುತ್ತಿದೆ.. ಚಿತ್ರಕ್ಕೆ ತಮಿಳಿನಲ್ಲಿ #Vathi, ಇಂಗ್ಲಿಷ್ , ತೆಲುಗಿನಲ್ಲಿ #SIR ಎಂಬ ಟೈಟಲ್ ಇಡಲಾಗಿದೆ..
ಚಿತ್ರದ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾ #Twitter ನಲ್ಲಿ ಹಂಚಿಕೊಂಡ ಧನುಷ್ “ನನ್ನ ಮುಂದಿನ ಸಿನಿಮಾ.. ತಮಿಳು, ತೆಲುಗು ದ್ವಿಭಾಷೆಗಳಲ್ಲಿ ಬರುತ್ತಿದೆ” ಎಂದು ಬರೆದಿದ್ದಾರೆ.
https://twitter.com/i/status/1473868659130986496
ಸಿತಾರಾ ಎಂಟರ್ ಟೈನ್‌ಮೆಂಟ್ಸ್‌ನ ಸೂರ್ಯದೇವರ ನಾಗ ವಂಶಿ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್‌ನ ಸಾಯಿ ಸೌಜನ್ಯ ಈ ಯೋಜನೆಯನ್ನು ನಿರ್ಮಿಸುತ್ತಿದ್ದು, ರಂಗ್ ದೇ ಖ್ಯಾತಿಯ ವೆಂಕಿ ಅಟ್ಲೂರಿ ಇದನ್ನು ನಿರ್ದೇಶಿಸಲಿದ್ದಾರೆ.
ಈ ಹಿಂದೆ, ‘ಲವ್ ಸ್ಟೋರಿ’ ಸಿನಿಮಾದ ನಿರ್ದೇಶಕ ಶೇಖರ್ ಕಮ್ಮುಲಾ ಅವರೊಂದಿಗೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗ್ತಿರುವ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಧನುಷ್ ಘೋಷಿಸಿದ್ದರು.
ಸದ್ಯ ಧನುಷ್ ಬಳಿ ‘ದಿ ಗ್ರೇ ಮ್ಯಾನ್’, ‘ತಿರುಚಿತ್ರಂಬಲಂ’ ಮತ್ತು ‘ನಾನೇ ವರುವೆನ್’ ಸಿನಿಮಾಗಳಿವೆ. ಅಕ್ಷಯ್ ಕುಮಾರ್ ಜೊತೆಗಿನ ಅವರ ಅತ್ರಂಗಿ ರೇ ಡಿಸೆಂಬರ್ 24 ಕ್ಕೆ OTT ಯಲ್ಲಿ ರಿಲೀಸ್ ಆಗ್ತಿದೆ.. ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ..
ಸಿನಿಮಾ , ರಾಜ್ಯ , ದೇಶ , ವಿದೇಶ, ಕ್ರೀಡೆ , ಇತ್ತೀಚೆಗಿನ ಸುದ್ದಿಗಳ ಅಪ್ ಡೇಟ್ಸ್ ಗಾಗಿ ಸಾಕ್ಷಾ ಟಿವಿ ಫಾಲೋ ಮಾಡಿ







