ಧನುಷ್ ನಟನೆಯ ‘ಸರ್’ ಸಿನಿಮಾದ ಶೂಟಿಂಗ್ ಶುರು..!
ತಮಿಳಿನ ಸ್ಟಾರ್ ನಟ ಧನುಷ್ ಅಭಿನಯದ ‘ಸರ್’ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು.. ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು , ಧನುಷ್ ಅಭಿಮಾನಿಗಳು ಖುಷ್ ಆಗಿದ್ದಾರೆ.. ತೆಲುಗು ತಮಿಳಿನಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಶೂಟಿಂಗ್ ಈಗ ಆರಂಭವಾಗಿದ್ದು , ಚಿತ್ರೀಕರಣದಲ್ಲಿ ಧನುಷ್ ಭಾಗಿಯಾಗಿದ್ದಾರೆ..
https://twitter.com/dhanushkraja/status/1479371893207539712
ವೆಂಕಿ ಅಟ್ಲೂರಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಗ ವಂಶಿ ಹಾಗೂ ಸಾಯಿ ಸೌಜನ್ಯರವರು ಚಿತ್ರದ ನಿರ್ಮಾಪಕರಾಗಿದ್ದು, ಚಿತ್ರವು ಚೆನ್ನೈನ ಜೂನಿಯರ್ ಕಾಲೇಜಿನಲ್ಲಿ ಸೆಟ್ಟೇರಿದೆ. ಟ್ವಿಟ್ಟರ್‌ನಲ್ಲಿ ನಟ ಧನುಷ್ ಚಿತ್ರದ ಪೋಸ್ಟ್‌ರನ್ನು ಹಂಚಿಕೊಂಡಿದ್ದು, ‘ಬಹಳ ಉತ್ಸಾಹ ಹೃದಯ ಮತ್ತು ನಂಬಿಕೆಯೊಂದಿಗೆ ಸರ್ ಚಿತ್ರದ ಚಿತ್ರಿಕರಣ ಪ್ರಾರಂಭವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಧನುಷ್ ಅಭಿಮಾನಿಗಳು ಧನುಷ್ ಗೆ ಮತ್ತೆ ಸಿನಿಮಾಗೆ ಶುಭ ಹಾರೈಸುತ್ತಿದ್ದಾರೆ.. ಅಂದ್ಹಾಗೆ ಇತ್ತೀಚೆಗಷ್ಟೇ ಧನುಷ್ , ಅಕ್ಷಯ್ ಕುಮಾರ್ , ಸಾರಾ ಅಲಿಖಾನ್ ನmನೆಯ ಹಿಂದಿ ಸಿನಿಮಾ ಅತ್ ರಂಗೀ ರೇ… ಒಟಿಟಿಯಲ್ಲಿ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.. ಅಂದ್ಹಾಗೆ ಧನುಷ್ ಹಾಲಿವುಡ್ ಸಿನಿಮಾ ಗ್ರೇ ಮ್ಯಾನ್ ನಲ್ಲೂ ಕಾಣಿಸಿಕೊಳ್ತಿದ್ದು , ಅವರ ಭಾಗದ ಶೂಟಿಂಗ್ ಕೂಡ ಈಗಾಗಲೇ ಮುಗಿಸಿದ್ದಾರೆ..








