ಲೂಟಿ ಸರ್ಕಾರ ನಾನು ಹೇಳೋದು ಬೇಕಿಲ್ಲ. ಅವರ ರಾಜಕೀಯ ಕಾರ್ಯದರ್ಶಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ – ಡಿಕೆಶಿ
ವಿಜಯೇಂದ್ರ ಜೊತೆ ಒಳ ಒಪ್ಪಂದದ ಬಗೆಗಿನ ಸಚಿವ ಸಿ.ಪಿ.ಯೋಗೀಶ್ವರ್ ಆರೋಪ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರ ಹೆಸರು ಹೇಳೋಕೆ ಹೋಗಲ್ಲ. ಅವರು ಹಲವು ಸಲ ಸೋತ್ರು. ಅವರ ಹೇಳಿಕೆಗೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ. ನಾನು ಒಬ್ಬೇ ಒಬ್ಬ ಸಚಿವರಿಗೆ ಕರೆ ಮಾಡಿಲ್ಲ. ಸಿಎಂಗೆ ಒಮ್ಮೆ ಮಾತ್ರ ಮೆಡಿಕಲ್ ಕಾಲೇಜ್ ಬಗ್ಗೆ ಪತ್ರ ಕೊಟ್ಟಿದ್ದೆ. ರಾಜಕಾರಣ ಮಾಡಬೇಡಿ ಅಂತ ಸಿಎಂ ಅಂದು ಹೇಳಿದ್ರು. ಅದನ್ನ ಬಿಟ್ಟರೆ ಕೆಲಸ ಮಾಡಿಕೊಡಿ ಎಂದೂ ನಾನು ಹೋಗಿಲ್ಲ. ಸಿಎಂ ಪೊಲಿಟಿಕಲ್ ಸೆಕ್ರಟರಿ ಆರೋಪ ಮಾಡ್ತಾರೆ. ಸರ್ಕಾರ ಲೂಟಿಮಾಡಿದೆ ಅಂತ ಹೇಳ್ತಾರೆ. ಮನೆ ಮಾರಿ ಸರ್ಕಾರ ತಂದ್ರು ಅಂತ ಹೇಳಿದ್ರು. ಇದರ ಬಗ್ಗೆಯೂ ಕೇಸ್ ಹಾಕಲಿಲ್ಲ. ಅಧಿಕಾರಿಗಳೇ ಇವತ್ತು ಶಾಮೀಲಾಗಿದ್ದಾರೆ.. ಲೂಟಿ ಸರ್ಕಾರ ನಾನು ಹೇಳೋದು ಬೇಕಿಲ್ಲ. ಅವರ ರಾಜಕೀಯ ಕಾರ್ಯದರ್ಶಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.