ಭಾರತದ ಪ್ರಜಾಪ್ರಭುತ್ವದಲ್ಲಿ ಫೇಸ್‌ಬುಕ್ ಹಸ್ತಕ್ಷೇಪ ಕೊನೆಗೊಳಿಸಿ: ಸೋನಿಯಾ ಗಾಂಧಿ
ಭಾರತದ ಚುನಾವಣಾ ರಾಜಕೀಯದಲ್ಲಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣ ದೈತ್ಯರ “ವ್ಯವಸ್ಥಿತ ಹಸ್ತಕ್ಷೇಪ” ವನ್ನು ಕೊನೆಗೊಳಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಅಲ್ ಜಜೀರಾ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್‌ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ, ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಚುನಾವಣಾ ಜಾಹೀರಾತುಗಳಿಗಾಗಿ ಫೇಸ್‌ಬುಕ್ ಬಿಜೆಪಿಗೆ ಅಗ್ಗದ ಡೀಲ್ ಗಳನ್ನ ನೀಡಿದೆ ಎಂದು ಹೇಳಿದ್ದಾರೆ.
“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯದಲ್ಲಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ವ್ಯವಸ್ಥಿತ ಹಸ್ತಕ್ಷೇಪ ಮತ್ತು ಪ್ರಭಾವವನ್ನು ಕೊನೆಗೊಳಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದು ಪಕ್ಷಪಾತದ ರಾಜಕೀಯವನ್ನು ಮೀರಿದೆ. ನಾವು ಯಾರೇ ಆಗಿರಲಿ ಅಧಿಕಾರದಲ್ಲಿದ್ದವರು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ರಕ್ಷಿಸಬೇಕಾಗಿದೆ. ಎಂದು ಅವರು ಹೇಳಿದರು.
End Facebook’s ‘systematic interference’ in India’s democracy: Sonia Gandhi