ಬೆಕ್ಕು ಕಳ್ಳತನವಾಗಿದ್ದಕ್ಕೆ ಎಫ್ಐಆರ್ Saaksha Tv
ಬೆಂಗಳೂರು: ಕುರಿ, ಮೇಕೆ ಕಳ್ಳತನವಾದರೆ ಮಾಲಿಕರು ದೂರು ದಾಖಲಿಸುವುದನ್ನು ನೋಡಿದ್ದೇವೆ. ಆದರೆ ಬೆಂಗಳುರಿನ ಮಿಸ್ಬಾ ಶರೀಫ್ ಎಂಬ ಮಹಿಳೆ ಬೆಕ್ಕು ಕಳ್ಳತನಾವಗಿದೆ ಎಂದು ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಟಾ ಶರೀಫ್ ಅವರ ದುಬಾರಿ ಬೆಲೆಯ ಪರ್ಶಿಯನ್ ಬೆಕ್ಕು ಕಳ್ಳತನವಾಗಿದೆ. ಇವರಿಗೆ ತಮ್ಮ ಆತ್ಮೀಯರೊಬ್ಬರು ಉಡುಗೊರೆಯಾಗಿ ಬೆಕ್ಕನ್ನು ನೀಡಿದ್ದರು. ಈ ಬೆಕ್ಕಿನ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದು, ಬಹಳಷ್ಟು ಮುದ್ದಾಗಿ ಸಾಕಿದ್ದರು. ಬೆಂಕಿನ ಜೊತೆಗೆ ಒಂದು ಮೊಲವನ್ನು ಸಾಕಿದ್ದರು ಎರಡು ಅನ್ಯೊನ್ಯವಾಗಿ ಇದ್ದವು. ಆದರೆ ಬೆಕ್ಕು ಕಳುವಾಗಿನಿಂದ ಮೊಲ ಏಕಾಂಗಿಯಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ತಮ್ಮ ಬೆಕ್ಕನ್ನು ಯಾರೊ ಕಿಡಗೇಡಿಗಳು ಜನವರಿ 15 ರಂದು ಮೇಲ್ಚಾಯಿಂದ ಬಂದು ಕಳ್ಳತನ ಮಾಡಿದ್ದಾರೆ. ಬೆಕ್ಕನ್ನು ಹುಡುಕಿ ಕೊಟ್ಟವರಿಗೆ 35 ಸಾವಿರ ರೂ ಬಹುಮಾನ ಕೊಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ. ಮಿಸ್ಬಾ ಅವರು ತಮ್ಮ ಬೆಕ್ಕು ಕಳ್ಳತನವಾಗಿದೆ ಎಂದು ತಿಲಕನಗರ ಪೊಲೀಸಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.








