ಪ್ರಸ್ತುತ ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ,ಈ ಸಂಬಂಧ ನಡವಳಿಯನ್ನು ಹೊರಡಿಸಿರುವಂತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಮಾನ್ಯ ಮುಖ್ಯಮಂತ್ರಿ / ಮಾನ್ಯ ಉಪ ಮುಖ್ಯಮಂತ್ರಿ / ಮಾನ್ಯ ಸಚಿವರ / ಮಾನ್ಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳ / ಮಾನ್ಯ ಮುಖ್ಯಮಂತ್ರಿಯವರ ಸಲಹೆಗಾರರ / ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸಚಿವರ ಸ್ಥಾನಮಾನ ಪಡೆದ ಪ್ರಾಧಿಕಾರಿಗಳ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು / ಉಪಾಧ್ಯಕ್ಷರುಗಳ ಆಪ್ತ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು, 2024ರ ಅನುಸಾರ ಸಂವಾದಿ ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ, ವೇತನ ಹಂತವನ್ನು ದಿನಾಂಕ 01.11.2024ರಿಂದ ಜಾರಿಗೆ ಬರುವಂತೆ ಸಂಚಿತ ವೇತನವನ್ನಾಗಿ ಪರಿಷ್ಕರಿಸಿ ನಿಗದಿಪಡಿಸಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ ಎಂದು ತಿಳಿಸಿರುತ್ತಾರೆ. ಈ ಮೂಲಕ ಗುತ್ತಿಗೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯನ್ನು ನೀಡಿದೆ.
2024ನೇ ಸಾಲಿನ ಪರಿಷ್ಕೃತ ಸಂಚಿತ ವೇತನ (ರೂಪಾಯಿಗಳು) ಈ ರೀತಿಯಾಗಿದೆ.
ವಿಶೇಷಾಧಿಕಾರಿ / ವಿಶೇಷ ಕರ್ತವ್ಯಾಧಿಕಾರಿ
69,250/-
ಸಹಾಯಕ (ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಬದಲಾಗಿ ಸಹಾಯಕ ಹುದ್ದೆಯನ್ನಾಗಿ ಪರಿವರ್ತಿಸಲಾಗಿದೆ)
49,050/-
ಶೀಘ್ರಲಿಪಿಗಾರ
49,050/-
ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ
34,100/-
ಬೆರಳಚ್ಚುಗಾರ
34,100/-
ವಾಹನ ಚಾಲಕ
34,100/-
‘ಡಿ’ ದರ್ಜೆ ನೌಕರರು
27,000/-
ಈ ಪರಿಷ್ಕರಣೆಯು ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗೆ ಅನ್ವಯಿಸುವುದಿಲ್ಲವೆಂಬ ಪರತ್ತಿಗೊಳಪಟ್ಟು ನಿಗದಿಪಡಿಸಲಾಗಿದೆ ಎಂದು ಸಹ ತಿಳಿಸಿದ್ದಾರೆ.