ಬೆಂಗಳೂರು: ರಾಜ್ಯಪಾಲರು ಹಾಗೂ ಸರ್ಕಾರದ ಮಧ್ಯೆ ಪ್ರಾಸಿಕ್ಯೂಷನ್ ವಿಷಯವಾಗಿ ಜಗಳ ಜೋರು ನಡೆಯುತ್ತಿದೆ.
ರಾಜ್ಯಪಾಲರ ವಿರುದ್ಧ ಇಡೀ ಕಾಂಗ್ರೆಸ್ ಮುಗಿಬಿದ್ದಿದೆ. ಈ ಮಧ್ಯೆ ರಾಜ್ಯಪಾಲರು ಹಾಗೂ ಡಿಸಿಎಂ ಮುಖಾಮುಖಿಯಾಗಿದ್ದಾರೆ. ಸಚಿವ ಭೈರತಿ ಸುರೇಶ್(Byrati Suresh) ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ಅವರ ಪುತ್ರಿ ಅಪೂರ್ವ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ ನಲ್ಲಿ (Hotel) ಅದ್ದೂರಿಯಾಗಿ ನಡೆದಿದೆ.
ಈ ಶುಭ ಸಮಾರಂಭದಲ್ಲಿ ಭಾಗಿಯಾಗಲು ರಾಜ್ಯಪಾಲರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಸಿಎಂ ಡಿ ಕೆ ಶಿವಕುಮಾರ್(DK Shivakumar) ರಾಜ್ಯಪಾಲರೊಂದಿಗೆ ಊಟ ಸವಿಸಿದ್ದಾರೆ. ಡಿಸಿಎಂ ಅವರ ಪತ್ನಿ ಉಷಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನುಳಿದಂತೆ ಸಚಿವ ಡಾ ಎಂ ಸಿ ಸುಧಾಕರ್ (Dr MC Sudhakar), ಶಾಸಕ ಶರತ್ ಬಚ್ಚೇಗೌಡ (Sharath Kumar Bache Gowda) ಸೇರಿದಂತೆ ಹಲವರು ಇದ್ದರು.







