ADVERTISEMENT
Wednesday, March 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಇದೊಂದು ಡೈಲಿ ವೇಜ್ ಸರ್ಕಾರ ನಿವೃತ್ತ ಅಧಿಕಾರಿಗಳ ಪತ್ನಿಯರೇ ಇಲ್ಲಿ ಗುತ್ತಿಗೆದಾರರು ಎಂದು ಬಾಂಬ್ ಸಿಡಿಸಿದ ಹಳ್ಳಿಹಕ್ಕಿ

Shwetha by Shwetha
March 18, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆಯನ್ನು ವಿಪರೀತವಾಗಿ ಏರಿಕೆ ಮಾಡಿರುವುದರಿಂದ ಯುವಜನತೆ ಮತ್ತು ಮಕ್ಕಳು ಅಗ್ಗದ ಅಮಲು ಪದಾರ್ಥವಾದ ಗಾಂಜಾ ಮೊರೆ ಹೋಗುತ್ತಿದ್ದಾರೆ ಎಂದು ಹಿರಿಯ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಅಬಕಾರಿ ನೀತಿ ಮತ್ತು ದುಂದುವೆಚ್ಚಗಳ ವಿರುದ್ಧ ಸಿಡಿಮಿಡಿಗೊಂಡರು.

Related posts

ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

March 18, 2026
ಬಡವರನ್ನು ದಂಡಿಸಬೇಡಿ: ಮಿನಿಮಮ್ ಬ್ಯಾಲೆನ್ಸ್ ದಂಡಕ್ಕೆ MP ರಾಘವ್ ಚಡ್ಡಾ ಆಕ್ರೋಶ

ಬಡವರನ್ನು ದಂಡಿಸಬೇಡಿ: ಮಿನಿಮಮ್ ಬ್ಯಾಲೆನ್ಸ್ ದಂಡಕ್ಕೆ MP ರಾಘವ್ ಚಡ್ಡಾ ಆಕ್ರೋಶ

March 18, 2026

ರಾಜ್ಯದ ಅಬಕಾರಿ ನೀತಿಯನ್ನು ಕಟುವಾಗಿ ಟೀಕಿಸಿದ ವಿಶ್ವನಾಥ್, ಬಿಯರ್ ಬೆಲೆಯನ್ನು 230 ರೂಪಾಯಿಗೆ ಏರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಿಗೆ ಓದುತ್ತಿದ್ದ ಕಾಲದಲ್ಲಿ ಕೇವಲ ಒಂದು ರೂಪಾಯಿ ಹಾಕಿ ಬಿಯರ್ ತರುತ್ತಿದ್ದೆವು. ಆದರೆ ಇಂದು ಬೆಲೆ ಗಗನಕ್ಕೇರಿದೆ. ದುಬಾರಿ ಬೆಲೆಯ ಮದ್ಯವನ್ನು ಖರೀದಿಸಲು ಸಾಧ್ಯವಾಗದ ಮಕ್ಕಳು ಮತ್ತು ಯುವಕರು ಕಡಿಮೆ ಬೆಲೆಗೆ ಸಿಗುವ ಗಾಂಜಾದಂತಹ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ನಾಶ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ಅವರು, ಮೈಸೂರಿನಲ್ಲಿ ಬಂದು ಗುಜರಾತ್ ಪೊಲೀಸರು ಡ್ರಗ್ಸ್ ಫ್ಯಾಕ್ಟರಿಯನ್ನು ಭೇದಿಸುತ್ತಾರೆ ಎಂದರೆ ನಮ್ಮ ರಾಜ್ಯದ ಪೊಲೀಸರು ಏನು ಮಾಡುತ್ತಿದ್ದಾರೆ? ಮಾಮೂಲಿ ಪಡೆದು ಮಲಗಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಅಬಕಾರಿ ಮೂಲಕ ಯುವಜನರನ್ನು ಸುಲಿಗೆ ಮಾಡುವ ಬದಲು ರಿಯಲ್ ಎಸ್ಟೇಟ್ ಟ್ಯಾಕ್ಸ್ ವಿಭಾಗ ಮಾಡಿ ಅಲ್ಲಿ ತೆರಿಗೆ ಸಂಗ್ರಹಿಸಿ ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರವನ್ನು ಅಡ್ವರ್ಟೈಸ್‌ಮೆಂಟ್ ಸರ್ಕಾರ ಎಂದು ಜರೆದ ವಿಶ್ವನಾಥ್, ಕೇವಲ ಜಾಹೀರಾತುಗಳಿಗಾಗಿಯೇ ಸರ್ಕಾರ ಬರೋಬ್ಬರಿ 532 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಅಕ್ಷರ ಮತ್ತು ಆರೋಗ್ಯ ವ್ಯವಸ್ಥೆ ಸರಿಯಾಗಿದ್ದರೆ ಅನ್ನ ತಾನಾಗಿಯೇ ಹುಟ್ಟುತ್ತದೆ. ಆದರೆ ರಾಜ್ಯದಲ್ಲಿ ಇವೆರಡೂ ಕ್ಷೇತ್ರಗಳು ಸೊರಗಿವೆ. ಆಡಳಿತ ಸಂಪೂರ್ಣ ವಿಫಲವಾಗಿದ್ದು, ಯೋಜನೆಗಳ ಅನುಷ್ಠಾನ ಶೂನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ನೆನಪಿಸಿದ ಅವರು, ಹಿಂದೆ ಅಡುಗೆ ಅನಿಲ ಬೆಲೆ ಏರಿಕೆಯಾದಾಗ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ರಾಜ್ಯದಲ್ಲಿ ಹಾಲು, ನೀರು ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಳ ಮಾಡಿದ್ದೀರಿ. ನಿಮ್ಮದೇ ಮಾತುಗಳ ಪ್ರಕಾರ ಈಗ ನೀವು ಎಷ್ಟು ಬಾರಿ ರಾಜೀನಾಮೆ ನೀಡಬೇಕು ಎಂದು ಸಿಎಂ ಅವರನ್ನು ನೇರವಾಗಿ ಪ್ರಶ್ನಿಸಿದರು.

ಮೈಸೂರು ಮತ್ತು ಬೆಂಗಳೂರು ನಡುವಿನ ಕೇವಲ 120 ಕಿ.ಮೀ ಪ್ರಯಾಣಕ್ಕೆ ವಿಶೇಷ ವಿಮಾನ ಬಳಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ವಿಶ್ವನಾಥ್, ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರಂತಹ ಕೋಟ್ಯಾಧಿಪತಿಗಳೇ ಸಾಮಾನ್ಯ ಇಂಡಿಗೊ ವಿಮಾನದಲ್ಲಿ ಸಂಚರಿಸುತ್ತಾರೆ. ಹಾಗಿರುವಾಗ ಸಾಲದ ಸುಳಿಯಲ್ಲಿರುವ ಸರ್ಕಾರಕ್ಕೆ ಇಂತಹ ಐಷಾರಾಮಿ ದರ್ಬಾರ್ ಬೇಕೆ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಿಎಂ ಮಾಧ್ಯಮ ಸಲಹೆಗಾರರಿಗೂ ಕ್ಯಾಬಿನೆಟ್ ದರ್ಜೆ ನೀಡಿರುವುದನ್ನು ಪ್ರಸ್ತಾಪಿಸಿ, ರಾಜ್ಯದಲ್ಲಿ ಒಟ್ಟು 138 ಜನರಿಗೆ ಕ್ಯಾಬಿನೆಟ್ ರ್ಯಾಂಕ್ ನೀಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಕುರಿ ಸಾಕಾಣಿಕೆಯನ್ನು ಮೂವಿಂಗ್ ಬ್ಯಾಂಕ್ ಎಂದು ಬಣ್ಣಿಸಿದ ಅವರು, ಈ ಉದ್ಯಮಕ್ಕೆ ಉತ್ತೇಜನ ನೀಡಲು ಕುರಿ ಮಂಡಳಿಗೆ ಮೀಸಲಿಟ್ಟ ಹಣವನ್ನು ಕುರಿಗಾಹಿಗಳಿಗೆ ನೀಡುವ ಬದಲು ಶಾಸಕರಿಗೆ ಹಂಚಲಾಗುತ್ತಿದೆ. ಶಾಸಕರು ಆ ಹಣವನ್ನು ಫಲಾನುಭವಿಗಳಿಗೆ ತಲುಪಿಸದೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಇದೊಂದು ಡೈಲಿ ವೇಜ್ ಸರ್ಕಾರ ಎಂದು ವ್ಯಂಗ್ಯವಾಡಿದ ವಿಶ್ವನಾಥ್, ನಿವೃತ್ತ ಐಎಎಸ್ ಅಧಿಕಾರಿಗಳ ಪತ್ನಿಯರೇ ಇಲ್ಲಿ ಗುತ್ತಿಗೆದಾರರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ShareTweetSendShare
Join us on:

Related Posts

ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

by Shwetha
March 18, 2026
0

ನೈರುತ್ಯ ರೈಲ್ವೆ ನಡೆಸುತ್ತಿದ್ದ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದ ಹಿನ್ನೆಲೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ...

ಬಡವರನ್ನು ದಂಡಿಸಬೇಡಿ: ಮಿನಿಮಮ್ ಬ್ಯಾಲೆನ್ಸ್ ದಂಡಕ್ಕೆ MP ರಾಘವ್ ಚಡ್ಡಾ ಆಕ್ರೋಶ

ಬಡವರನ್ನು ದಂಡಿಸಬೇಡಿ: ಮಿನಿಮಮ್ ಬ್ಯಾಲೆನ್ಸ್ ದಂಡಕ್ಕೆ MP ರಾಘವ್ ಚಡ್ಡಾ ಆಕ್ರೋಶ

by Shwetha
March 18, 2026
0

ರಾಘವ್ ಚಡ್ಡಾ ಸಂಸತ್ತಿನಲ್ಲಿ ಬ್ಯಾಂಕುಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ಬ್ಯಾಂಕುಗಳು ₹19 ಸಾವಿರ ಕೋಟಿ ದಂಡ ವಸೂಲಿ ಮಾಡಿರುವುದು...

ಡಿನ್ನರ್ ಮೀಟಿಂಗ್ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಿ : ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ;ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ಡಿನ್ನರ್ ಮೀಟಿಂಗ್ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಿ : ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ;ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ

by Shwetha
March 18, 2026
0

ಬೆಂಗಳೂರು: ರಾಜ್ಯದ ಖಜಾನೆಯನ್ನು ಖಾಲಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ನಯಾಪೈಸೆ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರ, ಇದೀಗ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನೂ ಸಕಾಲಕ್ಕೆ ಬಳಸಿಕೊಳ್ಳಲಾಗದೆ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 18, 2026
0

ದಿನ ಭವಿಷ್ಯ: 18-03-2026 ಮೇಷ ರಾಶಿ (Aries) ಇಂದು ನಿಮಗೆ ಬಹಳ ಉತ್ಸಾಹದ ದಿನ. ಗ್ರಹಗಳ ಅನುಕೂಲಕರ ಚಲನೆಯಿಂದಾಗಿ ನೀವು ಕೈಹಾಕುವ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವೃತ್ತಿ...

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram