ಸುಪ್ರೀಂಕೋರ್ಟಿನ 6 ಮಂದಿ ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು ತಗುಲಿರುವ ಬಗ್ಗೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮಾಹಿತಿ ನೀಡಿದ್ದಾರೆ.
ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು ತಗುಲಿರುವ ಹಿನ್ನೆಲೆ ಅದು ಹರಡದಂತೆ ಎಚ್ಚರಿಕೆ ವಹಿಸಿರುವ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್, ಸುಪ್ರೀಂಕೋರ್ಟಿನ ಎಲ್ಲಾ ಸಿಬ್ಬಂದಿಗಳಿಗೂ ತುರ್ತಾಗಿ ಆರೋಗ್ಯ ತಪಾಸಣೆ, ವೈದ್ಯಕೀಯ ನೆರವು ಅಗತ್ಯವಿದೆ ತಿಳಿಸಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹಾಗೂ ಎಸ್ ಸಿಬಿಎ ಅಧ್ಯಕ್ಷ ದುಷ್ಯಂತ್ ದವೆ ಅವರು ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ.
ಇನ್ನು, ಉನ್ನತ ನ್ಯಾಯಾಲಯದ ವಕೀಲರು, ನ್ಯಾಯಮೂರ್ತಿಗಳಿಗೆ ಚುಚ್ಚುಮದ್ದು ನೀಡುವ ಶಿಬಿರ ಆಯೋಜಿಸುವುದು ಸೇರಿದಂತೆ ವೈದ್ಯಕೀಯ ನೆರವಿಗಾಗಿ 10 ಲಕ್ಷ ರೂ. ಗಳನ್ನು ಎಸ್ ಸಿಬಿಎ ಮಂಜೂರು ಮಾಡಿದೆ.








