ಸಂಕ್ರಾಂತಿ ಬಂತೆಂದರೆ ಜನರಲ್ಲಿ ನವೋತ್ಸಾಹ ಹೊಮ್ಮುತ್ತದೆ. ಜಗಚ್ಚುಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯುತ್ತಾರೆ. ವಸಂತನ ಆಗಮನ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡ ತೃಪ್ತಿ. ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ ಉತ್ತರಾಯಣಗಳ ಆರಂಭದ ದಿನಗಳು ಆದ್ದರಿಂದ ವಿಶೇಷ ಮಹತ್ವ ಹೊಂದಿವೆ. ಸಂಕ್ರಾಂತಿಯಲ್ಲಿ ಸೂರ್ಯಾರಾಧನೆಯು ಮಹತ್ವ ಪಡೆದಿದೆ. ವೇದವಾಣಿಯಂತೆ ಸೂರ್ಯ ದೇವ ವಿಶ್ವದ ಆತ್ಮ. ಜಗತ್ತಿನ ಕಣ್ಣು, ಮಳೆಗೆ, ಬೆಳೆಗೆ, ಹಾಗೆ ಇಳೆ ಬೆಳಗಲು ಸೂರ್ಯನೇ ಕಾರಣ. ಸವಿತೃ ದೇವನ ದಿವ್ಯ ತೇಜಸ್ಸು ಪ್ರಜೆಗಳಿಗೆ ಸಿದ್ದಿ -ಬುದ್ದಿ- ಸಮೃದ್ಧಿಗಳನ್ನು ತರುತ್ತದೆ. ಈ ಹಬ್ಬ ಸುಗ್ಗಿಯ ಹಿಗ್ಗು. ಪ್ರಕೃತಿಯಲ್ಲಿ ಉತ್ಸಾಹದ ಬದಲಾವಣೆ, ಆರೋಗ್ಯ- ಭಾಗ್ಯ, ಧವಸ ಧಾನ್ಯಗಳು ಇವೆಲ್ಲ ತುಂಬಿ ತುಳುಕುವ ಪುಣ್ಯಕಾಲ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ( ಜನವರಿ 14 ಅಥವಾ 15 ) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಹೇಳುತ್ತಾರೆ. ಉತ್ತರಾಯಣ ಪುಣ್ಯ ಕಾಲವು ಸಾಯುವುದಕ್ಕೂ ಸಹ ಪುಣ್ಯಕಾಲ. ಶರಶಯ್ಯೆಯಲ್ಲಿ ಮಲಗಿದ ಪಿತಾಮಹ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪುಣ್ಯಕಾಲಕ್ಕಾಗಿ ಹರಿ ಸ್ಮರಣೆ ಮಾಡುತ್ತಾ ಕಾಯುತ್ತಿದ್ದರೆಂದು ಮಹಾಭಾರತದಲ್ಲಿ ತಿಳಿಸಿದೆ. ಈ ಪುಣ್ಯ ಕಾಲದಲ್ಲಿ ಗಂಗಾ -ಕಾವೇರಿ -ಗೋದಾವರಿ- ನರ್ಮದ- ಯಮುನೆ- ತುಂಗಾ- ಕೃಷ್ಣ ಮುಂತಾದ ಪುಣ್ಯತೀರ್ಥಗಳಲ್ಲಿ ಲಕ್ಷಾಂತರ ಜನರು ತೀರ್ಥಸ್ನಾನ (ಕುಂಭಮೇಳ) ಮಾಡುತ್ತಾರೆ. ಹಾಗೂ ಉತ್ತರಾಯಣವನ್ನು ದೇವತೆಗಳ ಹಗಲು ಎಂದೂ, ರಾಕ್ಷಸರಿಗೆ ರಾತ್ರಿಯಂದು ಭಾವಿಸಲಾಗಿದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ ಪೂಜೆ ಪುನಸ್ಕಾರಗಳಿಗೆ ಸಮಸ್ತ ದೇವತಾ ಕಾರ್ಯಗಳಿಗೆ ಶುಭಕಾಲ ಉತ್ತರಾಯಣ ಪುಣ್ಯಕಾಲ. ವರ್ಷದಲ್ಲಿ ಬರುವ ಎಲ್ಲಾ ಸಂಕ್ರಮಣಗಳಲ್ಲೂ ವ್ರತ ಉಪವಾಸ ದಾನ ಮಾಡುತ್ತಾರೆ. ಆದರೆ ಈ ಸಂಕ್ರಾಂತಿಯಲ್ಲಿ ಮಾಡುವುದು ಹಬ್ಬದ ವಿಶೇಷ ವಾಗಿದೆ. ಅದು ಉತ್ತರಾಯಣದ ಆರಂಭ ಕಾಲದಲ್ಲಿ ಮಕರ ಸಂಕ್ರಾಂತಿ ಆಚರಿಸಿ ದರೆ ವರ್ಷವಿಡಿ ಪೂರ್ಣ ಫಲ ಪಡೆಯಬಹುದು. ಈ ಕಾರಣ ಮಕರ ಸಂಕ್ರಾಂತಿ ವಿಶೇಷ ಪುಣ್ಯಕಾಲ ಆಗಿತ್ತು ಪೂರ್ವದಿಂದಲೂ ಹಿರಿಯರು ಆಚರಿಸುತ್ತಾ ಬಂದಿದ್ದಾರೆ
ಪೌರಾಣಿಕ ಹಿನ್ನೆಲೆಯಂತೆ ಮಹಾಭಾರತದಲ್ಲಿ ಭೀಷ್ಮಾಚಾರ್ಯರು ತಂದೆಯಿಂದ ಇಚ್ಚಾಮರಣದ ವರ ಪಡೆದಿದ್ದರು. ಕುರುಕ್ಷೇತ್ರದಲ್ಲಿ ಬಾಣಗಳ ಹೊಡೆತದಿಂದ ಮರಣದ ಹಂತಕ್ಕೆ ಬಂದಿದ್ದರು. ಅವರು ಇಚ್ಚಾಮರಣಿ ಆದ್ದರಿಂದ ಪ್ರಾಣತ್ಯಾಗ ಮಾಡಲು ಉತ್ತರಾಯಣ ಪುಣ್ಯಕಾಲವನ್ನು ಬಾಣಗಳ ಹಾಸಿಗೆಯಲ್ಲಿ ಮಲಗಿ ಕಾಯುತ್ತಾರೆ. ಪೌರಾಣಿಕ ಹಿನ್ನೆಲೆಯಂತೆ ಈ ಪರ್ವ ದಿನದಂದು ಮುಚ್ಚಿದ ಸ್ವರ್ಗದ ಬಾಗಿಲನ್ನು ತೆಗೆಯುತ್ತಾರೆ ಎಂಬ ನಂಬಿಕೆ ಇದೆ.
‘ಆಯನ’ ಎಂದರೆ ಚಲಿಸುವುದು ‘ಪಥ’ ಎಂದು ಅರ್ಥ. ಇಲ್ಲಿತನಕ ದಕ್ಷಿಣ ದತ್ತ ವಾಲಿ ಚಲಿಸುವ ಸೂರ್ಯ, ಮಕರ ಸಂಕ್ರಮಣದಿಂದ ತನ್ನ ಮಾರ್ಗ ಬದಲಾಯಿ ಸಿ, ಉತ್ತರದ ಕಡೆ ವಾಲುತ್ತಾನೆ. ಸೂರ್ಯ ಮೇಲೆ ಮೇಲೆ ಏರಿ ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗಿ ನಮ್ಮ ಬಾಳಿನಲ್ಲೂ ಉತ್ಸಾಹ ಹೆಚ್ಚುತ್ತದೆ. ಈ ಸಂಭ್ರಮದ ಸಂಕೇತವಾಗಿ ಈ ದಿನ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಿ ಹೊಸ ವಸ್ತ್ರ ಧರಿಸಬೇಕು. ಹಾಗೂ ಶ್ರೀರಾಮ ರಾವಣನನ್ನು ಕೊಂದು ಸೀತೆಯನ್ನು ತಂದ ದಿನ ಇದೆ ಮಕರ ಸಂಕ್ರಾಂತಿ ದಿನ ಎಂದು ಹೇಳುತ್ತಾರೆ. ಆದ್ದರಿಂದ ಈ ದಿನ ಸೂರ್ಯನ ಪೂಜೆ ಜೊತೆಗೆ ಶ್ರೀ ರಾಮನ ಪೂಜೆಯನ್ನು ಮಾಡುತ್ತಾರೆ ಮತ್ತು ಸ್ವರ್ಗಸ್ಥರಾದ ಪಿತೃಗಳು ಅದೃಶ್ಯದಿಂದ ಮನೆಯಂಗಳಕ್ಕೆ ಬರುತ್ತಾರೆಂದು ಹೇಳುತ್ತಾರೆ. ಇಂದು ಸಿಹಿಯಾದ ಪಕ್ವಾನದ ಭೋಜನ ಮಾಡಿ ದೇವರಿಗೆ ಅರ್ಪಿಸಿ ಕುಟುಂಬ ಪರಿವಾರದೊಂದಿಗೆ ಸವಿಯುತ್ತಾರೆ. ( ಮುಂಜಾನೆ ಸಿಹಿ ಪೊಂಗಲ್ ಮಾಡಿ ದೇವರಿಗೆ ಅರ್ಪಿಸುತ್ತಾರೆ. ಊಟರ ಸ್ಪೆಷಲ್ ಕಾಯಿ ಹೋಳಿಗೆ- ಪುಳಿಯೋಗರೆ – ಅಂಬಡೆ)
ಹಬ್ಬದ ಸಂಭ್ರಮ ಹೀಗಿರುತ್ತದೆ. “ಎಳ್ಳು ಬೆಲ್ಲ ಸವಿಯೋಣ ಒಳ್ಳೆ ಮಾತಾಡೋಣ”
ಎಂಬ ಉಕ್ತಿಯಂತೆ ಹುರಿದ ಎಳ್ಳು- ಬೆಲ್ಲ- ಕಡಲೆ ಬೀಜ, ಹುರಿಗಡಲೆ, ಕೊಬ್ಬರಿ, ಇವುಗಳನ್ನೆಲ್ಲ ಒಣಗಿಸಿ ಹದವಾಗಿ ಬೆರೆಸಿ ಮಿಶ್ರಣ ಮಾಡಿ ಇದರ ಜೊತೆಗೆ ಸಕ್ಕರೆ ಅಚ್ಚು, ಕಬ್ಬಿನ ತುಂಡು, ಹಣ್ಣು ಹಂಪಲು, ಆಕರ್ಷಕ ಪುಟ್ಟ ವಸ್ತುಗಳನ್ನು ಇಟ್ಟು ಅಥವಾ ಬಣ್ಣ ಬಣ್ಣದ ಮಣ್ಣಿನ ಕುಡಿಕೆಗಳಲ್ಲಿ ಎಳ್ಳನ್ನು ತುಂಬಿ ಕೊಡುತ್ತಾರೆ. ಸಂಕ್ರಾಂತಿ ದಿನ ಶೃಂಗಾರ ಗೊಂಡ ಹೆಣ್ಣು ಮಕ್ಕಳು ನಗುನಗುತ್ತಾ ಸಂಭ್ರಮದಿಂದ ಊರು ತುಂಬ ಓಡಾಡುವ ಹಾಗೂ ಎಳ್ಳು ಬೀರುವ ನಿಮಿತ್ತ ಬಂಧು ಮಿತ್ರರ ಬೇಟಿ ಉಭಯ ಕುಶಲೋಪರಿ, ಸವಿ ಮಾತುಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ಈ ದಿನ ಸಂಜೆ ಮಕ್ಕಳಿಗೆ ತೆನೆ ಎರೆಯುತ್ತಾರೆ. ಹೊಸ ಬಟ್ಟೆ ಹಾಕಿ ಸಿಂಗರಿಸಿ ಹಸಿಮಣೆಯ ಮೇಲೆ ಕೂರಿಸಿ, ಮುತ್ತೈದೆಯರು ಹಾಡು ಹೇಳುತ್ತಾ, ಎಲಚೇ ಹಣ್ಣು ಕಬ್ಬಿನ ಚೂರು, ಹಸಿ ಬಟಾಣಿ, ಕ್ಯಾರೆಟು, ಚಾಕ್ಲೇಟು, ನಾಣ್ಯಗಳು ಇವುಗಳನ್ನು ಸೇರಿಸಿ ಮಕ್ಕಳ ತಲೆಯ ಮೇಲಿಂದ ಎರೆದು ದೃಷ್ಟಿ ತೆಗೆಯುತ್ತಾರೆ. ನೆರೆಹೊರೆ ಮನೆಯವರನ್ನು ಕರೆದು ಅರಿಶಿಣ ಕುಂಕುಮ ತಾಂಬೂಲ ಕೊಡುತ್ತಾರೆ. ಸಂಕ್ರಾಂತಿ ಹಬ್ಬದ ಮರುದಿನ ‘ಗೊಂಬೆ ಎಳ್ಳು’ ಎಂದು ಆಚರಿಸುತ್ತಾರೆ. ಸಂಜೆ ಪುಟಾಣಿ ಮಕ್ಕಳಿಗೆ ಚಂದದ ಅಲಂಕಾರ ಮಾಡಿ ಕೈಯಲ್ಲಿ ಅಲಂಕಾರ ಮಾಡಿದ ಆಡುವ ಗೊಂಬೆ ಕೊಟ್ಟು ಎಳ್ಳು ಬೀರಿ ಬರಲು ಮನೆ ಮನೆಗಳಿಗೆ ಕಳಿಸುತ್ತಾರೆ. ಆ ಪುಟ್ಟ ಮಕ್ಕಳ ಅಲಂಕಾರ ನಗು- ತೊದಲು ಮಾತು, ಹಠ, ಅಳು, ಹಿಂದೆ ತಿರುಗಿ ಅಮ್ಮನನ್ನು ನೋಡುವ ನೋಟ, ಹಿರಿಯರು ಖುಷಿಯಾಗಿ ನೋಡುತ್ತಾರೆ. ಕರ್ನಾಟಕದಲ್ಲಿ ಈ ಹಬ್ಬವನ್ನು ಎರಡು ದಿನ ಆಚರಿಸುತ್ತಾರೆ.
ಹಳ್ಳಿಗಳಲ್ಲಿ ರೈತರು ಸಂಕ್ರಾಂತಿ ದಿನ ತಮ್ಮ ಹಸು, ಎತ್ತು, ಎಮ್ಮೆ, ಗಳಿಗೆ ಸ್ನಾನ ಮಾಡಿಸಿ ಅಲಂಕರಿಸಿ, ಕೊಂಬು ಹಾಗೂ ಮೈಮೇಲೆ ಬಣ್ಣಗಳ ಚಿತ್ತಾರ ಹಚ್ಚಿ ಅಲಂಕರಿಸಿ ಕೋಡಿಗೆ ಕುಚ್ಚು- ಟೇಪು- ಗಂಟೆ, ಗಳನ್ನು ಕಟ್ಟುತ್ತಾರೆ. ಕುತ್ತಿಗೆಗೆ ಮಣಿಸರಗಳು, ಹೂವಿನ ಸರಗಳಿಂದ ಅಲಂಕರಿಸಿ, ಅವುಗಳಿಗೆ ತಿನ್ನಲು ಸಾಕಷ್ಟು ತಿಂಡಿ ತಿನಿಸುಗಳನ್ನು ಕೊಡುತ್ತಾರೆ. ಸಂಜೆ ಸಮಯ ಹಾಯಿಸುವುದು, ಹೋರಿ ಕಾಳಗ, ದೊಡ್ಡ ಗೂಳಿಗೆ ದುಡ್ಡಿನ ಚೀಲ, ಬೆಳ್ಳಿ,( ಕಡಗ, ಅಥವಾ ಗೆಜ್ಜೆ ಆಭರಣ ಹಾಕಿ, ಕಟ್ಟಿ ಬಿಡುತ್ತಾರೆ ಯಾವ ಯುವಕ ಧೈರ್ಯದಿಂದ ಗೂಳಿಯನ್ನು ಎದುರಿಸಿ ಹಣದ ತೈಲಿ ಬೆಳ್ಳಿಯ ಆಭರಣ ಕಿತ್ತುಕೊಳ್ಳುತ್ತಾನೋ ಅವನಿಗೆ ಅದು ಆಗುತ್ತದೆ.
ಒಟ್ಟಾರೆ ಈ ಉತ್ತರಾಯಣ ಪುಣ್ಯಕಾಲದಂದು ಮಾಡಿದ ಸ್ನಾನ- ದಾನ- ಜಪ- ತಪ, ಪೂಜೆ ಪುನಸ್ಕಾರಗಳ ಪುಣ್ಯವು ಜನ್ಮ ಜನ್ಮಾಂತರದಲ್ಲೂ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಸಂಕ್ರಾಂತಿಯ ಹೊಸ ವರ್ಷದ ಹಬ್ಬ
ನಾಡಿಗೆ ಸಂಭ್ರಮ ತರಲಿ!!
ಬಳಲಿದ ಮನಕೆ ಸಿಹಿಯನು ಎರೆದು
ಭರವಸೆಯ ಬೆಳಕಾಗಲಿ!!
ಸುಗ್ಗಿಯ ಹಿಗ್ಗಿನ ಸ್ವಾಗತಕೆ
ತಳಿರು ತೋರಣ ತೂಗಲಿ
ಬಂಧು ಬಳಗದ ಸ್ನೇಹ ಕೂಟಕ್ಕೆ
ಹುಗ್ಗಿಯು ಪರಿಮಳ ಬೀರಲಿ!!
ಎಳ್ಳು ಬೆಲ್ಲ ಹಂಚಿ ಪಡೆದು
ಸಾಮರಸ್ಯವು ಬೆಳೆಯಲಿ
ಕಬ್ಬಿನ ಸಿಹಿಯಲಿ ಮಕ್ಕಳ ಕನಸು
ನರಸಿನ ಶಿಖರಕೆ ಏರಲಿ!!
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.







