Haripriya
ಉಗ್ರಂ ಚೆಲುವೆ ಹರಿಪ್ರಿಯ (Haripriya) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಂತಹ ಪಾತ್ರಗಳಿಗೂ ಹೊಂದಿಕೊಳ್ಳುವ ಗ್ಲಾಮರಸ್ ಬ್ಯೂಟಿ ತನ್ನ ಗ್ಲಾಮರ್ ನಿಂದಲೇ ಚಂದನವನ ಅಷ್ಟೇ ಅಲ್ಲದೇ ತೆಲುಗು, ತಮಿಳು, ಮಳಯಾಳಂನಲ್ಲಿ ಮೋಡಿ ಮಾಡಿರುವ “ನೀರ್ ದೋಸೆ ಕಣ್ಮಣಿ” ಹರಿಪ್ರಿಯಾ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹರಿಪ್ರಿಯಾ ಅಂದ ತಕ್ಷಣ ನೆನಪಾಗೋದು ಉಗ್ರಂನ ಅವರ ಬಬ್ಲಿ ಅಂಡ್ ಕ್ಯುಟ್ ಲುಕ್. ಹಾಗೇ ನೋಡೋದಾದ್ರೆ ಉಗ್ರಂ ಸಿನಿಮಾದ ಮೂಲಕ ಕನ್ನಡದಲ್ಲಿ ಹರಿಪ್ರಿಯ ಅವರು ಸೆನ್ಷೇಶನ್ ಕ್ರಿಯೇಟ್ ಮಾಡಿಬಿಟ್ಟಿದ್ರು. ಅವರ ನ್ಯಾಚುರಲ್ ಲುಕ್ ಹಾಗೂ ಮುಗ್ಧ ಹುಡುಗಿಯ ನಟನೆಗೆ ಸಿನಿರಸಿಕರು ಫಿದಾ ಆಗಿಬಿಟ್ಟಿದ್ರು. ಈಗಲೂ ಹರಿಪ್ರಿಯಾ ಅನ್ನೋದಕ್ಕಿಂತ ಉಗ್ರಂ ಹರಿಪ್ರಿಯಾ ಅಂತಾನೆ ಅವರನ್ನ ಅಭಿಮಾನಿಗಳು ಕರಿಯೋದು. ಇನ್ನೂ ಹಾಟ್ ಲುಕ್ ಗಳಲ್ಲಿಯೂ ಮಿಂಚಿ ಅಭಿಮಾನಿಗಳ ಮನಗೆದ್ದಿರುವ ಹರಿಪ್ರಿಯಾ ಪರ ಭಾಷೆಗಳಲ್ಲೂ ಜಾದೂ ಮಾಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ಕಲೆಯಲ್ಲಿ ಆಸ್ಕ್ತಿ ಹೊಂದಿದ್ದ ಹರಿಪ್ರಿಯಾಗೆ ಮೊದಲಿಗೆ ತುಳು ಚಿತ್ರದಲ್ಲಿ ಅವಕಾಶ ಒಲಿದಿತ್ತು. ಹರಿಪ್ರಿಯಾ ಅವರು ಪಿಯುಸಿ ಓದುವಾಗಲೇ ಅವರ ಸ್ಟಿಲ್ಸ್ ನೋಡಿ ಮೆಚ್ಚಿದ್ದ ನಿರ್ದೇಶಕ ರಿಚರ್ಡ್ ಕಾಸ್ಟೆಲಿನೋ “ಬದಿ” ತುಳು ಸಿನಿಮಾದ ಮೂಲಕ ಅವರನ್ನ ನಾಯಕಿಯಾಗಿ ಲಾಂಚ್ ಮಾಡಿದ್ರು. ಈ ಚಿತ್ರ ಯಶಸ್ಸು ಕಂಡ ನಂತರ 2008ರಲ್ಲಿ ಮೊದಲ ಬಾರಿಗೆ ಚಂದನವನಕ್ಕೆ ಕಾಲಿಟ್ಟ ಹರಿಪ್ರಿಯ “ಮನಸುಗಳ ಮಾತು ಮಧುರ” ಚಿತ್ರದಲ್ಲಿ ನಟಿಸಿದ್ರು. ನಂತರ ವಸಂತಕಾಲದಲ್ಲೂ ಅಭಿನಯಿಸಿದ್ರು. ಇದಾದ ಬಳಿಕ 2009ರಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಕಳ್ಳರ ಸಂತೆ ಸಿನಿಮಾದಲ್ಲಿ ನಟಿ ಹರಿಪ್ರಿಯಾ ಕಾಣಿಸಿಕೊಂಡ್ರು. ಈ ಚಿತ್ರ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಹರಿಪ್ರಿಯಾ ಅವರ ಫೇಮ್ ಮತ್ತಷ್ಟು ಹೆಚ್ಚಿತು. ಅಲ್ಲದೇ ಈ ಚಿತ್ರದಲ್ಲಿನ ಅತ್ಯದ್ಭುತ ನಟನೆಗಾಗಿ ಹರಿಪ್ರಿಯಾ ಅವರು ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಗೂ ಸಹ ನಾಮಿನೇಟ್ ಆಗಿದ್ದರು. ಬಳಿಕ ಚೆಲುವೆಯೆ ನಿನ್ನ ನೋಡಲು ಸಿನಿಮಾದಲ್ಲಿ ನಟಿಸಿದ್ರು ಹರಿಪ್ರಿಯಾ. ಹೀಗೆ ಚಂದನವನದಲ್ಲಿ ಹೆಸರು ಗಳಿಸಿದ ನಟಿ ಹರಿಪ್ರಿಯಾಗೆ ತಮಿಳು ತೆಲುಗಿನಲ್ಲೂ ಆಫರ್ ಗಳು ಸಿಕ್ಕವು. 2010ರಲ್ಲಿ ತಮಿಳಿನ ಕಾಣಗಾವೇಲ್ ಕಾಕ, ತೆಲುಗಿನ ತಾಕಿತಾ ತಾಕಿತಾ ಚಿತ್ರಗಳಲ್ಲಿ ಅಭಿನಯಿಸಿ ಬಳಿಕ ಕೆಲ ಸಮಯದ ವರೆಗೂ ತೆಲುಗು ತಮಿಳು ಇಂಡಸ್ಟ್ರಿಯಲ್ಲೇ ಬ್ಯುಸಿಯಾಗಿದ್ದ ನಟಿ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿಯಾಗಿದ್ದು ಉಗ್ರಂ ಸಿನಿಮಾ ಮೂಲಕ.

ಚಂದನವನಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ ಹರಿಪ್ರಿಯಾ 2014ರಲ್ಲಿ ತೆರೆಕಂಡ ಉಗ್ರಂ ಸಿನಿಮಾದ ಮೂಲಕ ಟಾಕ್ ಆಫ್ ದ ಟೌನ್ ಆಗಿದ್ರು. ಮುರುಳಿ ಜೊತೆ ಹರಿಪ್ರಿಯಾ ಕಾಂಬಿನೇಷನ್ ಸಖತ್ ಕ್ಲಿಕ್ ಆಗಿ ಈ ಚಿತ್ರ ಸೂಪರ್ ಹಿಟ್ ಆಗಿ ಹೊರಹೊಮ್ಮಿತ್ತು. ಹಾಗೆ ನೊಡಿದ್ರೆ ಉಗ್ರಂ ಸಿನಿಮಾ ಶ್ರೀ ಮುರುಳಿ ಹಾಗೂ ಹರಿಪ್ರಿಯಾ ಅಬ್ಬರಿಗೂ ಕಮ್ ಬ್ಯಾಕ್ ಸಿನಿಮಾ ಅಂದ್ರೆ ತಪ್ಪಾಗೋದಿಲ್ಲ. ಈ ಸಿನಿಮಾ ಬ್ಲಾಕ್ ಬಾಸ್ಟರ್ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಚಿತ್ರದ ನಂತರ ಸಾಲು ಸಾಲು ಕನ್ನಡ ಪ್ರಾಜೆಕ್ಟ್ ಗಳು ಹರಿಪ್ರಿಯಾ ಕೈ ಸೇರಿದ್ವು. ಉಗ್ರಂ ಚಿತ್ರದ ಬಳಿಕ ಸ್ಯಾಮಡಲ್ ವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ್ರು ಹರಿಪ್ರಿಯಾ. ನಂತರ ಬಿಗ್ ಬ್ಯಾನರ್ ಸಿನಿಮಾಗಳಾದ ರನ್ನ, ರಿಕ್ಕಿ, ಬುಲೆಟ್ ಬಸ್ಯಾ, ರಣತಂತ್ರ , ನೀರ್ ದೋಸೆ ಸಿನಿಮಾಗಳಲ್ಲಿ ಹರಿಪ್ರಿಯಾ ಬಣ್ಣ ಹಚ್ಚಿದ್ರು.
2017ರಲ್ಲಿ ತೆರೆಕಂಡ ಭರ್ಜರಿ ಚಿತ್ರದಲ್ಲಿ ಹರಿಪ್ರಿಯಾ ಧ್ರುವ ಸರ್ಜಾ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಂಜನೀಪುತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಯಶಸ್ಸು ಕಂಡಿರುವ ನಟಿ ಹರಿಪ್ರಿಯಾ ಕೈಯ್ಯಲ್ಲಿ ಇನ್ನೂ ಹಲವಾರು ಪ್ರಾಜೆಕ್ಟ್ ಗಳಿವೆ. ಪ್ರಸ್ತುತ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಹರಿಪ್ರಿಯಾ. ಇದಲ್ಲದೇ ಅಮೃತಮತಿ , ತೆಲುಗಿನ ಎವರು ರೀಮೇಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Haripriya
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








