ADVERTISEMENT
Tuesday, February 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

H D Kumaraswamy | ಬಹಿರಂಗ ಚರ್ಚೆ ಮಾಡೋಣ ಬನ್ನಿ : ಹೆಚ್ಡಿಕೆ ಸವಾಲು

Mahesh M Dhandu by Mahesh M Dhandu
October 2, 2022
in Newsbeat, Politics, ರಾಜಕೀಯ
hd-kumaraswamy-slams-ashwath-narayan on twitter

hd-kumaraswamy-slams-ashwath-narayan on twitter

Share on FacebookShare on TwitterShare on WhatsappShare on Telegram

H D Kumaraswamy | ಬಹಿರಂಗ ಚರ್ಚೆ ಮಾಡೋಣ ಬನ್ನಿ : ಹೆಚ್ಡಿಕೆ ಸವಾಲು

ಬೆಂಗಳೂರು : ಬಿಜೆಪಿ ಸರಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಸಚಿವ ಅಶ್ವಥ್ ನಾರಾಯಣ್ ಅವರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Related posts

Just one betel leaf is enough. See how you can pay off even if you have a debt of lakhs, if not crores!

ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

February 3, 2026
Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

February 3, 2026

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಅಭಿವೃದ್ಧಿ ಕೆಲಸ ಎಂದರೇನು ಸಚಿವ ಡಾ.ಅಶ್ವಥ್ ನಾರಾಯಣ್ ? ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೇ ಅನುಭವವೇ ಇದೆ. ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ʼಕಳ್ಳಮಾರ್ಗʼದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು? ಇದೇನಾ ನೀವು ಹೇಳುವ ʼರಾಜಮಾರ್ಗʼ ಎಂದು ಪ್ರಶ್ನಿಸಿದ್ದಾರೆ.

hd-kumaraswamy-slams-ashwath-narayan on twitter
hd-kumaraswamy-slams-ashwath-narayan on twitter

ʼಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು’ ಎಂದು ನಾನು ಭಾವಿಸಿದ್ದಿದ್ದರೆ ನೀವು ಮಲ್ಲೇಶ್ವರದಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಇನ್ನು; ಅಭಿವೃದ್ಧಿ ಬಗ್ಗೆ ಉಪದೇಶ ಮಾಡಿದ್ದೀರಿ, ನಿಮ್ಮ ಮಾದರಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳುವುದು ನನಗೆ ಗೊತ್ತಿಲ್ಲ, ನನ್ನಿಂದ ಆಗುವುದೂ ಇಲ್ಲ.

https://twitter.com/hd_kumaraswamy/status/1576414027806167040?s=20&t=FQpDx45od4pkToXvQ2UBrw

ಸಚಿವ ಡಾ.ಅಶ್ವಥ್ ನಾರಾಯಣ್ ಅವರೇ, ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ. ಹೌದು; ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ  ನಿಮ್ಮಂಥ ಪ್ರಾಜ್ಞರೇ ಆಪರೇಶನ್ ಕಮಲ ಎಂಬ ಪಾಪ ಎಸಗಿದ್ದೇಕೆ? ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದ್ದಿದ್ದು ಯಾಕೆ?

ಅಧಿಕಾರ ಬೇಕಿದ್ದರೆ ನೀವು ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವವರೆಗೂ ಕಾಯಬಹುದಿತ್ತಲ್ಲವೇ? ಆದರೆ, ಹಪಾಹಪಿಯಿಂದ ʼಅಡ್ಡಮಾರ್ಗʼ ಹಿಡಿದಿದ್ದು ಏಕೆ? ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಅಪಹರಿಸಿ ಆಪರೇಷನ್‌ ಕಮಲದ ಸರಕಾರ ಮಾಡಿದ್ದು ಯಾಕೆ? ಇದು ವಾಮಮಾರ್ಗವೋ? ಸನ್ಮಾರ್ಗವೋ? ಸ್ಪಲ್ಪ ಹೇಳಿ ಸಚಿವ ಡಾ.ಅಶ್ವಥ್ ನಾರಾಯಣ್  ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಿಜೆಪಿ ಸರಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಆಗ ಯಾರ ಆತ್ಮಸಾಕ್ಷಿ ಏನು ಎಂಬುದು ಜನರಿಗೂ ತಿಳಿಯುತ್ತದೆ. ʼಎಂಎಲ್‌ಸಿ ಕೋರಿಕೆ ಮೇರೆಗೆ..ʼ ಎಂದು ಬಿಡುಗಡೆ ಮಾಡಿದ 50 ಕೋಟಿ ರೂ. ಒಳಗುಟ್ಟಿನ ಬಗ್ಗೆಯೂ ಚರ್ಚಿಸೋಣ ಬನ್ನಿ. ನಾನು ತಯಾರಿದ್ದೇನೆ ಎಂದು ಸಚಿವರಿಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Tags: #Saaksha TVashwath narayanBJPH D KUMARASWAMYJDS
ShareTweetSendShare
Join us on:

Related Posts

Just one betel leaf is enough. See how you can pay off even if you have a debt of lakhs, if not crores!

ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

by admin
February 3, 2026
0

ಜ್ಯೋತಿಷ್ಯ ಶಾಸ್ತ್ರವು ಒಬ್ಬ ಮನುಷ್ಯನ ಹುಟ್ಟಿನಿಂದ ಸಾ’ವಿ’ನ ತನಕ ಬರುವ ಆತನ ಪಾಲಿಗೆ ಬರುವ ಕ’ಷ್ಟ, ಸುಖ, ದುಃ’ಖ ಗಂಡಾಂತರಗಳ ಬಗ್ಗೆ ಮಾಹಿತಿ ಕೊಡುತ್ತದೆ. ಇದು ನಮ್ಮ...

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

by admin
February 3, 2026
0

ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...

Carrying these two items while going to the temple of the ancestral deity can help us move to the next stage of progress in our lives

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ಈ ಎರಡು ವಸ್ತುಗಳನ್ನು ಹೊತ್ತುಕೊಂಡರೆ ನಮ್ಮ ಜೀವನದಲ್ಲಿ ಮುಂದಿನ ಪ್ರಗತಿಯ ಹಂತಕ್ಕೆ ಹೋಗಬಹುದು.

by admin
February 3, 2026
0

ಜೀವನ ಯಶಸ್ಸಿನ ಕುಲದೈವಂ ಹೂಗಳು ಈ ಜಗತ್ತಿನಲ್ಲಿ ಹುಟ್ಟಿದ ಯಾರಾದರೂ ಪ್ರತಿ ಸೆಕೆಂಡ್ ಮತ್ತು ಪ್ರತಿ ದಿನವೂ ಯಾವುದಾದರೊಂದು ರೂಪದಲ್ಲಿ ಸ್ವಲ್ಪ ಪ್ರಗತಿಯನ್ನು ಸಾಧಿಸಬೇಕು. ಸೂಕ್ತ ಪ್ರಯತ್ನಗಳು...

ನಾಯಕರ ಮುಂದೆ ಗ್ಲಾಮರಸ್ ಆಗಿ ಕಾಣಲು ಹೋಗಬೇಡಿ: ಮೋಟಮ್ಮ ಖಡಕ್ ವಾರ್ನಿಂಗ್

ನಾಯಕರ ಮುಂದೆ ಗ್ಲಾಮರಸ್ ಆಗಿ ಕಾಣಲು ಹೋಗಬೇಡಿ: ಮೋಟಮ್ಮ ಖಡಕ್ ವಾರ್ನಿಂಗ್

by Shwetha
February 3, 2026
0

ಮಂಗಳೂರು: ರಾಜಕೀಯದಲ್ಲಿ ಮಹಿಳೆಯರ ಸ್ಥಾನಮಾನ, ನಡವಳಿಕೆ ಹಾಗೂ ಪ್ರಸ್ತುತ ಸಮಾಜದಲ್ಲಿ ಹೆಣ್ಣುಮಕ್ಕಳ ಪಾಲನೆ ಕುರಿತಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮೋಟಮ್ಮ ಅವರು ನೀಡಿರುವ ಹೇಳಿಕೆ ಈಗ...

ದುಡ್ಡಿದ್ದವರಿಗೆ ಮಾತ್ರ ದರ್ಶನ ಕೊಡ್ತಾರಾ ಗಿಲ್ಲಿ ನಟ ಅತಿಯಾದ ಅಭಿಮಾನವೇ ಈಗ ಸೆಲೆಬ್ರಿಟಿಗೆ ಮುಳುವಾಯ್ತಾ!

ದುಡ್ಡಿದ್ದವರಿಗೆ ಮಾತ್ರ ದರ್ಶನ ಕೊಡ್ತಾರಾ ಗಿಲ್ಲಿ ನಟ ಅತಿಯಾದ ಅಭಿಮಾನವೇ ಈಗ ಸೆಲೆಬ್ರಿಟಿಗೆ ಮುಳುವಾಯ್ತಾ!

by Shwetha
February 3, 2026
0

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು ಅಕ್ಷರಶಃ ಸತ್ಯ. ಅದರಲ್ಲೂ ಅಭಿಮಾನದ ವಿಷಯದಲ್ಲಿ ಇದು ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ಅಭಿಮಾನಿಗಳನ್ನು ದೇವರು ಎನ್ನುತ್ತಾರೆ, ಆದರೆ ಅದೇ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram