ಕೊರೊನಾಸುರನ ಹೊಡೆತಕ್ಕೆ ಸಿಲುಕಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಸಾಂಕ್ರಾಮಿಕ ವೈರಸ್ ಪ್ರಪಂಚದಾದ್ಯಂತ ಹರಡುತ್ತಿರುವುದರಿಂದ ಅಗತ್ಯ ವಸ್ತುಗಳನ್ನು ಖರೀದಿಸಿಲು ಜನರು ಮುಗಿಬೀಳುತ್ತಿದ್ದಾರೆ. ಇವೆಲ್ಲದರ ನಡುವೆ ದೇಶದಲ್ಲಿ ಕಾಂಡೋಮ್ ಮಾರಾಟವು ಕೂಡ ಹೆಚ್ಚಳವಾಗಿದೆಯಂತೆ. ಕಳೆದ ಒಂದು ವಾರದಲ್ಲಿ ಕಾಂಡೋಮ್ ಮಾರಾಟವು ಸುಮಾರು 25% ರಿಂದ 50% ರಷ್ಟು ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಮುಂಬೈನ ವೈದ್ಯಕೀಯ ಅಂಗಡಿ ಮಾಲೀಕರೊಬ್ಬರು ಹೇಳಿರುವ ಪ್ರಕಾರ, ಸಾಮಾನ್ಯವಾಗಿ ಜನರು ಸಣ್ಣ ಪ್ಯಾಕ್ಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಈಗ ದೊಡ್ಡ ಪ್ಯಾಕ್ಗಳ ಬೇಡಿಕೆಯು ಭಾರಿಪ್ರಮಾಣದಲ್ಲಿ ಹೆಚ್ಚಾಗಿದೆ ಅಂತ ಹೇಳಿದ್ದಾರೆ. ಇನ್ನು ಜನರು ಸಾಮಾನ್ಯವಾಗಿ ಮೂರು ಪ್ಯಾಕ್ ಖರೀದಿಸಲು ಬಯಸುತ್ತಾರೆ, ಆದರೆ ಕಳೆದ ವಾರದಲ್ಲಿ ಅವರಲ್ಲಿ ಹೆಚ್ಚಿನವರು 10 ಮತ್ತು 20 ಪ್ಯಾಕ್ಗಳನ್ನು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.
ಇದರಲ್ಲಿ ಕುತೂಹಲಕಾರಿ ಅಂಶವೆನಂದ್ರೆ ಮಹಿಳೆಯರು ಕೂಡ ಈಗ ಕಾಂಡೋಮ್ ಖರೀದಿಸುವುದರಿಂದ ತಲ್ಲಿನಾರಾಗಿದ್ದಾರಂತೆ. ‘ಕಾಂಡೋಮ್ ಖರೀದಿಸುವ ಮಹಿಳೆಯರ ಪ್ರಮಾಣ ಪುರುಷರಿಗಿಂತ ಹೆಚ್ಚಾಗಿದೆ. ಅನೇಕ ಗೃಹಿಣಿಯರು ಸಹ ಕಾಂಡೋಮ್ ಕೇಳುತ್ತಿದ್ದಾರೆ. ಮಾರಾಟದಲ್ಲಿ 15% ಹೆಚ್ಚಳವಿದೆ ಎನ್ನುತ್ತಿದ್ದಾರೆ ವೈದ್ಯಕೀಯ ಅಂಗಡಿ ಹೊಂದಿರುವ ವಿಶಾಲ್ ಜೋಶಿ.







