Hijab controvercy : ನಾಳೆಯಿಂದ 10ನೇ ತರಗತಿ ಪುನಾರಂಭಕ್ಕೆ ಕ್ರಮ…
ಬೆಂಗಳೂರು : ಹೈಕೋರ್ಟ್ ಅಂಗಳದಲ್ಲಿರುವ ಹಿಜಾಬ್ – ಕೇಸರಿ ಶಾಲು ವಿವಾದ ಕೊಂಚ ತಣ್ಣಗಾದ ಹಿನ್ನೆಲೆ ನಾಳೆಯಿಂದ 10ನೇ ತರಗತಿ ಪುನಾರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗ್ತಿದೆ..
ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದಕೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ..
ಕೆಲ ಜಿಲ್ಲೆಗಳಲ್ಲಿ ಶಾಲೆಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ..
ಶಾಲೆಗಳಿಗೆ ಡಿಸಿ, ಎಸ್ಪಿ ಭೇಟಿ ನೀಡಿ ಪರಿಶೀಲನೆಗೆ ಸೂಚನೆ ನೀಡಲಾಗಿದೆ..
ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಕಾಪಾಡಲು ಸೂಚನೆ ನೀಡಲಾಗಿದೆ..
ಅಂದ್ಹಾಗೆ ಪರಿಸ್ಥಿತಿ ಕೈ ಮೀರುವ ಆತಂಕದಲ್ಲಿ ಸರ್ಕಾರ ಇತ್ತೀಚೆಗೆ ಫೆಬ್ರವರಿ 9ರಿಂದ 10 ರಿಂದ 12 ತರಗತಿವರೆಗೆ ರಜೆ ನೀಡಿತ್ತು…
ನಂತರ ಮತ್ತೆ ಕಾಲೇಜುಗಳಿಗೆ ಫೆಬ್ರವರಿ 19ರ ವರೆಗೂ ರಜೆ ವಿಸ್ತರಣೆ ಮಾಡಿದೆ..
ಅಂದ್ಹಾಗೆ ಹೈಕೋರ್ಟ್ ಈ ವಿವಾದದ ಸಂಬಂಧ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ..
ಜೊತೆಗೆ ಮುಂದಿನ ಆದೇಶದ ವರೆಗೂ ಯಾರೂ ಸಹ ಶಾಲೆಗೆ ಧಾರ್ಮಿಕ ಗುರುತುಗಳನ್ನ ಧರಿಸಿ ತೆರಳದಂತೆ ಆದೇಶಿಸಿದೆ…
ಸೋಮವಾರ ಹೈಸ್ಕೂಲ್ ಬಳಿ ಕಟ್ಟೆಚ್ಚರ ವಹಿಸಿ ,,, ಹೆಚ್ಚು ಸಿಬ್ಬಂದಯನ್ನು ಭಯದ್ರತೆಗಾಗಿ ನಿಯೋಜಿಸಿ. ಸಂಘಟನೆಗಳ ಮೇಲೆನಿಗಾ ಇಡಿ.
ಇಲಾಖೆಗಳ ನಡುವೆ ಸಮನ್ವಯ ಇರಲಿ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದಾರೆ..
ಹಿಜಾಬ್ ಮತ್ತು ಕೇಸರಿ ಶಾಲು ವಿಚಾರದಲ್ಲಿ ಅತಿಹೆಚ್ಚು ಗಲಾಟೆಯಾದ ಜಿಲ್ಲೆಗಳ ಶಾಲೆಗಳಿಗೆ ಹೆಚ್ಚು ಭದ್ರತೆ ಒದಗಿಸಿ ಎಂದು ಸೂಚಿಸಿರುವ ಸಿಎಂ ,
ಉಡುಪಿ, ಶಿವಮೊಗ್ಗ, ಬಾಗಲಕೋಟೆ, ಮೈಸೂರು, ಮಂಡ್ಯ, ಬೀದರ್, ಧಾರವಾಡ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಡಿಸಿ, ಎಸ್ಪಿಗಳಗೆ ಈ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ..