Hijab Controvercy : ಯಾದಗಿರಿಯಲ್ಲಿ ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಹೈಡ್ರಾಮಾ
ಯಾದಗಿರಿ : ನ್ಯೂ ಕನ್ನಡ ಕಾಲೇಜ್ ಮುಂಭಾಗದಲ್ಲಿ ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಹೈಡ್ರಾಮಾ ನಡೆಸಿದ್ದಾರೆ… ಯಾದಗಿರಿಯ ನಗರದ ಕನಕ ವೃತ್ತದ ಸಮೀಪದಲ್ಲಿರುವ ನ್ಯೂ ಕನ್ನಡ ಕಾಲೇಜ್ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಗೆ ಪಟ್ಟು ಹಿಡಿದು ಆಕ್ರೋಶ ಹೊರ ಹಾಕಿದ್ಧಾರೆ…
ಹಿಜಾಬ್ ಧರಿಸಿ ಕಾಲೇಜ್ ಒಳಗಡೆ ಬಿಡದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳಿಗೆ ಪೋಷಕರು ಕೂಡ ಸಾಥ್ ನೀಡಿದ್ದು ಕಂಡುಬಂದಿದೆ. ಅಲ್ಲದೇ ನಮ್ಮ ಮಕ್ಕಳು ಹಿಜಾಬ್ ಧರಿಸಿಯೇ ಕಾಲೇಜ್ ಗೆ ಹೋಗುತ್ತಾರೆ ಎಂದು ಪೋಷಕರ ಪಟ್ಟು ಹಿಡಿದಿದ್ದರು..
ಅಷ್ಟೇ ಅಲ್ಲದೇ ಇದೇ ಹೈಡ್ರಾಮಾದ ನಡುವೆ ಕಾಲೇಜ್ ಮುಂಭಾಗದಲ್ಲಿ ಆಗಮಿಸಿದ ಮುಸ್ಲಿಂ ಕಾಂಗ್ರೆಸ್ ಮುಖಂಡರು, ವಿದ್ಯಾರ್ಥಿಗಳ ವಿವಾದವನ್ನೆ ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ್ದು ಕೂಡ ಕಂಡುಬಂದಿದೆ.. ಸದ್ಯ ನ್ಯೂ ಕನ್ನಡ ಕಾಲೇಜ್ ಮುಂಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ..