ಬೆಂಗಳೂರು: ಗುತ್ತಿಗೆದಾರ ಸಚಿನ್ ಬರೆದಿದ್ದ ಡೆತ್ ನೋಟ್‍ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೆಸರಿದೆ. ಪ್ರಿಯಾಂಕ್ ಖರ್ಗೆಗೆ ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್ ಡೆತ್‍ನೋಟ್‍ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರೂ ಇದೆ. ಅ ಈಶ್ವರಪ್ಪ ವಿಚಾರದಲ್ಲಿ ಅವರು ಏನು ಮಾತಾಡಿದ್ರು? ಈಗ ಅದನ್ನು ನೆನಪಿಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗಳಾಗುತ್ತಿವೆ. ವಾಲ್ಮೀಕಿ ನಿಗಮದ ಚಂದ್ರಶೇಖರ್, ದಾವಣೆಗೆರೆಯಲ್ಲಿ ಒಬ್ಬರು ಪಿಸಿ ಹತ್ಯೆ, ರುದ್ರಣ್ಣ, ಸಚಿನ್ ಆತ್ಮಹತ್ಯೆಯಾಗಿದೆ. ವಿಪಕ್ಷವಾಗಿ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಎಲ್ಲಾ ರೀತಿಯ ಹೋರಾಟ ಮಾಡಿದ್ದೇವೆ. ಆದರೆ, ನಮ್ಮ ಮೇಲೆ ಕೇಸ್ ಹಾಕಿ ಹೆದರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಗುಡುಗಿದ್ದಾರೆ.
ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.4ರಂದು ನಾನು ಹಾಗೂ ವಿಜಯೇಂದ್ರ ಸೇರಿದಂತೆ ನಮ್ಮ ಪಕ್ಷದ ಎಲ್ಲ ನಾಯಕರು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ (Power Sharing) ವಿಚಾರವಾಗಿ ಎದ್ದಿರುವ ಗೊಂದಲದ ಅಲೆಗಳು ಇನ್ನೂ ತಣ್ಣಗಾಗಿಲ್ಲ. ಹೈಕಮಾಂಡ್ ಎಷ್ಟೇ ಖಡಕ್...







