ಅಪ್ಘಾನ್ ಮಹಿಳೆಯರ ಶಿಕ್ಷಣದ ಬಗ್ಗೆ ಅನಾಗರಿಕತೆಯ ಹೇಳಿಕೆ ನೀಡಿದ ಪಾಕ್ ಪ್ರಧಾನಿ
ಪಾಕಿಸ್ತಾನ : ಅಫ್ಗಾನಿಸ್ತಾನದ ಮಹಿಳೆಯ ಪಾಲಿಗೆ 2021 ಅತ್ಯಂತ ಕರಾಳ ವರ್ಷ.. ಅವರ ಸ್ವಾತಂತ್ರ್ಯ , ಅವರ ಶಿಕ್ಷಣವನ್ನ ತಾಲಿಬಾಸ್ ರಾಕ್ಷಸರು ಕಸಿದುಕೊಂಡಿರುವ ವರ್ಷ.. ಇಡೀ ವಿಶ್ವಕ್ಕೆ ಗೊತ್ತಿರೋ ಹಾಗೆ ಅಫ್ಗಾನ್ ಅನ್ನ ನರಕ ಮಾಡಿರುವ ತಾಲಿಬಾನಿಗಳಿಗೆ ಪಾಕಿಸ್ತಾನ ಬೆಂಬಲ ನೀಡಿದೆ.. ಇಡೀ ವಿಶ್ವವೇ ತಾಲಿಬಾನಿಗಳಿಗೆ ಉಗಿತ್ತಿದ್ರೆ , ಮಾನ್ಯ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತಾಲಿಬಾನಿಗಳ ಮೇಲೆ ಅದೇನೋ ಅಕ್ಕರೆ ಪ್ರೀತಿ.. ಹಾಗಾಗಿಯೇ ತಾಲಿಬಾನಿಗಳಿಗೆ ಆಗಾಗ ಸಪೋರ್ಟ್ ಮಾಡ್ತಲೇ ಇರುತ್ತಾರೆ..
ಇಮ್ರಾನ್ ಖಾನ್ ಆಗಾಗ ಅನಾಗರಿಕರಂತೆ ಹೇಳಿಕೆ ನೀಡಿಯೇ ಟ್ರೋಲಿಗೆ ಗುರಿಯಾಗುತ್ತಾ , ವಿಶ್ವದಾದ್ಯಂತ ನಗೆ ಪಾಟಿಲಿಗೀಡಾಗುತ್ತಿರುತ್ತಾರೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅವರು ಅತ್ಯಾಚಾರಕ್ಕೆ ಕಾರಣ ಮಹಿಳೆಯರ ಬಟ್ಟೆ ಎಂದಿದ್ದು.. ಅವರ ಆ ಹೇಳಿಕೆ ಇಡೀ ವಿಶ್ವದ ಮಹಿಳೆಯ ಕಣ್ಣು ಕೆಂಪಾಗಿಸಿತ್ತು.. ಇದು ಅವರಿಗೆ ಮಹಿಳೆಯರ ಬಗ್ಗೆ ಇರುವ ಅಭಿಪ್ರಾಯ , ಅವರ ಆಲೋಚನೆಯನ್ನ ತಿಳಿಸಿತ್ತು..
ಈಗ ಇದೇ ಇಮ್ರಾನ್ ಖಾನ್ ಮಹಾಸ್ವಾಮಿಗಳು ಅಫ್ಗಾನ್ ನಲ್ಲಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿರುವ ಬಗ್ಗೆ ಮಾತನಾಡಿದ್ದು , ತಾಲಿಬಾನಿಗಳ ನೀತಿಯನ್ನ ಸಮರ್ಥನೆ ಮಾಡಿಕೊಳ್ತಾ ಅನಾಗರಿಕರಂತೆ ಹೇಳಿಕೆ ನೀಡಿ ಟ್ರೋಲ್ ಆಗ್ತಿದ್ದಾರೆ..
ಇಸ್ಲಾಮಿಕ್ ಸಹಕಾರ ಸಂಘ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡುವ ವೇಳೆ ಇಮ್ರಾನ್ ಖಾನ್, ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸದಿರುವುದು ಆಫ್ಘನ್ ಸಂಸ್ಕೃತಿಯ ಭಾಗ ಎಂದಿದ್ದಾರೆ. ಇದೀಗ ಇದೇ ಕಾರಣಕ್ಕೇ ಟ್ರೋಲ್ ಆಗ್ತಿರುವ ಇಮ್ರಾನ್ ಖಾನ್ ತಮ್ಮ ಜೊತೆಗೆ ತಮ್ಮ ದೇಶವನ್ನೂ ನಗೆಪಾಟಿಲಿಗೀಡಾಗುವಂತೆ ಮಾಡಿದ್ದಾರೆ..
ಮಾನವ ಹಕ್ಕುಗಳ ಸಂಘಟನೆ ಪ್ರಕಾರ 2021 ಅಫ್ಘಾನಿಸ್ತಾನ ಮಹಿಳೆಯರ ಪಾಲಿಗೆ ಕೆಟ್ಟ ವರ್ಷ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವುದರೊಂದಿಗೆ ಮಹಿಳೆಯರಿಗೆ ಸ್ವಾತಂತ್ರ ಕಸಿದ ವರ್ಷವೆಂದು ವರದಿಯಾಗಿದೆ..