ಪಾಕಿಸ್ತಾನದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಭಾರತ – Saaksha Tv
ಪಾಕಿಸ್ತಾನ: ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸರಕಾರ ರಕ್ಷಿಸುತ್ತಿದ್ದು, ಇವರ ಜೊತೆಗೆ ಪಾಕಿಸ್ತಾನ ವಿದ್ಯಾರ್ಥಿನಿಯನ್ನು ಕೂಡ ಸರಕಾರ ರಕ್ಷಣೆ ಮಾಡಿದೆ.
ಪಾಕಿಸ್ತಾನದ ವಿದ್ಯಾರ್ಥಿನಿ ಅಸ್ಮಾ ಶಫೀಕ್ ಅವರನ್ನು ಕೇಂದ್ರ ಸರಕಾರ ಉಕ್ರೇನ್ ನಿಂದ ಸ್ಥಳಾಂತರ ಮಾಡಿದೆ. ಉಕ್ರೇನ್ ರಾಜಧಾನಿ ಕೀವ್‍ನಲ್ಲಿ ಪಾಕ್ನ ಅಸ್ಮಾ ಶಫೀಕ್ ವ್ಯಾಸಂಗ ಮಾಡುತ್ತಿದ್ದರು. ಅವರನ್ನು ಭಾರತೀಯ ರಾಯಭಾರ ಕಚೇರಿ ಸುರಕ್ಷಿತವಾಗಿ ಸ್ಥಳಾಂತರ ಮಾಡಿದೆ.
ಇದೀಗ ಅವರು ವೀಡಿಯೋವೊಂದನ್ನು ಮಾಡಿ ಪ್ರಧಾನಿ ಮೋದಿ ಹಾಗೂ ರಾಯಭಾರ ಕಚೇರಿಗೆ ಅವರು ಧನ್ಯವಾದ ಹೇಳಿದ್ದಾರೆ.
#WATCH | Pakistan's Asma Shafique thanks the Indian embassy in Kyiv and Prime Minister Modi for evacuating her.
Shas been rescued by Indian authorities and is enroute to Western #Ukraine for further evacuation out of the country. She will be reunited with her family soon:Sources pic.twitter.com/9hiBWGKvNp
— ANI (@ANI) March 9, 2022
ವೀಡಿಯೋದಲ್ಲಿ ಅವರು, ಉಕ್ರೇನ್‍ನಲ್ಲಿ ಬಹಳ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿದ್ದೆ. ನಾವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಕೀವ್‍ನಲ್ಲಿ ಭಾರತೀಯ ರಾಯಭಾರಿ ಕಚೇರಿಯವರು ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ. ನಮಗೆ ಕೀವ್‍ನಿಂದ ಪಾರಾಗಲು ಸಹಾಯ ಮಾಡಿದ ಭಾರತೀಯ ರಾಯಭಾರ ಕಚೇರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವನ್ನು ತಿಳಿಸುತ್ತೇನೆ. ನಾವು ಸುರಕ್ಷಿತವಾಗಿ ಮನೆಗೆ ತಲುಪುತ್ತೇವೆ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು.
ಅಸ್ಮಾ ಶಫೀಕ್ ಅವರು ಈಗ ಪಶ್ಚಿಮ ಉಕ್ರೇನ್‍ಗೆ ಹೋಗುತ್ತಿದ್ದಾರೆ. ಅಲ್ಲಿಂದ ಶೀಘ್ರದಲ್ಲೇ ಅವರು ತಮ್ಮ ಕುಟುಂಬದವರನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಭಾರತೀಯ ವಿದ್ಯಾರ್ಥಿಗಳ ಜೊತೆಗೆ ನೇಪಾಳ ಹಾಗೂ ಪಾಕಿಸ್ತಾನದ ಅನೇಕ ವಿದ್ಯಾರ್ಥಿಗಳನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ತಮ್ಮ ದೇಶಗಳ ರಾಯಭಾರ ಕಚೇರಿ ಸರಿಯಾಗಿ ಸ್ಪಂದನೆ ನೀಡದ ಕಾರಣಕ್ಕಾಗಿ ವಿದ್ಯಾರ್ಥಿಗಳು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ.







