ಚೆನ್ನೈ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಮೊದಲ ಪಂದ್ಯವನ್ನು ಭಾರತ ಗೆದ್ದು ಬೀಗಿದೆ. ಈ ಮೂಲಕ 92 ವರ್ಷಗಳ ನಂತರ ಭಾರತ ಸಾಧನೆಯೊಂದನ್ನು ಮಾಡಿದೆ.
2 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ (Bangladesh) ತಂಡವನ್ನು ಸೋಲಿಸುವ ಮೂಲಕ ಸೋಲುಗಳ ಸಂಖ್ಯೆಗಿಂತ ಗೆಲುವಿನ ಸಂಖ್ಯೆ ಹೆಚ್ಚಿಸಿಕೊಂಡು ಭಾರತ (Team India) ಹೊಸ ದಾಖಲೆ ನಿರ್ಮಿಸಿದೆ.
ಭಾರತವು 1932 ರಲ್ಲಿ ಸಿ.ಕೆ ನಾಯ್ಡು ಅವರ ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿತ್ತು. ಆ ಪಂದ್ಯದಲ್ಲಿ 158 ರನ್ ಗಳ ಸೋಲು ಕಂಡಿತ್ತು. ಆ ಪಂದ್ಯದ ನಂತರ, ಭಾರತವು ಸೋಲುಗಳ ಸಂಖ್ಯೆಗಿಂತ ಹೆಚ್ಚಿನ ಗೆಲುವಿನ ಸಂಖ್ಯೆಯನ್ನು ಪಡೆಯಲು ಎಂದಿಗೂ ಯಶಸ್ವಿಯಾಗಿರಲಿಲ್ಲ. ಆದರೆ, ಈಗ ಬಾಂಗ್ಲಾ ವಿರುದ್ಧ 280 ರನ್ ಗಳ ಜಯ ಸಾಧಿಸಿ 92 ವರ್ಷಗಳ ನಂತರ ಗೆಲುವಿನ ಸಂಖ್ಯೆ ಹೆಚ್ಚಿಸಿಕೊಂಡಿದೆ.
ಬಾಂಗ್ಲಾದೇಶದ ವಿರುದ್ಧದ ಜಯವು ಟೆಸ್ಟ್ ಇತಿಹಾಸದಲ್ಲಿ ಭಾರತದ 179ನೇ ಜಯವಾಗಿದೆ. ಇಲ್ಲಿಯವರೆಗೆಆಸ್ಟ್ರೇಲಿಯಾ: 414ರಲ್ಲಿ ಗೆಲುವು; 232 ಸೋಲು ಕಂಡಿದೆ. ಇನ್ನುಳಿದಂತೆ ಇಂಗ್ಲೆಂಡ್: 397 ಗೆಲುವು; 325 ಸೋಲು, ದಕ್ಷಿಣ ಆಫ್ರಿಕಾ: 179 ಗೆಲುವು; 161 ಸೋಲು, ಭಾರತ: 179 ಗೆಲುವು; 178 ಸೋಲು, ಪಾಕಿಸ್ತಾನ: 148 ಗೆಲುವು; 144 ಸೋಲು ಕಂಡ ಸಾಧನೆ ಮಾಡಿವೆ.