INS ವಿಕ್ರಮಾದಿತ್ಯ.. ನೌಕಾಸೇನೆಯ ಆನೆಬಲ..!! INDIAN ARMY
ಹಿಂದಿನ ಸಂಚಿಕೆಗಳಲ್ಲಿ ಭಾರತದ ವಿಶೇಷ ಭದ್ರತಾ ಪಡೆಗಳು ಮತ್ತು ಶ್ವಾನದಳದ ಕಾರ್ಯವೈಖರಿಯ ಬಗ್ಗೆ ನೋಡಿದ್ರಿ. ಈಗ ಭಾರತೀಯ ನೌಕಾಸೇನೆಯ ಯುದ್ಧನೌಕೆಗಳ ಬಗ್ಗೆ ನಿಮಗಾಗಿ ಮಾಹಿತಿ ಹೊತ್ತು ತಂದಿದ್ದೇವೆ. ಭಾರತೀಯ ನೌಕಾಸೇನೆ ಜಲಮಾರ್ಗದ ಮೂಲಕ ದೇಶಕ್ಕೆದುರಾಗುವ ಕಂಟಕಗಳ ಮೇಲೆ ಸದಾ ಕಣ್ಣಿಟ್ಟಿರುತ್ತದೆ. ಭಾರತೀಯ ನೌಕಾಪಡೆ ಜಗತ್ತಿನ ಬಲಿಷ್ಠ ನೌಕಾಪಡೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನು ನಮ್ಮ ನೌಕಾಪಡೆ ಯಲ್ಲಿ ಆಧುನಿಕ ಯುದ್ಧನೌಕೆಗಳು, ಸಬ್ ಮೆರಿನ್ಗಳಿವೆ. ಅದರಲ್ಲೂ ವಿಕ್ರಮಾದಿತ್ಯ ಯುದ್ಧನೌಕೆಯ ಹೆಸರು ಕೇಳಿದ್ರೆ ಸಾಕು ಶತ್ರುಪಾಳಯದಲ್ಲಿ ಸಣ್ಣ ನಡುಕ ಹುಟ್ಟುತ್ತದೆ. ದೇಶದ ಅತಿ ದೊಡ್ಡ ಮತ್ತು ಶಕ್ತಿಶಾಲಿ ಯುದ್ಧನೌಕೆ ಐಎನ್‌ಎಸ್ ವಿಕ್ರಮಾದಿತ್ಯ. 44, 500 ಟನ್ ತೂಕದ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯನ್ನು ರಷ್ಯಾದಿಂದ ಖರೀದಿಸಲಾಗಿದೆ.
೨೦೧೪ ರಲ್ಲಿ ಈ ನೌಕೆ ಭಾರತೀಯ ನೌಕಾಪಡೆಯನ್ನು ಸೇರಿದೆ. ದೇಶದ ವಿಮಾನ ವಾಹಕ ಅತಿದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಪಾತ್ರವಾಗಿದೆ. ಮೂರು ಕಡೆ ಸಾಗರ ಆವರಿಸಿರುವ ಭಾರತದ ರಕ್ಷಣೆಗೆ ವಿಕ್ರಮಾದಿತ್ಯ ಸದಾ ಬದ್ಧ. ಕರ್ನಾಟಕದ ಕಾರವಾರದಲ್ಲಿರುವ ನೌಕಾನೆಲೆ ವಿಕ್ರಮಾದಿತ್ಯ ನೌಕೆಯ ಮೂಲನೆಲೆ. ಏಷ್ಯಾದಲ್ಲಿಯೇ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆಯಾದ ವಿಕ್ರಮಾದಿತ್ಯ, ಸುಮಾರು 44,500 ಟನ್ ತೂಕ, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ.
34 ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ ಗಳನ್ನು ಏಕಕಾಲದಲ್ಲಿ ಹೊರುವ ಸಾಮರ್ಥ್ಯ ಇದಕ್ಕಿದೆ. ಇತ್ತೀಚೆಗಷ್ಟೇ ನಡೆದ ಮಲಬಾರ್ ಸಮರಾಭ್ಯಾಸದಲ್ಲಿ ವಿಕ್ರಮಾದಿತ್ಯ ನೌಕೆ ಬಹುಮುಖ್ಯ ಪಾತ್ರ ವಹಿಸಿತ್ತು. ಈ ನೌಕೆ ೨೮೪ ಮೀಟರ್ ಉದ್ದವಿದ್ದು ೬೦ ಮೀ. ಅಗಲವಿದೆ. ಈ ನೌಕೆಯಲ್ಲಿ ಏಕಕಾಲಕ್ಕೆ ಸುಮಾರು ೭೦೦ ಸಿಬ್ಬಂದಿ ಉಳಿದುಕೊಳ್ಳುವ ಸಾಮರ್ಥ್ಯ ಇದೆ.
ಯುದ್ಧವಿಮಾನ ಬಳಕೆಯ ಅನುಕೂಲತೆಗೆ ಮರೈನ್ ಹೈಡ್ರಾಲಿಕ್ ಸಿಸ್ಟಮ್ ನ್ನು ನೌಕೆಯಲ್ಲಿ ಅಳವಡಿಸಲಾಗಿದೆ. ಇನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಈ ನೌಕೆಯ ರಿಪೇರಿ ಕಾರ್ಯವನ್ನು ಕೇರಳದ ಕೊಚ್ಚಿ ಯಲ್ಲಿರುವ ನೌಕಾನೆಲೆಯಲ್ಲಿ ಮಾಡಲಾಗುತ್ತದೆ. ಇದರಲ್ಲಿರುವ ಇಂಧನ ಟ್ಯಾಂಕ್ಗಳ ಸಹಾಯದಿಂದ ದೀರ್ಘ ಕಾಲದ ಸಮುದ್ರಯಾನಕ್ಕೆ ಅನುಕೂಲ ಎಂದು ಅಧಿಕಾರಿಗಳು ಹೇಳುತ್ತಾರೆ.
೩೫ ಶತಕೋಟಿ ಡಾಕರ್ ಗೆ ರಷ್ಯಾದಿಂದ ಈ ನೌಕೆಯನ್ನು ಖರೀದಿಸಲಾಗಿತ್ತು. ಇನ್ನು ಈ ನೌಕೆಯಲ್ಲಿ ೧ ಸಾವಿರ ಟನ್ ಇಂಧನವನ್ನು ಸಂಗ್ರಹಿಸಿಡಬಹುದು. ಹೀಗೆ ಇಷ್ಟಲ್ಲ ವಿಶೇಷತೆಗಳನ್ನು ಹೊಂದಿರುವ ವಿಕ್ರಮಾದಿತ್ಯ ನೌಕೆ ನಮ್ಮ ನೌಕಾಸೇನೆಗೆ ಬಹುದೊಡ್ಡ ಬಲ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವಿಶೇಷತೆಯೊಂದಿಗೆ ನಿಮ್ಮುಂದೆ ಬರ್ತೀವಿ.