ಐಪಿಎಲ್ ವಿಜೇತ.. ಆರೆಂಜ್ ಕ್ಯಾಪ್.. ಪರ್ಪಲ್ ಕ್ಯಾಪ್ ವಿನ್ನರ್.. ಪ್ರೈಜ್ ಮನಿ ಎಷ್ಟು..?
ಮಿಲಿಯನ್ ಡಾಲರ್ಸ್ ಟೂರ್ನಿ ಇಂಡಿಯನ್ ಪ್ರಿಮಿಯರ್ ಲೀಗ್ ನ ಅಂತಿಮ ಸಮರಕ್ಕೆ ವೇದಿಕೆ ಸಜ್ಜಾಗಿದೆ.
ಈ ಸೀಸನ್ ನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿರುವ ಗುಜರಾತ್ ಟೈಟಾನ್ಸ್.. ಮೆಗಾ ಟೂರ್ನಿಯ ಮೊದಲ ಸೀಸನ್ ನ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಟ್ರೋಫಿಗಾಗಿ ಬಿಗ್ ಬ್ಯಾಟಲ್ ನಡೆಯಲಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನ ಫೈನಲ್ ಬ್ಯಾಟಲ್ ನಲ್ಲಿ ರಾಜಸ್ಥಾನ್ ಮತ್ತು ಗುಜರಾತ್ ತಂಡಗಳು ಗುದ್ದಾಡಲಿವೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾಲ್ಸ್ ಕ್ಯಾಶ್ ರಿಚ್ ಲೀಗ್ ಗೆ ಹೊಸ ತಂಡವಾಗಿದೆ. ಹೀಗಾಗಿ ಮೊದಲ ಸೀಸನ್ ನಲ್ಲಿಯೇ ಕಪ್ ಗೆದ್ದು ಇತಿಹಾಸ ನಿರ್ಮಿಸಲು ಗುಜರಾತ್ ಸಜ್ಜಾಗಿದೆ.
ಇತ್ತ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ ರಾಯಲ್ಸ್ ಐಪಿಎಲ್ ಉದ್ಘಾಟನಾ ಆವೃತ್ತಿಯ ಚಾಂಪಿಯನ್.
ಅದಾದ ಬಳಿಕ ರಾಯಲ್ಸ್ ಇದೇ ಮೊದಲ ಬಾರಿಗೆ ಫೈನಲ್ ತಲುಪಿದೆ. ಅಲ್ಲದೇ ಫೈನಲ್ ನಲ್ಲಿ ಕಪ್ ಗೆಲ್ಲುವ ಮೂಲಕ ತಮ್ಮ ಮೊದಲ ಕ್ಯಾಪ್ಟನ್ ದಿವಂಗತ ಶೇನ್ ವಾರ್ನ್ ಗೌರವ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಎರಡೂ ತಂಡಗಳ ಬಲಾಬಲ ಒಂದೇ ರೀತಿಯಾಗಿದೆ. ಹೀಗಾಗಿ ಇಂದಿನ ಹೋರಾಟ ಸಾಕಷ್ಟು ರಸವತ್ತಾಗಿರಲಿದೆ.
ಇಂದಿನ ಪಂದ್ಯದೊಂದಿಗೆ 15 ನೇ ಸೀಸನ್ ಐಪಿಎಲ್ ಟೂರ್ನಿಗೂ ಶುಭಂ ಕಾರ್ಡ್ ಬೀಳಲಿದೆ.
ಹಾಗಾದ್ರೆ ಐಪಿಎಲ್ ಟೈಟಾನ್ ಗೆಲ್ಲುವ ತಂಡಕ್ಕೆ, ಆರೆಂಜ್ ಕ್ಯಾಪ್ ಹೋಲ್ಡರ್, ಪರ್ಪಲ್ ಕ್ಯಾಪ್ ವಿನ್ನರ್ ಗೆ ಸಿಗುವ ಮೊತ್ತ ಎಷ್ಟು ಗೊತ್ತಾ..?
ಇಂದಿನ ಫೈನಲ್ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ ಆ ತಂಡಕ್ಕೆ 20 ಕೋಟಿ ರುಪಾಯಿ ಪ್ರೈಜ್ ಮನಿ ಸಿಗಲಿದೆ.
ಪ್ರಶಸ್ತಿ ಸುತ್ತಿನಲ್ಲಿ ಸೋತು ರನ್ನರ್ ಅಪ್ ಆಗುವ ತಂಡಕ್ಕೆ 13 ಕೋಟಿ ರುಪಾಯಿ ದಕ್ಕಲಿದೆ.
ಇನ್ನು ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಗೆ ಅಂದ್ರೆ ಆರೆಂಜ್ ಕ್ಯಾಪ್ ಹೋಲ್ಡರ್ ಗೆ 15 ಲಕ್ಷ ರುಪಾಯಿ ಸಿಗಲಿದೆ.
ಈ ರೇಸ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಮೊದಲನೇ ಸ್ಥಾನದಲ್ಲಿದ್ದಾರೆ.
ಅವರು ಇಲ್ಲಿಯವರೆಗೂ ಆಡಿರುವ 16 ಪಂದ್ಯಗಳಲ್ಲಿ 824 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿವೆ.
ಟೂರ್ನಿಮೆಂಟ್ ಒಟ್ಟಾರೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಅಂದ್ರೆ ಪರ್ಪಲ್ ಕ್ಯಾಪ್ ಹೊಲ್ಡರ್ ಗೆ, ಅವಾರ್ಡ್ ಜೊತೆಗೆ 15 ಲಕ್ಷ ರುಪಾಯಿ ಸಿಗಲಿದೆ.
ಈ ರೇಸ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ವನಿಂದು ಹಸರಂಗ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಪೈಪೋಟಿಗೆ ಬಿದ್ದಿದ್ದಾರೆ.
ಹಸರಂಗ ಮತ್ತು ಚಹಾಲ್ ಈ ಸೀಸನ್ ನಲ್ಲಿ ತಲಾ 26 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಆದ್ರೆ ಆರ್ ಸಿಬಿ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಚಹಾಲ್ ಗೆ ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ. ipl-2022-gt-vs-rr-do-you-about-prize-money-details