IPL – Operation RCB..!
ಇದು ಗೊತ್ತಿರುವ ವಿಚಾರ. ಹೊಸತೇನು ಇಲ್ಲ. ಐಪಿಎಲ್ ಅಂತ ತಕ್ಷಣ ಮೊದಲು ನೆನಪಾಗೋದೇ ನಮ್ಮ ಆರ್‍ಸಿಬಿ. ಅಭಿಮಾನಿಗಳು ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ ಅಂತ ಬೀಗುತ್ತಿರುತ್ತಾರೆ. ಆರ್‍ಸಿಬಿ ಸೋಲಲಿ.. ಗೆಲ್ಲಲಿ.. ಕಳೆದ 16 ವರ್ಷಗಳಲ್ಲಿ ಆರ್‍ಸಿಬಿ ಮೇಲಿನ ಪ್ರೀತಿ- ಅಭಿಮಾನ ಒಂಚೂರು ಕಮ್ಮಿಯಾಗಿಲ್ಲ.
ಹೌದು..ಐಪಿಎಲ್ ಮಹಾ ಸಂಗ್ರಾಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಮೂರು ಬಾರಿ ರನ್ನರ್ ಆಪ್ ಆಗಿರೋದೇ ಐಪಿಎಲ್‍ನಲ್ಲಿ ಆರ್‍ಸಿಬಿಯ ಶ್ರೇಷ್ಠ ಸಾಧನೆ. ವಿರಾಟ್ ಕೊಹ್ಲಿಯಂತಹ ವಿಶ್ವ ಶ್ರೇಷ್ಠ ಆಟಗಾರ ತಂಡದಲ್ಲಿದ್ರೂ ಪ್ರಶಸ್ತಿ ಗೆದ್ದಿಲ್ಲ ಅನ್ನೋ ಕೊರಗು ಕಾಡುತ್ತಿದೆ. ಅಷ್ಟೇ ಅಲ್ಲ, ಯುನಿವರ್ಸಲ್ ಬಾಸ್ ಕ್ರೀಸ್ ಗೇಲ್, 360 ಡಿಗ್ರಿ ಖ್ಯಾತಿಯ ಎಬಿಡಿಯಂತಹ ಆಟಗಾರರು ತಂಡದಲ್ಲಿದ್ರೂ ಐಪಿಎಲ್ ಟ್ರೋಫಿ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ಆವೃತ್ತಿಯ ಟೂರ್ನಿಯಲ್ಲೂ ಲೆಕ್ಕಚಾರ ಹಾಕೊಂಡೇ ಆಟಗಾರರನ್ನು ಖರೀದಿ ಮಾಡಿದ್ರೂ ಐಪಿಎಲ್ ನಲ್ಲಿ ಆರ್‍ಸಿಬಿ ಒಂದು ತಂಡವಾಗಿ ಆಡಿದ್ದು ತುಂಬಾನೇ ವಿರಳ.
ಇದೀಗ ಆರ್‍ಸಿಬಿಯಲ್ಲಿ ಮೇಜರ್ ಸರ್ಜರಿಯಾಗಿದೆ. 17ನೇ ಆವೃತ್ತಿಗೆ ಆರ್‍ಸಿಬಿ ಟೀಮ್ ಮ್ಯಾನೇಜ್‍ಮೆಂಟ್ ಈಗಿನಿಂದಲೇ ತಯಾರು ಮಾಡಲು ಶುರುಮಾಡಿದೆ. ಮುಖ್ಯ ನಿರ್ದೇಶಕ ಮೈಕ್É ಹೆÀಸನ್ ಹಾಗೂ ಹೆಡ್‍ಕೋಚ್ ಸಂಜಯ್ ಬಂಗಾರ್‍ಗೆ ಆರ್‍ಸಿಬಿ ಟೀಮ್ ಮ್ಯಾನೇಜ್‍ಮೆಂಟ್ ಗೇಟ್ ಪಾಸ್ ನೀಡಿದೆ. ಹಾಗೇ ನೋಡಿದ್ರೆ ಆರ್‍ಸಿಬಿ ಮ್ಯಾನೇಜ್‍ಮೆಂಟ್ ಈ ಹಿಂದೆಯೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಸೂಚನೆಯನ್ನು ನೀಡಿತ್ತು. ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಒಪ್ಪಂದವನ್ನು ಮುಂದುವರಿಸುವ ಯಾವುದೇ ಪ್ರಕ್ರಿಯೆಯನ್ನು ಕೂಡ ನೀಡಿಲ್ಲ. ಇನ್ನೊಂದೆಡೆ ಯುಜುವೇಂದ್ರ ಚಾಹಲ್ ಅವರನ್ನು ಕೂಡ ಕೈಬಿಟ್ಟಿದೆ.
ಒಟ್ಟಿನಲ್ಲಿ ಆರ್‍ಸಿಬಿ ನೂತನ ಹೆಡ್ ಕೋಚ್ ಮತ್ತು ಹೊಸ ನಿರ್ದೇಶಕನ ಹುಡುಕಾಟದಲ್ಲಿದೆ. ಆದ್ರೆ ಯಾರು ಆಗ್ತಾರೆ ಅನ್ನೋದೇ ಈಗ ದೊಡ್ಡ ಕುತೂಹಲ. ಆರ್‍ಸಿಬಿ ಮ್ಯಾನೇಜ್‍ಮೆಂಟ್ ಭಾರತೀಯ ಕೋಚ್ ಮೆಲೆ ಹೆಚ್ಚು ನಂಬಿಕೆ ಇಡ್ತಾರೋ.. ವಿದೇಶಿ ಕೋಚ್ ಮೇಲೆ ಹೆಚ್ಚು ವಿಶ್ವಾಸವಿಡ್ತಾರೋ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಹಾಗಂತ.. ಆರ್‍ಸಿಬಿಯ ಕೋಚಿಂಗ್ ವಿಭಾಗವನ್ನು ನಿಭಾಯಿಸೋದು ಅಷ್ಟೊಂದು ಸುಲಭದ ಕೆಲಸವಲ್ಲ. ಸಾಕಷ್ಟು ಅನುಭವ, ಪ್ರತಿಭೆ, ತಾಳ್ಮೆಯೂ ಬೇಕೇಬೇಕು. ಅಷ್ಟೇ ಅಲ್ಲ, ಬಲಿಷ್ಠ ತಂಡ ಕಟ್ಟೋ ಸಾಮಥ್ರ್ಯವೂ ಇರಬೇಕು.
ಒಟ್ಟಾರೆ, ಆರ್‍ಸಿಬಿ ಈಗ ಹೊಸ ತಂಡವೊಂದನ್ನು ಕಟ್ಟುವ ವಿಶ್ವಾಸಲ್ಲಿದೆ. ಅದಕ್ಕಾಗಿ ಹುಡುಕಾಟವನ್ನು ನಡೆಸುತ್ತಿದೆ. ಆದ್ರೆ ಯಾರು ಅನ್ನೋದು ಸದ್ಯಕ್ಕಂತೂ ನಿಗೂಢ. ಆದ್ರೂ ಆರ್‍ಸಿಬಿ ತಂಡಕ್ಕೆ ಯಾರು ಹೆಡ್ ಕೋಚ್ ಆಗಬೇಕು..? ಯಾರು ಮುಖ್ಯ ನಿರ್ದೇಶಕನಾಗಬೇಕು..? ಯಾರು ನಾಯಕನಾಗಬೇಕು..? ನಿಮ್ಮ ಅಭಿಪ್ರಾಯಗಳನ್ನು ಮೆಸೆಜ್ ಬಾಕ್ಸ್‍ನಲ್ಲಿ ತಿಳಿಸಬಹುದು.