ಇರಾನ್ ನಲ್ಲಿ ಮುಕ್ತ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇರಾನಿಯರಿ ಸಾಧ್ಯವಾಗದಕ್ಕೆ ವಿಷಾದವಾಗುತ್ತಿದೆ – ಅಮೆರಿಕಾ
ಅಮೆರಿಕಾ : ಇರಾನ್ನ ನೂತನ ಅಧ್ಯಕ್ಷರಾಗಿ ಧರ್ಮಗುರು ಇಬ್ರಾಹೀಮ್ ರೈಸಿ ಆಯ್ಕೆಯಾಗಿರುವ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಅಮೆರಿಕಾ ನೀಡಿರುವ ಪ್ರತಿಕ್ರಿಯೆ ಸಂಚಲನ ಸೃಷ್ಟಿಸಿದೆ. ಇರಾನ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯೋಚಿತ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇರಾನಿಯನ್ನರಿಗೆ ಸಾಧ್ಯವಾಗದಿರುವುದಕ್ಕಾಗಿ ವಿಷಾದವಾಗುತ್ತಿದೆ ಎಂದು ಅಮೆರಿಕಾ ಹೇಳಿದದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮದೇ ನಾಯಕರನ್ನು ಆಯ್ಕೆ ಮಾಡುವ ಇರಾನ್ ಜನತೆಯ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೊಂಡಿದೆ. ಆದ್ರೆ 2015ರ ಇರಾನ್ ಪರಮಾಣು ಒಪ್ಪಂದಕ್ಕೆ ಅಮೆರಿಕ ಮತ್ತೆ ಸೇರ್ಪಡೆಯಾಗುವ ವಿಷಯದಲ್ಲಿ ನಡೆಯುತ್ತಿರುವ ಪರೋಕ್ಷ ಮಾತುಕತೆಗಳನ್ನು ಅಮೆರಿಕ ಮುಂದುವರಿಸುವುದು ಎಂದು ತಿಳಿಸಿದೆ.
ಇರಾನ್ ನಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಧರ್ಮಗುರು ಇಬ್ರಾಹೀಮ್ ರೈಸಿ ಜುಯ ಸಾಧಿಸಿದ್ದಾರೆ. ಈ ಮೂಲಕ ಇರಾನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರೋದಾಗಿ ಘೋಷಣೆಯಾಗಿದೆ. ವಿದೇಶಾಂಗ ಸಚಿವ ಮೊಹಮ್ಮದ್ ಜಾವಾದ್ ಜರೀಫ್ ಶನಿವಾರ ರೈಸಿ ಅವರ ಆಯ್ಕೆಯನ್ನು ಘೋಷಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿತ್ತು. ರೈಸಿ ಅವರ ಪರ 1.78 ಕೋಟಿ ಮತಗಳು ಚಲಾವಣೆಯಾಗಿವೆ. ರೈಸಿ ಅವರ ಪ್ರತಿಸ್ಪರ್ಧಿಯಾಗಿದ್ದ ಮೊಹಸೆನ್ ರೆಝಿ 33 ಲಕ್ಷ ಹಾಗೂ ಹೆಮ್ಮಟ್ಟಿ 24 ಲಕ್ಷ ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖಟ್ಟರ್ ಧರ್ಮಗುರು ಇಬ್ರಾಹಿಂ ರೈಸಿ ಅವರು ಇರಾನ್ ನಲ್ಲಿ ಮುಖ್ಯನ್ಯಾಯಮೂರ್ತಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇರಾನ್ ಅಧ್ಯಕ್ಷ ಚುನಾವಣೆಯಲ್ಲಿ ರೈಸಿ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಈ ಬಾರಿ ಕಡಿಮೆ ಮತದಾನವಾಗಿದ್ದು, ರೈಸಿ ಅವರ ಪರ 1.78 ಕೋಟಿ ಮತ ಚಲಾವಣೆಯಾಗಿತ್ತು. ಅಲ್ಲದೇ ರೈಸಿ ಅವರ ಪ್ರತಿಸ್ಪರ್ಧಿ ಮೊಹಸೆನ್ ರೆಜಿ 33 ಲಕ್ಷ ಮತ ಪಡೆದಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ. ನ್ಯಾಯಾಂಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ರೈಸಿ ಅವರು ಅಧ್ಯಕ್ಷ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಬಡವರಿಗೆ 40 ಲಕ್ಷ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರೈಸಿ ಭರವಸೆ ನೀಡಿದ್ದರು. ರೈಸಿ ಅವರ ಆಯ್ಕೆಗೆ ಶುಭಾಶಯ ಕೋರಿರುವ ಇರಾನ್ ಹಾಲಿ ಅಧ್ಯಕ್ಷ ಮತ್ತು ಅಧ್ಯಕ್ಷೀಯ ಚುನಾವಣೆಯ ಪ್ರತಿಸ್ಪರ್ಧಿ ಹಸನ್ ರೌಹಾನಿ ಅವರು, ಜನರು ತಮ್ಮ ನಾಯಕನನ್ನು ಆರಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದಿದ್ದಾರೆ.







